ಶೇಕ್ಸಪಿಯರನನ್ನು ಕನ್ನಡಕ್ಕೆ ಪರಿಚಯಿಸಿದ ಪ್ರಥಮ ಲೇಖಕರು- ಡೆಪ್ಯೂಟಿ ಚನ್ನಬಸಪ್ಪನವರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಬೆಳೆಸುವುದಕ್ಕೆ ಶಿಕ್ಷಣ ಒಂದೇ ರಾಮಬಾಣ
Deputy Channabasappa, the first writer to introduce Shakespeare to Kannada, said that education is
ಧಾರವಾಡ 11: ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಬೆಳೆಸುವುದಕ್ಕೆ ಶಿಕ್ಷಣ ಒಂದೇ ರಾಮಬಾಣ. ಮೌಲ್ಯ ಶಿಕ್ಷಣವು ಶಿಕ್ಷಣದ ಒಂದು ಪ್ರಮುಖ ಭಾಗವಾಗಿದೆ ಶಿಕ್ಷಕರು ವರ್ಗ ಕೋಣೆಯಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ದೃಷ್ಟಾಂತಗಳನ್ನು ನೀಡಬೇಕು ಎಂದು ವಿಶ್ರಾಂತ ಶಿಕ್ಷಣಾಧಿಕಾರಿಗಳಾದ ವ್ಹಿ ವ್ಹಿ ಬಡಗೇರ ಉಪನ್ಯಾಶ ನೀಡಿದರು. ಅವರು ದೇವರ ಹುಬ್ಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಧಾರವಾಡ ಇವರು ಏರಿ್ಡಸಿದ ದತ್ತಿ ಕಾರ್ಯಕ್ರಮದಲ್ಲಿ ಖಖಐಅ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯನಿವಾರಣಾ ಕುರಿತು ಉಪನ್ಯಾಸ ನೀಡಿದರು. ಗ್ರಾಮೀಣ ಪ್ರದೇಶದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಉತ್ತೇಜಿಸುವ ಸಲುವಾಗಿ ದತ್ತಿ ಇಟ್ಟಿರುವ ವಿಠ್ಠಲ ಜಿ ಕಮ್ಮಾರ ಮತ್ತು ಲಲಿತಾ ವಿ ಕಮ್ಮಾರ ಅವರು 2024 25ನೇ ಸಾಲಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಈ ಶಾಲೆ ವಿದ್ಯಾರ್ಥಿ ಈರಯ್ಯ ಹಿರೇಮಠ ಗೆ ನಗದು ಪುರಸ್ಕಾರದೊಂದಿಗೆ ಗೌರವಿಸಿದರು.
ಮಕ್ಕಳನ್ನು ಉದ್ದೇಶಿಸಿ ಇಂಥ ಪುರಸ್ಕಾರಕ್ಕೆ ಪ್ರತಿ ವರ್ಷ ಬಹಳಷ್ಟು ವಿದ್ಯಾರ್ಥಿಗಳು ಮುಂದೆ ಬರಲಿ ಎಂದು ಪ್ರೇರಣಾದಾಯಕವಾಗಿ ವಿಠಲ ಕಮ್ಮಾರ ಮಾತನಾಡಿದರು.ಡೆಪ್ಯೂಟಿ ಚನ್ನಬಸಪ್ಪ (ಜನನ - ನವೆಂಬರ 1 1833, ಮರಣ - ಜನವರಿ 4 1880) ಚನ್ನಬಸಪ್ಪ ಹುಟ್ಟಿದ್ದು 1 ನವೆಂಬರ್ 1833ರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ. ತಂದೆ ಬಸಲಿಂಗಪ್ಪ ಅಪ್ಪಯ್ಯಪ್ಪ ಧಾರವಾಡ ವೃತ್ತಿಯಿಂದ ವ್ಯಾಪಾರಸ್ಥರು, ತಾಯಿ ತಿಪ್ಪವ್ವ ಶರಣ ಸಂಪ್ರದಾಯದ ಗರತಿ.19 ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ನಾಂದಿ ಹಾಡಿದವರು ಚನ್ನಬಸಪ್ಪನವರು.
ಕನ್ನಡದ ಕುಲ, ನೆಲಗಳ ಉಜ್ವಲ ಅಭಿಮಾನಿಗಳಾಗಿ, ಖ್ಯಾತಿವೆತ್ತ ಶಿಕ್ಷಣ ತಜ್ಞರಾಗಿ, ಗಣಿತ ಶಾಸ್ತ್ರಜ್ಞರಾಗಿ, ಶ್ರೇಷ್ಠ ವಾಗ್ಮಿಗಳಾಗಿ, ಶೇಕ್ಸಪಿಯರನನ್ನು ಕನ್ನಡಕ್ಕೆ ಪರಿಚಯಿಸಿದ ಪ್ರಥಮ ಲೇಖಕರಾಗಿ, ಕರ್ನಾಟಕದ ಪ್ರಥಮ ಮತ್ತು ಪ್ರಮುಖ ಶಿಕ್ಷಣ ತರಬೇತಿ ಸಂಸ್ಥೆಯ ಮೊದಲ ಪ್ರಾಚಾರ್ಯರಾಗಿ, ಶತಮಾನೋತ್ಸವವನ್ನು ಆಚರಿಸಿದ ಕನ್ನಡದ ಏಕಮೇವ ಶೈಕ್ಷಣಿಕ ಮಾಸಿಕ "ಜೀವನ ಶಿಕ್ಷಣ" ಪತ್ರಿಕೆಯ ಸ್ಥಾಪಕರಾಗಿ, ದಕ್ಷ ಡೆಪ್ಯೂಟಿ ಎಜ್ಯುಕೆಶನಲ್ ಇನ್ಸ್ಪೆಕ್ಟರ್ ರಾಗಿ ಅನೇಕ ಕನ್ನಡ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿ ಕನ್ನಡ ಪ್ರಾಥಮಿಕ ಶಿಕ್ಷಣದ ಪಿತಾಮಹರಾಗಿ, ಉಚಿತ ಪ್ರಸಾದನಿಲಯಗಳ ಸ್ಥಾಪನೆಗೆ ಮೂಲ ಪ್ರೇರಕರಾಗಿ, ಕನ್ನಡ ಪುನರುಜ್ಜೀವನ ಕಾರ್ಯದ ಕಾರಣಪುರುಷರಾಗಿ ಬೆಳಗಿದ ಪುಣ್ಯಜೀವಿ ಚನ್ನಬಸಪ್ಪನವರು ಲಿಂಗೈಕ್ಯರಾಗಿ 4-1-1981 ಕ್ಕೆ ನೂರು ವರುಷಗಳಾಗುತ್ತವೆ. ಆ ಸಂದರ್ಭದಲ್ಲಿ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ಇದು ಪ್ರಾಥಮಿಕ ಶಿಕ್ಷಣ ಹಾಗೂ ಶಿಕ್ಷಕ ತರಬೇತಿ ರಂಗದಲ್ಲಿ ಕಾರ್ಯನಿರ್ವಹಿಸುವ ಸೇವಾಸಂಸ್ಥೆಯಾಗಿದೆ.
ಕನ್ನಡದ ಪುನರುಜ್ಜೀವನ ಮತ್ತು ಶಿಕ್ಷಣ ಪ್ರಸಾರ ಕಾರ್ಯದ ಶಕಪುರುಷರಾದ ನಾಡಿನ ಏಳಿಗೆಗೆ ತಮ್ಮನ್ನೇ ಅರ್ಿಸಿಕೊಂಡ "ಕನ್ನಡದ ದೀಪ" ಡೆಪ್ಯೂಟಿ ಚನ್ನಬಸಪ್ಪನವರ ನೆನಹು ನಮಗೆಲ್ಲ ಸ್ಪೂರ್ತಿದಾಯಕವಾಗುದೆ. ಸಾಹಿತಿಗಳಾದ ನಾರಾಯಣ ಭಜಂತ್ರಿ ಯವರು ಡೆಪುಟಿ ಚನ್ನಬಸಪ್ಪನವರ ಪರಿಚಯ ಮಾಡಿಕೊಟ್ಟರು.ಶಶಿಧರ ದಮ್ಮಳ್ಳಿ ಅಧ್ಯಕ್ಷತೆ ವಹಿಸಿದ್ದರು ವಿದ್ಯಾರ್ಥಿನಿಯರಾದ ನಮ್ರತಾ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹೇಳಿದರು. ಸಪ್ನಾ ಕುರಿಯವರ ಸ್ವಾಗತಿದಿದರು. ವಿದ್ಯಾ ಜೋಶಿ ನಿರೂಪಿಸಿದರು, ಎಚ್ ಎಮ್ ಸೋಮನಾಥ ವಂದಿಸಿದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 