ಉತ್ತಮ ಮಾನಸಿಕ ಆರೋಗ್ಯ, ಉತ್ತಮ ದೈಹಿಕ ಆರೋಗ್ಯಕ್ಕೆ ಪೂರಕ: ಮನೋವೈದ್ಯ ಡಾ. ಶೀತಲ ಶಿಂಧೆ..!
Good mental health is a complement to good physical health: Psychiatrist Dr. Sheetal Shinde..!
ಕಾಗವಾಡ 11 : ಮಹಿಳೆಯರು ತಮ್ಮ ದೈನಂದಿನ ಜವಾಬ್ದಾರಿಗಳ ಜೊತೆಗೆ ಸ್ವಂತ ಖುಷಿಗಾಗಿ ಸಮಯವನ್ನು ಮೀಸಲಿಡಬೇಕು. ಸಣ್ಣ-ಸಣ್ಣ ಕ್ಷಣಗಳನ್ನೂ ಆನಂದಿಸುತ್ತ, ಒತ್ತಡದಿಂದ ದೂರವಿರಬೇಕು. ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ, ದೈಹಿಕ ಆರೋಗ್ಯವೂ ಸ್ವಯಂ ಉತ್ತಮವಾಗಿರುತ್ತದೆಂದು ನಿರ್ಮಲ ಆಸ್ಪತ್ರೆಯ ಮನೋವೈದ್ಯೆ ಡಾ. ಶೀತಲ ಶಿಂಧೆ ಹೇಳಿದ್ದಾರೆ. ಅವರು, ಸೋಮವಾರ ದಿ. 9 ರಂದು ಸಮೀಪದ ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ದಿನಾಚರಣೆ ನಿಮಿತ್ಯ ಕೆಕ್ ಕತ್ತರಿಸಿ, ಮಾತನಾಡುತ್ತಿದ್ದರು.
ಮನೆ ಕೆಲಸದಲ್ಲಾಗಲ್ಲಿ ಅಥವಾ ಮನೆ ಹೊರಗಿನ ಉದ್ಯೋಗದಲ್ಲಾಗಲ್ಲಿ ಮಹಿಳೆ ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ಎಲ್ಲ ಕೆಲಸಗಳನ್ನು ಸಮತೋಲನವಾಗಿ ನಿಭಾಯಿಸಬಲ್ಲಳು. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ದುರ್ಗಾದೇವಿಯ ಅವತಾರವೆಂದೇ ಪರಿಗಣಿಸಲಾಗುತ್ತದೆ. ಆಕೆಯ ಪ್ರೀತಿ, ದಯೆ ಮತ್ತು ಶಿಸ್ತಿನ ಸ್ವಭಾವದಿಂದಾಗಿ, ಕುಟುಂಬವನ್ನು ಒಟ್ಟಿಗೆ ಇಟ್ಟು, ಸಮಾಜದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಇಂದು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಮತ್ತು ತಮಗಾಗಿ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ ಎಂದರು.
ನಿರ್ಮಲ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜರೀನಾ ಸೈಯದ್ ಮಾತನಾಡಿ, ಮಹಿಳೆಯಾಗಿ ಹುಟ್ಟುವುದು ಹೆಮ್ಮೆಯ ವಿಷಯ. ಇಂದಿನ ಆಧುನಿಕ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮರ್ಥಳಾಗಿದ್ದು, ಆತ್ಮವಿಶ್ವಾಸದಿಂದ ಬೀಗುತ್ತಿದ್ದಾಳೆ. ಪ್ರತಿಯೊಬ್ಬ ಮಹಿಳೆಯರು ಖಿನ್ನತೆಯಿಂದ ದೂರವಿರುದ್ದು, ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಬೇಕು. ಒಬ್ಬ ಮಹಿಳೆ ಸಕಾರಾತ್ಮಕವಾದರೆ, ಅವಳ ಇಡೀ ಕುಟುಂಬ ಮತ್ತು ಸುತ್ತಲಿನ ಪರಿಸರವೂ ಸಹ ಸಕಾರಾತ್ಮಕವಾಗಿರುತ್ತದೆ. ಮತ್ತು ಸಂತೋಷದಿಂದ ಕೂಡಿರುತ್ತದೆ ಎಂದರು.
ನಿರ್ಮಲ ಆಸ್ಪತ್ರೆಯ ಡಾ. ದೀಪಕ ಮುಕಾದಮ್ ಮಹಿಳೆಯರಿಗಾಗಿ ವಿಶೇಷ ಹಾಡುಗಳನ್ನು ಹಾಡುವ ಮೂಲಕ ತಾಯಿ, ಸಹೋದರಿ, ಹೆಂಡತಿ ಹೀಗೆ ಹಲವಾರು ಪಾತ್ರಗಳನ್ನು ಮಹಿಳೆ ಎಷ್ಟು ಸುಲಭವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾಳೆ ಎಂಬುದರ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ನಿರ್ಮಲ ಆಸ್ಪತ್ರೆಯ ವೈದ್ಯರು, ಮನೋಶಾಸ್ತ್ರಜ್ಞರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 