ಬಳ್ಳಾರಿ,ಅ 13: ಎರಡು ತಿಂಗಳಲ್ಲಿ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಮನವಿ ಮಾಡಿದ್ದೇವೆ. ಮೀಸಲಾತಿಯಲ್ಲಿ ವಿಷಯದಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ನಗರದಲ್ಲಿಂದು ವಾಲ್ಮೀಕಿ ಜಯಂತಿ ಆಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ಸಿಗಿಬೇಕು ಆದರೆ ನ್ಯಾ.ನಾಗಮೋಹನ್ ದಾಸ್ ಅವರು ಸಕರ್ಾರಕ್ಕೆ ವರದಿ ಸಲ್ಲಿಸಲಾಗಿಲ್ಲ. ಅದೇ ವರದಿಯನ್ನು ಇಂದು ಸಲ್ಲಿಸಲು ಚರ್ಚೆ ನಡೆಸಲಾಗಿದೆ.2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಾಲ್ಮೀಕಿ ಜಯಂತೋತ್ಸವ ಆಚರಣೆ ಮಾಡುವದಾಗಿ ಘೋಷಣೆ ಮಾಡಿದರು.ಅಂದಿನಿಂದ ರಾಜ್ಯದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದರು.
ಮೆಡಿಕಲ್ ಸೀಟುಗಳ ಬ್ಲಾಂಕಿಂಗ್ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಮೇಶ್ವರ್ ಮನೆ ಹಾಗೂ ಕಚೇರಿಗಳ ಮೇಲೆ ಧಾಳಿ ನಡೆಸ ಲಾಗಿದೆ.ಆ ತನಿಖೆಗೆ ಎಲ್ಲರೂ ಸಹಕಾರ ನೀಡಬೇಕು.ರಮೇಶ್ ಆತ್ಮಹತ್ಯೆ ಪ್ರಕರಣ ದಲ್ಲಿ ಸರ್ಕಾರದ ಮೇಲೆ ಹಾಕೋದು ಸರಿಯಲ್ಲ ಎಂದು ಶ್ರೀರಾಮುಲು ಅವರು ಹೇಳಿದರು.
ನಿಮಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಕೆಲಸ ಬಿಟ್ಟು ಬಿಡಿ. ಖಾಸಗಿ ಕ್ಲಿನಿಕ್ನಲ್ಲೇ ಉತ್ತಮ ಸಂಬಳ ಸಿಗುತ್ತದ ಅಲ್ವಾ? ಎಂದು ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.