ಜೀವ ಜಲ ಅಮೂಲ್ಯವಾದದ್ದು ಮಿತವಾಗಿ ಬಳಸಿ -ಆಸಿಫ್‌ಅಲಿ

ಜೀವ ಜಲ ಅಮೂಲ್ಯವಾದದ್ದು ಮಿತವಾಗಿ ಬಳಸಿ -ಆಸಿಫ್‌ಅಲಿ Water is precious, use it sparingly - Asif Ali

ಕೊಪ್ಪಳ 16: ನೀರು ಜೀವ ಜಲ ಅಮೂಲ್ಯವಾದದ್ದು ಇದನ್ನು ಪ್ರತಿಯೊಬ್ಬರು ಮಿತವಾಗಿ ಬಳಸಬೇಕು ಎಂದು ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಹಾಗೂ ಹಿರಿಯ ನ್ಯಾಯವಾದಿ ಎಸ್ ಆಸೀಫ್ ಅಲಿ ಅಭಿಪ್ರಾಯಪಟ್ಟರು, ಅವರು ಶನಿವಾರ ನಗರದ ಜವಾಹ ರಸ್ತೆ ಬಳಿ ಇರುವ ಪ್ರಮುಖ ಯೂ ಸೋಫಿಯಾ ಮಸೀದಿ ಆವರಣದಲ್ಲಿ ಎಂ ಎಸ್ ಪಿ ಎಲ್ ಪೆಲ್ಲೆಟ್ ಪ್ಲಾಂಟ್ ಬಲ್ದೋಟ ವತಿಯಿಂದ ಸುಮಾರು  ಅಂದಾಜು ಒಂದುವರಿ ಲಕ್ಷ ರೂಪಾಯಿ  ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರೋ ಪ್ಲಾಂಟ್ ಅಳವಡಿಕೆ ಸಮಾರಂಭ ದಲ್ಲಿ ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡು ಮಾತನಾಡಿದರು,

ಮುಂದುವರಿದು ಮಾತನಾಡಿ ಶುದ್ಧ ಕುಡಿಯುವ ನೀರು ಪೂರೈಕೆ ಇಂದಿನ ಅಗತ್ಯವಾಗಿದೆ, ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯವಾಗಿರಲು ಶುದ್ಧ ಕುಡಿಯುವ ನೀರು ಪೂರೈಕೆ ಅತ್ಯಗತ್ಯವಾಗಿದ್ದು ಈ ದಿಶೆಯಲ್ಲಿ ಸಮಾಜದ ಮನವಿಗೆ ಸ್ಪಂದಿಸಿ ಎಂ ಎಸ್ ಪಿ ಎಲ್ ಬಲ್ದೋಟ  ಸಂಸ್ಥೆಯವರು ಮಸೀದಿ ಆವರಣ ದಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿರುವುದು ಅತ್ಯಂತ ಅಭಿನಂದನಾರ್ಹವಾಗಿದೆ ಎಂದು ಅವರು ಸಮಾಜದ ಪರವಾಗಿ ಸಂಸ್ಥೆಯ ಮುಖ್ಯಸ್ಥರಿಗೆ ಅಭಿನಂದಿಸಿದರು, ಆರೋಪ್ಲಾಂಟ್ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭೋತ್ಸವ ಸಮಾರಂಭದಲ್ಲಿ  ಬಡೋಟ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಉಪಾಧ್ಯಕ್ಷರಾದ ಹೆಚ್ ಕೆ ರಮೇಶ್ ಎ ಜಿ ಎಂ, ರವಿ ಬಸಗಪ್ಪಿ, ಶಾದಿ ಮಹಲ್ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಅಬ್ದುಲ್ ಅಜಿಜ್ ಚೌತಾಯಿ ಸಮಾಜದ ಹಿರಿಯ ಮುಖಂಡ ಹಾಗೂ  ನಗರಾಭಿವೃದ್ಧಿಪ್ರಾಧಿಕಾರದ ಸದಸ್ಯ ಬಾಶು ಸಾಬ್ ಖತೀಬ್ ನಗರಸಭೆಯ ಮಾಜಿ ಸದಸ್ಯ ಅಕ್ಬರ್ ಪಾಷಾ ಪಲ್ಟನ್,

ಬಾಬಾ ಅರಗಂಜಿ ಸಮಾಜದ ನಾಯಕರಾದ ಸೈಯದ್ ನಾಶಿರುದ್ದೀನ್ ಹುಸೇನಿ, ಸಮಾಜದ ಯುವ ನಾಯಕರಾದ ಸಲೀಂ ಅಳವಂಡಿ ಅನೇಕರು ಪಾಲ್ಗೊಂಡಿದ್ದು ಮಸೀದಿ ಕಮಿಟಿ ಅಧ್ಯಕ್ಷರಾದ ಸೈಯದ್ ಯಜದಾನಿ ಪಾಷಾ ಖಾದ್ರಿ ರವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಸೀದಿ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರೋ ಪ್ಲಾನ್ ಉಚಿತವಾಗಿ ಅಳವಡಿಕೆ ಮಾಡಿ ಮಸೀದಿಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲ ಮಾಡಿರುವುದಕ್ಕೆ ಮಸೀದಿಯ ಆಡಳಿತ ಮಂಡಳಿ ಪರವಾಗಿ ಅವರನ್ನು ಅಭಿನಂದಿಸಿದರು ಹಾಗೂ ಅಳವಡಿಕೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಶುಭ ಕೋರಿದರು, ಈ ಸಂದರ್ಭದಲ್ಲಿ ಸಂಸ್ಥೆಯ ಬಸವಪ್ರಭು ಪಾಟೀಲ್ ಮತ್ತು ಶ್ರೀನಿವಾಸ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,