ಕಿರ್ಲೋಸ್ಕರ್ ಕಾರ್ಖಾನೆ ಯಿಂದ ಬೇವಿನ ಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಜಮೀನು ದಾನ

ಕಿರ್ಲೋಸ್ಕರ್ ಕಾರ್ಖಾನೆ ಯಿಂದ ಬೇವಿನ ಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಜಮೀನು ದಾನ Kirloskar Factory donates land to Nevina Village Government High School

ಕೊಪ್ಪಳ 16: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (ಕೆಏಫ್‌ಐಎಲ್) ಸಂಸ್ಥೆಯು ಸಮಾಜದ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹದ ಅಂಗವಾಗಿ ಶನಿವಾರದಂದು ಬೇವಿನಹಳ್ಳಿ ಸರ್ಕಾರಿ ಪ್ರೌಡಶಾಲೆಗೆ ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಚಟುವಟಿಕಗಳ ಅಭಿವೃದ್ಧಿಗಾಗಿ 1 ಎಕರೆ 30 ಗುಂಟೆ ಜಮೀನನ್ನು ದಾನ ಮಾಡಿ ಹಸ್ತಾಂತರಿಸಿದೆ ಎಂದು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಕಾರ್ಖಾನೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,ಈ ಜಮೀನನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಶಿಕ್ಷಣದ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ನೀಡಲಾಗಿದೆ.

ಈ ರೀತಿಯ ಕಾರ್ಯಕ್ರಮಗಳು ಗುಣಮಟ್ಟದ ಶಿಕ್ಷಣಕ್ಕೆ ಸುಲಭ ಪ್ರವೇಶ ಕಲ್ಪಿಸುವಲ್ಲಿ ಹಾಗೂ ಸರ್ಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಬೆಂಬಲ ನೀಡುವಲ್ಲಿ ಕೆಎಫ್‌ಐಎಲ್ ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ ಎಂದು ವಿವರಿಸಿದರು,ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಮತ್ತು ಬೇವಿನಹಳ್ಳಿ ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳು ಹಾಗೂ ಗ್ರಾಮದ ಹಿರಿಯರು ಮತ್ತು ಸ್ಥಳಿಯ ಪ್ರತಿನಿಧಿಗಳು, ಕೆಎಫ್‌ಐಎಲ್ ಸಂಸ್ಥೆಯ ಉದಾರ ಸಹಕಾರಕ್ಕೆ ಕೃತಜ್ಞತೆ ತಿಳಿಸಿರುತ್ತಾರೆ.

ಈ ಜಮೀನನ್ನು ಶಾಲಾ ಮೂಲಸೌಕರ್ಯದ ಅಭಿವೃದ್ಧಿ, ಆಟದ ಮೈದಾನ ನಿರ್ಮಾಣ ಹಾಗೂ ಇತರೆ ಶೈಕ್ಷಣಿಕ ಉದ್ದೇಶಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ ಇಂದಿನ ಹಾಗೂ ಭವಿಷ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ.ಈ ಸಂದರ್ಭದಲ್ಲಿ  ಮಾನವ ಸಂಪನ್ಮೂಲ ಮತ್ತು ಸಾ. ಆಡಳಿತ ಉಪಾಧ್ಯಕ್ಷ ಶಿವಯ್ಯ ಬಿ ಸ್ವಾಮಿ ಹಾಗೂ  -ಮಾನವ ಸಂಪನ್ಮೂಲ ವಿಭಾಗ ದ ಹಿರಿಯ ಪ್ರಧಾನ ವ್ಯವಸ್ಥಾಪಕ ಕಿರಣ್ ಸೇಜೆ ಕರ ಮಾತನಾಡಿ ಶಿಕ್ಷಣಾಭಿವೃದ್ಧಿ, ಗ್ರಾಮೀಣ ಉನ್ನತಿಕರಣ, ಶಾಶ್ವತ ಸಮುದಾಯ ಮತ್ತು ಸುಸ್ಥಿರ ಕಲ್ಯಾಣ ಕಾರ್ಯಕ್ರಮಗಳತ್ತ ಕೆಎಫ್‌ಐಎಲ್ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು, ಇದೇ ಸಂದರ್ಭದಲ್ಲಿ ಮಾನವ ಸಂಪನ್ಮೂಲ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಶಶಿಕಾಂತ್ ಬಿರಾದರ್ ಹಾಗೂ ಸಿ ಎಸ್ ಆರ್ ವ್ಯವಸ್ಥಾಪಕ ಉದ್ದವ್ ಕುಲಕರ್ಣಿ,  ಉಪಸ್ಥಿತರಿದ್ದರು.

ಗ್ರಾಮದ ಹಿರಿಯರಾದ  ಬೀಮಣ್ಣ ಮೂಲಿಮನಿ, ಎಸ್ ಬಿ ಬಸವರಾಜ, ಮಾರ್ಕಂಡಪ್ಪ ಅಸ್ಕರ್, ಯಂಕನಗೌಡ ಪಾಟೀಲ್, ಮುದ್ದಪ್ಪ ಗೊಂಡಿಹೊಸಳ್ಳಿ, ನಾಗರಾಜ ಬಿ, ಬಸವರಾಜ ಮಡ್ಡಿ, ಮಾರುತಿ ಬಿ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕೆಎಫ್‌ಐಎಲ್ ಸಂಸ್ಥೆಯು ತನ್ನ ಕಾರ್ಯಚರಣೆ ಪ್ರದೇಶಗಳಲ್ಲಿ ಶಿಕ್ಷಣ ಆರೋಗ್ಯ, ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ ಹಾಗೂ ಸಮುದಾಯ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸಮಾಜಾಬಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೇವಿನಹಳ್ಳಿ ಗ್ರಾಮಸ್ಥರು ಕಾರ್ಖಾನೆಯ ಸದರಿ ಕ್ರಮಕ್ಕೆ ತನ್ನ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು,