ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ

ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ Shivananda Neelannavar arrested on charges of fraud and transfer of thousands of crores

ಬೆಳಗಾವಿ : ನಗರದ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಡಾ. ಶಿವಾನಂದ ನೀಲಣ್ಣವರ್ ವಿರುದ್ಧ ಸಾವಿರಾರು ಕೋಟಿ ರೂ ವಂಚನೆ ಹಾಗೂ ವರ್ಗಾವಣೆ ಆರೊಪದಡಿಯಲ್ಲಿ ಎಫ್ ಐ ಆರ್ ದಾಖಲಾದ ಹಿನ್ನೆಲೆಯಲ್ಲಿ ನೀಲಣ್ಣವರ  ಅವರನ್ನು ಬಂಧನ‌ ಮಾಡಲಾಗಿದೆ.

   ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಗೆ ವಂಚಿಸಿ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಿನ್ನೆ ಶಿವಂ ಅಸೋಸಿಯೇಟ್ ಕಚೇರಿ ಮೇಲೆ ಎಸಿ, ಸಹಕಾರ ಇಲಾಖೆ ಅಧಿಕಾರಿಗಳು  ದಾಳಿ ನಡೆಸಿದ್ದರು.

   ಇಂದು ಕಚೇರಿ, ಮನೆ, ಅಪಾರ್ಟ್ಮೆಂಟ್ ಸೀಜ್ ಮಾಡಿದ್ದ ಪೊಲೀಸರು. ಶಿವಾನಂದ ನೀಲಣ್ಣವರ್ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲು. ಬಡ್ಸ್ ಆ್ಯಕ್ಟ್ ಸೆಕ್ಷನ್ 21 ಮತ್ತು ಕೆಪಿಐಡಿ ಸೆಕ್ಷನ್ 9 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. 

    ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಸೂಚನೆ ಮೇರೆಗೆ ದೂರು ದಾಖಲಾಗಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಜಬಿವುಲ್ಲಾ ಕೆ. ನೀಡಿದ ದೂರಿನನ್ವಯ ಕೇಸ್ ದಾಖಲು‌ಮಾಡಲಾಗಿದೆ.

   ಶಿವಾನಂದ ನೀಲಣ್ಣವರ್ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ಆಗಿದೆ. 2016ರಲ್ಲಿ ಶಿವಂ ಅಸೋಸಿಯೇಟ್ ಎಂಬ ಹೆಸರಿನ ಸಂಸ್ಥೆ ಪ್ರಾರಂಭಿಸಲಾಗಿದೆ. ನಿಯಮ ಬಾಹಿರವಾಗಿ ಯಾವುದೇ ಪರವಾನಿಗೆ ಪಡೆಯದೇ ಕಾನೂನು ಪಾಲಿಸದೇ 35 ಸಾವಿರ ಜನರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿದೆ.

    ಸಾರ್ವಜನಿಕರು ಹೂಡಿಕೆ ಮಾಡಿದ ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿ  ಲಾಭ ನೀಡುವುದಾಗಿ ಆಮಿಷ ಒಡ್ಡಲಾಗಿದೆ.ಸಾವಿರಾರು ಕೋಟಿ ಹಣವನ್ನ ಸಂಗ್ರಹ ಮಾಡಿ ಅದರಲ್ಲಿ ಭಾಗಶಃ ಮೊತ್ತವನ್ನು ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಸಾರ್ವಜನಿಕರಿಗೆ ಮೋಸ ವಂಚನೆ ಮಾಡುತ್ತಿರುವ ಅಪರಾಧ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಸಲಾಗಿದೆ.

  ಬೆಳಗಾವಿಯ ಶಿವಬಸವ ನಗರದಲ್ಲಿರುವ ಶಿವಾನಂದ ನಿವಾಸದಲ್ಲಿ ಮಧ್ಯಾಹ್ನದಿಂದಲೂ ಮನೆಯಲ್ಲಿ ಮುಕ್ಕಾಂ ಹೂಡಿದ್ದರು.    ಶಿವಾನಂದ ನೀಲಣ್ಣವರ್ ಮೇಲೆ‌ ಎಫ್ಐಆರ್ ದಾಖಲು ಹಿನ್ನೆಲೆ ಶಿವಾನಂದ ನಿವಾಸಕ್ಕೆ ಆಗಮಿಸಿದ ಮಾಳಮಾರುತಿ ಪೊಲೀಸರು, ತನಿಖಾಧಿಕಾರಿಯಾಗಿರುವ ಮಾರ್ಕೆಟ್ ಎಸಿಪಿ ಸಂತೋಷ ಸತ್ಯನಾಯಕ್, ಸಿಪಿಐ ಬಿ.ಆರ್ ಗಡ್ಡೇಕರ್ ಆಗಮನ ಬಳಿಕ ನಿವಾಸದಲ್ಲಿ ಶಿವಾನಂದ ನೀಲಣ್ಣವರ್ ಪೊಲೀಸ್ ವಶಕ್ಕೆ ಪಡೆದಿದ್ದಾರೆ. 

  ಬಳಿಕ ನೀಲಣ್ಣನವರ ಅವರನ್ನು ಮಾಳಮಾರುತಿ ಠಾಣೆಗೆ ಕರೆತರಲಾಗಿದ್ದು,  ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಠಾಣೆಗೆ ಆಗಮಿದ್ದಾರೆ.ಠಾಣೆಯಲ್ಲಿ ಶಿವಾನಂದ ನೀಲಣ್ಣವರ್ ತೀವ್ರ ವಿಚಾರಣೆ ನಡೆಲಾಗುತ್ತಿದೆ.

 ನೀಲಣ್ಣನವರ ಬಂಧನದ ಬಗ್ಗೆ ಎಸಿ ಶ್ರವಣ್ ನಾಯಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಶಿವಂ ಅಸೋಸೆಯೆಟ್ ಕಂಪನಿ ಮೇಲೆ ದಾಳಿ‌‌ ಮಾಡಲಾಗಿದೆ.

     ಸಹಕಾರ ಇಲಾಖೆ ಅಧಿಕಾರಿಗಳು, ಪೊಲೀಸರು ಸೇರಿದಾಳಿ ಮಾಡಲಾಗಿದೆ. ದಾಳಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುತ್ತದೆ.

   ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಹಕಾರ ಇಲಾಖೆ ಅಧಿಕಾರಿಗಳಿಂದ ಎಫ್ ಐ ಆರ್ ದಾಖಲಾಗಿದೆ. ಶಿವಾನಂದ ನೀಲಣ್ಣವರ್ ಬಂಧನ ಆಗಿದೆ. ಹಣ ಅಕ್ರಮವಾಗಿ ವರ್ಗಾವಣೆ ಆಗಿದೆ‌. ಆರ್ ಬಿ ಐ ರೂಲ್ಸ್ ಸಂಪೂರ್ಣವಾಗಿ ಉಲ್ಲಂಘನೆ ಆಗಿದೆ. 

    ಠೇವಣಿದಾರರ ಬಗ್ಗೆ ಪರಿಶೀಲನೆ ನಡೆದಿದೆ. ಜಿಲ್ಲಾಧಿಕಾರಿಗಳು ನಾಳೆ ಎಲ್ಲವನ್ನೂ ಬಹಿರಂಗ ಮಾಡ್ತಾರೆ. ಹಣ ವರ್ಗಾವಣೆ ಬಗ್ಗೆ ತನಿಖೆ ಮಾಡ್ತಿವಿ ಎಂದು ನುಡಿದರು. 

     ಈ ಬಗ್ಗೆ ಶಿವಾನಂದ ನೀಲಣ್ಣವರ್ ಹೇಳಿಕೆ ನೀಡಿದ್ದು, ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಅದು ಸತ್ಯನೋ‌ ಸುಳ್ಳು ನನಗೆ ಗೊತ್ತಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಲ್ಲರಿಗೂ ಖುಷಿ ಸಿಗಲಿ. ಭಾರತದ ಜನತೆಗೆ ಒಳ್ಳೆಯದಾಗಲಿ ಎಂದ ನೀಲಣ್ಣವರ್

ಓಂನಮಃ ಶಿವಾಯ ಎಂದು ಕೈ ಮುಗಿದ ಹೊರಟರು.