ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
Hunnur Vitthal Temple, submerged in Hidkal backwaters, freed from waterlogging
ಪಾರೇಶ ಭೋಸಲೆ
ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಘಟಪ್ರಭಾ ನದಿಯ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಹುನ್ನೂರಿನ ವಿಠಲ ದೇವರ ಮಂದಿರಕ್ಕೆ ಜಲದಿಗ್ಭಂಧನದಿಂದ ಮುಕ್ತಿಯಾಗಿದ್ದು, ಜನ ಮತ್ತೆ ವಿಠಲನ ದರ್ಶನ ಭಾಗ್ಯ ದೊರೆಯಬಹುದು ಎನ್ನುವ ಕಾತುರದಲ್ಲಿದ್ದಾರೆ.
ಮಹಾರಾಷ್ಟ್ರ ಅರಣ್ಯಪ್ರದೇಶಗಳಿಂದ ಹರಿದು ಬರುವದು ಘಟಪ್ರಭಾ ನದಿಯ ನೀರು ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಕಟ್ಟಲಾದ ಹಿಡಕಲ್ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರು ಹುನ್ನೂರು ಗ್ರಾಮದ ಬಳಿಯ ಘಟಪ್ರಭಾ ನದಿಯ ಹಿನ್ನೀರಿನಲ್ಲಿ ವಿಠಲ ದೇವನ ಮಂದಿರವು ಮುಳುಗಡೆಯಾಗುತ್ತದೆ.
ಬಳಿಕ ಬೇಸಿಗೆಯ ದಿನಗಳಲ್ಲಿ ಘಟಪ್ರಭಾ ನದಿನೀರನ್ನು ಮುಂದಿನ ಊರುಗಳಿಗೆ ಘಟಪ್ರಭಾ ನದಿ ಮೂಲಕ ಹಾಗೂ ಕಾಲುವೆಗಳ ಮೂಲಕ ನೀರು ಹರಿಸಿದಾಗ ಇದರಿಂದ ಜಲಾಶಯದಲ್ಲಿ ನೀರಿನಮಟ್ಟವು ಅತಿಯಾಗಿ ಕಡಿಮೆ ಆದಾಗ ಹುನ್ನೂರು ವಿಠಲ ದೇವನ ಮಂದಿರ ಹಾಗೂ ಮೂರ್ತಿಯ ದರ್ಶನ ಭಾಗ್ಯವು ಭಕ್ತರಿಗೆ ದೊರೆಯುತ್ತದೆ.
ಅದೇ ರೀತಿಯಾಗಿ ಸದ್ಯ ಹಿಡಕಲ್ ಜಲಾಶಯದ ಹಿನ್ನೀರು ಕಡಿಯಾಗಿದ್ದು, ನೀರಿನಲ್ಲಿ ಮುಳಗಡೆಯಾಗಿದ್ದ ವಿಠಲನ ದೇವಸ್ಥಾನವು ಅರ್ಧ ಬಾಗ ತೆರವುಗೊಂಡಿದ್ದು, ಜನರು ಮತ್ತೆ ವಿಠಲನ ಮಂದಿರ ನೋಡಲು ತೆರಳುವಂತಾಗಿದೆ.
ಮುಂಬರುವ ದಿನಗಳಲ್ಲಿ ಮುಂಗಾರು ಮಳೆ ಒಂದು ವೇಳೆ ಲೇಟಾಗಿ ಆಗಮಿಸಿದರೆ ವಿಠಲನ ದರ್ಶನ ಬಾಗ್ಯ ಲಭ್ಯವಾಗಲಿದೆ.
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು 