24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
Police crack car theft case in 24 hours: Search underway to find culprits
ಬೆಳಗಾವಿ : ಮನೆ ಅಂಗಳದಲ್ಲಿ ನಿಲ್ಲಿಸಿಲಾಗಿದ್ದ 29 ಲಕ್ಷ ಮೌಲ್ಯದ ಕಾರುಗಳು ಕಳ್ಳತನವಾದ 24 ಗಂಟೆಗಳಲ್ಲಿ ಪತ್ತೆ ಹಚ್ವಿರುವ ಬೆಳಗಾವಿ ಎಪಿಎಮ್ ಸಿ ಪೊಲೀಸರು ಕಾರುಗಳನ್ನು ವಶಕ್ಕೆ ಪಡೆದು, ಕಳ್ಳತನ ಮಾಡಿ ಕಾರು ಬಿಟ್ಟು ಪರಾರಿಯಾಗಿರುವ ಖದೀಮರ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.
ನಗರದ ಎ.ಪಿ.ಎಮ್.ಸಿ ಪೊಲೀಸ್ ರು ಕಾರ್ಯಾಚರಣೆ ನಡೆಸಿ 29,00,000 ಲಕ್ಷ ರೂ. ಮೌಲ್ಯದ ಎರಡು ಕಾರುಗಳು ವಶಕ್ಕೆ ಪಡೆದಿದ್ದಾರೆ. ದಿ. 10ರಂದು ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ಹದ್ದಿಯ ಪ್ರೀಯಾಂಕಾ ಚೇತನ ಅಜರೇಕರ (ಸಾ: ಹನುಮಾನ ನಗರ ಬೆಳಗಾವಿ) ಇವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ಕೀಯಾ ಸೆಲ್ಟ್ಸ್ ಪಾಯ್ ಸೀಟರ ಕಾರ ನಂ: ಕೆಎ-22, ಎಮ್‌ಸಿ 8122 ಕಳ್ಳತನವಾಗಿರುವ ಬಗ್ಗೆ ಎ.ಪಿ.ಎಮ್.ಸಿ ಪೊಲೀಸ್ ಠಾಣೆ ಗುನ್ನಾ ನಂ: 82/2026 ಕಲಂ 303(2) ಭಾರತೀಯ ನ್ಯಾಯ ಸಂಹಿತ್-2023 ನೇದ್ದಕ್ಕೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇತ್ತು.
ಈ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಪೊಲೀಸ್ ಉಪ ಆಯುಕ್ತರು (ಕಾ.ಸು) ಪೊಲೀಸ್ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಹಾಗೂ ಸಹಾಯಕ ಪೊಲೀಸ್ ಆಯುಕ್ತರು, ಖಡೇಬಜಾರ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಎಪಿಎಮ್ ಸಿ ಪಿಐ ಯು.ಎಸ್.ಆವಟಿ ಇವರ ನೇತೃತ್ವದ ತಂಡವು ದಿ. 12ರಂದು ಈ ಪ್ರಕರಣದಲ್ಲಿ ಕಳ್ಳತನವಾದ ಕಾರನ್ನು ಮಹಾರಾಷ್ಟ್ರದ ಮುಂಬೈಗೆ ಹೋಗಿ ಪ್ರಕರಣ ದಾಖಲಾಗಿ 24 ಗಂಟೆಯಲ್ಲಿ ಪತ್ತೆ ಮಾಡಿದ್ದಾರೆ.
ಅಲ್ಲದೇ ಧಾರವಾಡ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಕಳ್ಳತನವಾದ ಹುಂಬೈ ಕಂಪನಿಯ ಕಾರನ್ನು ಸಹ ಪತ್ತೆ ಮಾಡಿದ್ದು ಈ ಎರಡು ಕಾರಗಳನ್ನು ಕಳ್ಳತನ ಮಾಡಿದ ಆರೋಪಿತರು ಎರಡು ಕಾರಗಳನ್ನು ಬಿಟ್ಟು ಪರಾರಿಯಾಗಿದ್ದು ಅವರನ್ನು ಪತ್ತೆ ಮಾಡುವ ತನಿಖೆಯ ಕೆಲಸ ಮುಂದುವರೆದಿದೆ.
ಈ ಪ್ರಕರಣ ಪತ್ತೆ ಮಾಡುವಲ್ಲಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ಪಿಎಸ್ ಐ ಎಸ್.ಕೆ ಹೊಳೆನ್ನವರ, ಎ.ಎಸ್.ಐ, ಎಮ್.ಎ.ಪಾಟೀಲ ಹಾಗೂ ಸಿಬ್ಬಂದಿ ಜನರಾದ ಡಿ.ಸಿ.ಸಾಗರ, ಬಸವರಾಜ ನರಗುಂದ, ಗೋವಿಂದಪ್ಪ ಪೂಜಾರ, ರಫೀಕ ಮುಜಾವರ, ಶಿವಾಜಿ ಚವ್ಹಾಣ, ರಮೇಶ ಪಾಟೀಲ ಇವರು ಪ್ರಶಂಸನೀಯ ಕೆಲಸ ಮಾಡಿದ್ದು, ಇವರಿಗೆ ಪೊಲೀಸ್ ಆಯುಕ್ತರು, ಪೊಲೀಸ್ ಉಪ ಆಯುಕ್ತರು (ಕಾ ಮತ್ತು ಸು) ಹಾಗೂ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಇವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 