ಕೊಪ್ಪಳ 06: ನಗರದ ಬಾಜಾರ್ ಏರಿಯಾದಲ್ಲಿರುವ ಪ್ರಮುಖ ಯೂಸೂಫಿಯಾ ಮಸೀದಿ ಆಡಳಿತ ಮಂಡಳಿ ವತಿಯಿಂದ ಇತ್ತೀಚಿಗಷ್ಟೆ ರಾಜ್ಯ ವಕ್ಫ್ ಸಲಹಾ ಮಂಡಳಿಗೆ ರಾಜ್ಯ ಸದಸ್ಯರಾಗಿ ನೇಮಕಗೊಂಡಿರುವ ಇಲ್ಲಿನ ಹಿರಿಯ ನ್ಯಾಯವಾದಿ ಆಸೀಫ್ ಅಲಿ ಅವರಿಗೆ ಸನ್ಮಾನಿಸಿ ಮನವಿ ಪತ್ರ ಅಪರ್ಿಸಲಾಯಿತು.
ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಸಯ್ಯದ್ ಹಜರತ್ ಪಾಷಾ ಖಾದ್ರಿ ಅಲಿಯಾಸ್ ಹಜ್ಜು ಖಾದ್ರಿಯವರು ಮಸೀದಿ ಕಮೀಟಿ ಪರವಾಗಿ ಆಸೀಫ್ ಅಲಿ ಅವರನ್ನು ಸನ್ಮಾನಿಸಿ ಮನವಿ ಪತ್ರ ಅರ್ಪಿಸಿ ರಾಜ್ಯ ವಕ್ಫ್ ಮಂಡಳಿ ವತಿಯಿಂದ ಸಿಗಬಹುದಾದ ಅನುದಾನ ಸೇರಿದಂತೆ ಸಹಾಯ ಸೌಕರ್ಯವನ್ನು ಮಸೀದಿಯ ಅಭಿವೃದ್ಧಿ ಕೆಲಸಕ್ಕೆ ಸರಕಾರದ ವಿಶೇಷ ಅನುದಾನ ಮತ್ತು ವಕ್ಫ್ ಇಲಾಖೆಯ ವಿಶೇಷ ಅನುದಾನ ಒದಗಿಸಿಕೊಡಲು ಮನವಿ ಪತ್ರ ಅಪರ್ಿಸಲಾಯಿತು.
ಸಮಾರಂಭದ ಸಾನಿಧ್ಯವನ್ನು ಮುಸ್ಲಿಂ ಧರ್ಮಗುರು ಮತ್ತು ಯೂಸೂಫಿಯಾ ಮಸೀದಿಯ ಪೇಶ ಇಮಾಮ್ ಮೌಲಾನಾ ಮುಫ್ತಿ ಮೊಹ್ಮದ್ ನಜೀರ್ ಅಹ್ಮದ್ ಖಾದ್ರಿ-ವ-ತಸ್ಕೀನಿ ವಹಿಸಿದ್ದು, ಮುಸ್ಲಿಂ ಸಮಾಜದ ಪ್ರಮುಖರು, ಜನಪ್ರತಿನಿಧಿಗಳು, ಮಸೀದಿ ಕಮೀಟಿಯ ಪದಾಧಿಕಾರಿಗಳು, ವಿವಿಧ ಸಂಘಟನೆಯ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.