ಶಿಗ್ಗಾವಿ15 : ತಾಲೂಕಿನ ಗೊಟಗೋಡಿ ಉತ್ಸವ್ ರಾಕ್ ಗಾರ್ಡನಗೆ ಆಕಸ್ಮಿಕ ಭೇಟಿ ನೀಡಿದ ಕೇಂದ್ರ ಸಚಿವರು ಹಾಗೂ ಕರ್ನಾಟಕ ಸರಕಾರದ ಮಾಜಿ ಮುಖ್ಯ ಮಂತ್ರಿಗಳಾದ ಡಿ ವಿ ಸದಾನಂದಗೌಡ ಅವರನ್ನು ತಾಲೂಕಾ ಭಾ.ಜ.ಪ ಅದ್ಯಕ್ಷ ಶಿವಾನಂದ ಮ್ಯಾಗೇರಿ ನೇತೃತ್ವದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ, ಮಾಯಕೊಂಡ ಶಾಸಕ ಲಿಂಗಣ್ಣ, ಬ್ಯಾಡಗಿ ಶಾಸಕ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಜಿಪಂ ಸದಸ್ಯ ಪರಮೇಶಪ್ಪ ಮೇಗಳಮನಿ, ಉತ್ಸವ್ ರಾಕ್ ಗಾರ್ಡನ್ ರೂವಾರಿ ಇ ಬಿ ಸೊಲಬಕ್ಕನವರ, ದೇವಣ್ಣ ಚಾಕಲಬ್ಬಿ, ಎಪಿಎಂಸಿ ನಾಮನಿದರ್ೇಶಿತ ಸದಸ್ಯ ಯಲ್ಲಪ್ಪ ಬಗಾಡೆ, ಮುಖಂಡರಾದ ಶಿವಾನಂದ ಸೊಬರದ, ಫಕ್ಕೀರಗೌಡ ಭರಮಗೌಡ್ರ, ರೇವಣಸಿದ್ದಪ್ಪ ಸೊರಟೂರ, ವಿರುಪಾಕ್ಷಗೌಡ ಪಾಟೀಲ ಸೇರಿದಂತೆ ಭಾಜಪದ ನೂರಾರು ಕಾರ್ಯಕರ್ತರು ಇದ್ದರು.