ಕಾಯಿಪಲ್ಲೆ ಸೋಸುವ ದಿನ ಖರೀದಿ ಜೋರು

Vijaypur-Indi news

ಇಂಡಿ 29: ಎಳ್ಳಾಮಾಸಿ ಉತ್ತರ ಕರ್ನಾಟದ  ರೈತರ  ಬಹು ದೊಡ್ಡ ಹಬ್ಬ ಹಾಗೂ  ಇದರ  ಹಿಂದಿನ ದಿನ  ಅಂದರೆ ಇಂದು ಕಾಯಿ ಪಲ್ಲೆ  ಖರೀದಿಸುವದು ಹಾಗೂ ಬಿಡಿಸುವದು ಅಥವಾ ಕಾಯಿಪಲ್ಲೆ ಸೋಸುವದೇ ಎಂದೇ ಕರೆಯುವದು ಒಂದು ದೊಡ್ಡ ಸಂಭ್ರ್ರಮ. 

ಮಾಘ ಮಾಸದಲಿ ಹೇರಳವಾಗಿ ಸಿಗುವ  ಕಾಯಿಪಲ್ಲೆ  ಮಿರಿ ಮಿರಿ ಮಿಂಚುವ ಮೆಂತೆ , ಪುಂಡಿ ಪಲ್ಲೆ ,ಅಚ್ಚ ಹಸಿರಿನಂತೆ ಕಾಣುವ ಪಾಲಕ,  ಸಬ್ಬಸಗಿ,  ಉಳ್ಳಾಗಡ್ಡಿ , ತಪ್ಪಲ,  ಗಜ್ಜರಿ, ಎಳೆ ಮೆಣಸುನಕಾಯಿ,  ಎಣ್ಗಾಯಿಗೆ ಸಣ್ಣ ಬದನೆಕಾಯಿ ಕಾಯಿ ಆರಿಸುವದು  ಹಸಿ ಖಾರಕ್ಕೆ ಬಲಿತ ಮೆಣಸಿನಕಾಯಿ ಬೇರೆ ಮಾಡುವದು,  ಎಣ್ಣಿಯೊಳಗ ಉಪ್ಪ ಹಚ್ಚಿ ಹುರಿಯಕಂತ ಎಳಿ ಮೆಣಸಿನಕಾಯಿ ಬ್ಯಾರೆ ಮಾಡುವದು, ಎಳಿ ಹುಣಸೆಕಾಯಿ ಬಿಡಿಸಿ ಇಡುವದು  ಕಾಳುಗಳನ್ನು ನೆನಸಿಡೊದು ಇದಕ್ಕೆಲ್ಲ ಹಬ್ಬದ ದಿನ  ಸಮಯವಿರದಿರುವುದರಿಂದ ಹಿಂದಿನ ದಿನವೇ ಎಲ್ಲ ತಯಾರಿ ಮಾಡುವರು.