ವಿಜಯದಶಮಿ: ಶಮಿ ವೃಕ್ಷಕ್ಕೆ ಪೂಜೆ

ಗೋಕಾಕ 20: ವಿಜಯದಶಮಿ ಹಬ್ಬ ನಿಮಿತ್ಯ ನಗರದ ಬಣಗಾರದಲ್ಲಿಯ ಶಂಕರಲಿಂಗ ದೇವರ ಪಲ್ಲಕ್ಕಿ ಉತ್ಸವದೊಂದಿಗೆ 'ಜ್ಞಾನ ಮಂದಿರ' ಆಧ್ಯಾತ್ಮ ಕೇಂದ್ರದ ಹತ್ತಿರವಿರುವ ಶಮಿ ವೃಕ್ಷದ ದೇವಸ್ಥಾನದ ವರೆಗೆ ವಾಧ್ಯಗಳೊಂದಿಗೆ ನೂರಾರು ಭಕ್ತಸಮೂಹದೊಂದಿಗೆ ತೆರಳಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬಣ್ಣಿ ಮುರಿಯುವ ಸಂಪ್ರದಾಯದ ಧಾಮರ್ಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

                ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಆದಿಶಕ್ತಿ ದುಗರ್ಾಮಾತೆ ಒಂಬತ್ತು ಅವತಾರಗಳನ್ನು ಧರಿಸಿ ಧರೆಯಲ್ಲಿರುವ ದುಷ್ಟ ರಾಕ್ಷಸಿ ಶಕ್ತಿಗಳನ್ನು ಸಂಹಾರ ಮಾಡುವ ಮೂಲಕ ಜನತೆಯ ಸುಖ-ಶಾಂತಿ, ನೆಮ್ಮದಿಯ ಜೀವನಕ್ಕೆ ದಾರಿ ತೋರಿಸಿದ್ದಾಳೆ. ನಮ್ಮಲ್ಲಿರುವ ಒಂಬತ್ತು ದುಗರ್ುಣಗಳನ್ನು ಶಿಷ್ಠ ಮನಸ್ಸಿನಿಂದ ಹೊಡೆದೊಡಿಸಬೇಕೆಂಬ ಸಂದೇಶವು ಇದರಲ್ಲಿದೆ ಎಂದು ಹೇಳಿದ ಅವರು ದುಗರ್ಾ ಪೂಜೆಯು ಸ್ತ್ರೀ ಶಕ್ತಿಯ ಮಹಿಮೆಯ ಸಂಕೇತ ಎಂದರು. ಪವಿತ್ರವಾದ ಹಿಂದೂ ಹಬ್ಬವನ್ನು ವಿಶಿಷ್ಟ ರೀತಿಯಿಂದ ಆಚರಣೆಗೆ ರೂಪರೇಶೆಗಳನ್ನು ಮುಂದಿನ ದಿನಗಳಲ್ಲಿ ಹಾಕಲಾಗುವದೆಂದು ಹೇಳಿದರು.

                ಬಣಗಾರ ಸಮಾಜ ಅಧ್ಯಕ್ಷ ಬಿ. ಎಮ್. ಕುಬಸದ, ಆಯ್.ವಿ. ಕೌತನಾಳಿ, ಪ್ರೋ. ರಾಜಶೇಖರ ಗುಣಕಿ, ಪ್ರೋ. ಜಿ.ಎಮ್. ಅಂದಾನಿ ಅವರುಗಳು ಮಾತನಾಡಿ ಬಂಗಾರದ ಸ್ವರೂಪದಲ್ಲಿ ನೀಡುವ ಬಣ್ಣಿಗೆ ನಿಜವಾದ ಅರ್ಥಕಲ್ಪಿಸಲು ಬಡ ವಿದ್ಯಾಥರ್ಿಗಳ ವಿದ್ಯಾರ್ಜನೆಗೆ ಆಥರ್ಿಕ ಸಹಾಯ ಮಾಡುವ ಮೂಲಕ ಅವರ ಬಾಳು ಬಂಗಾರವಾಗುವಂತೆ ಮಾಡಿದರೆ ನಿಜವಾದ ಬಂಗಾರ ನೀಡದಂತಾಗುತ್ತದೆ ಎಂದು ಹೇಳಿ ವಿದ್ಯಾಥರ್ಿಗಳಿಗೆ ಧನ ಸಹಾಯ ನೀಡಲು ಕೋರಿದರು.

                ಹಿರಿಯರಾದ ಗುರು ಮೂತರ್ೆಲಿ, ಬಿ.ಎಮ್. ಹಿಂಡಿಹೊಳಿ, ವಿರುಪಾಕ್ಷಿ ಅಂದಾನಿ, ಎಮ್.ಬಿ. ಬೂತಿ, ರಾಜಶೇಖರ ಬಿಳ್ಳೂರ, ಮಲ್ಲಿಕಾಜರ್ುನ ಎಂಡಿಗೇರಿ, ಗುರುಪುತ್ರ ಕೊಳಕಿ, ಅರುಣ ಹಾಗರಗಿ, ವಿ.ಟಿ. ಹಾಗರಗಿ, ವಿನಾಯಕ ರಾವುಳ, ವಿಶ್ವನಾಥ ಭರಬರಿ, ಶ್ರೀಶೈಲ ಭರಬರಿ, ಜಗದೀಶ ಗುಲ್ಲ, ಪ್ರಕಾಶ ಆಲತಗಿ, ಜಗದೀಶ ಕಲಬುಗರ್ಿ, ಮಹಾದೇವಪ್ಪ ದೇಶನೂರ, ಕುಬೇರಪ್ಪ ಭೂತಿ, ಬಸವರಾಜ ಕರಾಡಕರ, ವಜ್ರಕಾಂತ ಸೊಗಲಿ, ರಾಜೇಶ್ವರಿ ಆಲತಗಿ, ಶಿವಲೀಲಾ ಆಲತಗಿ, ನಗರಸಭೆ ಸದಸ್ಯದೆಯಾದ ಶೀಲಾ ಬಿಳ್ಳೂರ, ಮಿನಾಕ್ಷಿ ಗುಲ್ಲ, ಅನೀಲ ಹಾಲಭಾಂವಿ, ರೂಪಾ ಮೂತರ್ೆಲಿ, ಸಾವಳಿಗೆಪ್ಪಾ ನಂದಗಾಂವಿ, ಶ್ರೀಶೈಲ ಪೂಜಾರಿ, ಮಹಾಂತೇಶ ಮಠಪತಿ ಮುಂತಾದವರು ಉಪಸ್ಥಿತರಿದ್ದರು.