ವಿಜಯಪುರ; ನಾಗಠಾಣ ಕೆರೆಗೆ ಬಾಗಿನ ಅರ್ಪಣೆ

ಲೋಕದರ್ಶನ ವರದಿ

ವಿಜಯಪುರ 07: ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆಯಾಗಿ ಬರಗಾಲ ಆವರಿಸಿಜರುವ ಈ ಸಂದರ್ಭದಲ್ಲಿ ಕೂಡ ನಾಗಠಾಣ ಗ್ರಾಮದ ಬೃಹತ್ ಕೆರೆ ಮುಳವಾಡ ಏತನೀರಾವರಿ ಯೋಜನೆಯ ನೀರಿನಿಂದ ಸಂಪೂರ್ಣ ಭರ್ತ್ಯಾಗಿದ್ದು, ಗ್ರಾಮಸ್ಥರು ಶನಿವಾರ ಈ ಕೆರೆ ತುಂಬಲು ಕಾರಣರಾದ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಬಾಗಿನ ಅಪರ್ಿಸಿ ಸಂಭ್ರಮಿಸಿದರು.

ಮಸೂತಿ ಮೂರನೇ ಹಂತದ ಜಾಕವೆಲ್ನಿಂದ ನೀರೆತ್ತಿ ವಿಜಯಪುರ ಮುಖ್ಯಕಾಲುವೆ ಮೂಲಕ ಹರಿಸಿ, ಶಾಖಾ ಕಾಲುವೆ ಮೂಲಕ ನಾಗಠಾಣ ಕೆರೆ ತುಂಬಿಸಲಾಗುತ್ತಿದ್ದು, ಈ ಕೆರೆ ತುಂಬಿ ಅಥಗರ್ಾ ಬಾಂದಾರಗಳಿಗೆ ನೀರು ಹರಿಯುತ್ತಿದೆ. 

ನಾಗಠಾಣ, ಅಲಿಯಾಬಾದ, ಅಥರ್ಗಾ, ಬೆನಕನಹಳ್ಳಿ, ತಾಂಬಾ ಗ್ರಾಮಗಳಿಗೆ ಈ ಕೆರೆ ವರದಾನವಾಗಿದೆ. ಜ್ಞಾನಯೋಗಾಶ್ರಮ ಬಸವಲಿಂಗ ಸ್ವಾಮಿಜಿ, ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಮುಖಂಡರಾದ ಸೋಮನಾಥ ಕತ್ನಳ್ಳಿ, ಚಂದ್ರಶೇಖರ ಅರಕೇರಿ, ಡಾ.ಕೆ.ಬಿ.ನಾಗೂರ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.