ವಿಜಯಪುರ: ಅಂಬಾದಾಸಗೆ ವಿಜಯಪುರ ರತ್ನ ಪ್ರಶಸ್ತಿ

ಲೋಕದರ್ಶನ ವರದಿ

ವಿಜಯಪುರ 12: ನಗರದ ಶಿವಾಜಿ ವೃತ್ತದ ಗಜಾನನ ಮಂಡಳಿ ವತಿಯಿಂದ ಸಾಧನೆಗೈದ ವ್ಯಕ್ತಿಗಳಿಗೆ ವಿಜಯಪುರ ರತ್ನ ಪ್ರಶಸ್ತಿ ನೀಡಿ. ಗೌರವಿಸುವುದರೊಂದಿಗೆ ಸನ್ಮಾನಿಸಿದರು. 

ಪರಿಸರ ಪ್ರೇಮಿಯಾದ ಅಂಬಾದಾಸ ಜೋಶಿಯವರಿಗೆ 11 ವರ್ಷದಿಂದ ಸತತವಾಗಿ ಪರಿಸರಕ್ಕಾಗಿ ಶ್ರಮಿಸುತ್ತಿರುವುದನ್ನು ಗಮನಿಸಿ ಇವರಿಗೆ ಗಜಾನನ ಮಂಡಳಿ ವತಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಅದರಂತೆ ಶ್ರೀಯುತರು 35ವರ್ಷ ಕಲಾ ಶಿಕ್ಷಕರಾಗಿ 30 ವರ್ಷ ಮೈಸೂರ ಜಂಬುಸವಾರಿಯಲ್ಲಿ ಭಾಗವಹಿಸಿ, 32 ವರ್ಷ ಸ್ಥಳೀಯ ಕ್ರೀಡಾಂಗಣದಲ್ಲಿ ಸತತವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಬಹುಮುಖ ಪ್ರತಿಭಾವಂತ ಎಂದು ಗುರುತಿಸಿಕೊಂಡಿದ್ದಾರೆ. 

ನಿವೃತ್ತಿಯ ಇಳಿವಯಸ್ಸಿನಲ್ಲಿಯೂ ಮಗುವಿಗೊಂದು ಮರ ಶಾಲೆಗೊಂದು ವನ ಎಂಬ ಅಭಿಯಾನದದೊಂದಿಗೆ ಪ್ರತಿಶಾಲೆಯಲ್ಲಿ ಜಾಗೃತಿ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ. ಇತ್ತೀಚಿಗೆ ಪಾಪು ಪಾಂಡು ಸಿರಿಯಲ್ದಲ್ಲಿ ಸಣ್ಣ ಸಣ್ಣ ಪಾತ್ರಗಳೊಂದಿಗೆ ನಿರ್ವಹಿಸುತ್ತಿದ್ದಾರೆ ಹೀಗೆ ವಿಜಯಪುರದ ಬಹುಮುಖ ಪ್ರತಿಭಾವಂತಿಗೆ ಜೊತೆಗೆ ಅಪ್ಪಟ ಪರಿಸರ ಪ್ರೇಮಿಯಾಗಿ ವಿಜಯಪುರದ ರತ್ನ ಎಂಬ ಪ್ರಶಸ್ತಿಗೆ ಭಾಜನರಾಗಿ ಎಲ್ಲರ ಜನಮನ ಗೆದಿದ್ದಾರೆ ಎಂದು ಅವರ ಅಭಿಮಾನಿಯಾದ ಪ್ರೊ.ಮಹಾದೇವ ರಬಿನಾಳ ಉಪನ್ಯಾಸಕರು ರಾಜ್ಯ ಪ್ರಶಸ್ತಿ ಪುರಸ್ಕೃತರು ಇವರು ಎಲ್ಲ ಅಭಿಮಾನಿಗಳ ಮೂಲಕ ತಿಳಿಸಿದ್ದಾರೆ.