ಲೋಕದರ್ಶನ ವರದಿ
ವಿಜಯಪುರ 18: ರಾಷ್ಟ್ರೀಯ ಹಿತಾಸಕ್ತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ರೂಪಿಸಿ ಹೆಚ್ಚಿನ ಮಹತ್ವ ನೀಡುವ ಜೊತೆಗೆ ಆರ್ಥಿಕ ಪ್ರಗತಿಗೆ ನೆರವಾಗುವಂತಹ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸಮುದಾಯಗಳಿಗೆ ನೆರವಾಗಲು ಸಿಂಡಿಕೇಟ್ ಬ್ಯಾಂಕ್ ಬದ್ಧವಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ನ ಮಹಾ ಪ್ರಬಂಧಕ ವಿರೇಶ ಪಟ್ಟಣಶೆಟ್ಟಿ ಅವರು ಹೇಳಿದರು.
ಸಿಂಡಿಕೇಟ್ ಬ್ಯಾಂಕ್ ತನ್ನ ತಳಮಟ್ಟದ ಶಾಖೆಗಳ ಸಿಬ್ಬಂದಿಗಳಲ್ಲಿ ಹೊಸ ಚಿಂತನೆಗಳನ್ನು ಮೂಡಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿನ ಪ್ರಾದೇಶಿಕ ಕಚೇರಿಯಲ್ಲಿ ಹಮ್ಮಿಕೊಂಡ ಸರಣಿ ಕಾಯರ್ಾಗಾರಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಹಕರಿಗೆ ಉತ್ತಮವಾದ ಸೇವೆ ಒದಗಿಸುವ ತನ್ನ ಬದ್ಧತೆಗೆ ಅನುಗುಣವಾಗಿ ಈಗಾಗಲೇ ಬ್ಯಾಂಕ್ ಹೆಚ್ಚಿನ ತಂತ್ರಜ್ಞಾನದ ಸುಧಾರಣೆಗಳನ್ನು ಅಳವಡಿಸಿಕೊಂಡಿದ್ದು, ಈ ಕಾರ್ಯಗಾರವು ಇನ್ನೂ ಅಧಿಕ ಕಾರ್ಯಕ್ಷಮತೆಯನ್ನು ಒದಗಿಸಲಿ ನೆರವಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ರೂಪಿಸಲು ಹೆಚ್ಚಿನ ಮಹತ್ವ ನೀಡುವ ಮೂಲಕ ಬ್ಯಾಂಕ್ನ್ನು ಮೌಲ್ಯಮಾಪನಕ್ಕೊಳಪಡಿಸಿ ಆರ್ಥಿಕ ಪ್ರಗತಿಗೆ ನೆರವಾಗುವಂತಹ ಸಾಲ ಸೌಲಭ್ಯ, ಮೂಲಸೌಕರ್ಯ, ಎಲ್ಲರಿಗೂ ವಸತಿ, ಮಹಿಳಾ ಸಶಕ್ತೀಕರಣ, ಸ್ವಚ್ಛ ಭಾರತ್, ಎಂಎಸ್ಎಂಇ ಮತ್ತು ಮುದ್ರಾ, ಶೈಕ್ಷಣಿಕ ಸಾಲ, ತಂತ್ರಜ್ಞಾನ, ಆಥರ್ಿಕ ಒಳಗೊಳ್ಳುವಿಕೆ, ರೈತರ ಆದಾಯ ವೃದ್ದಿಗೆ ನೆರವಾಗುವುದು, ಡಿಜಿಟಲ್ ಎಕಾನಮಿ ರೂಪಿಸಲು ನೆರವಾಗುವುದು ಕಾರ್ಪೋರೇಟ್ ಸಮುದಾಯ ಹೊಣೆಗಾರಿಕೆ ಇವುಗಳಲ್ಲಿ ಸೇರಿವೆ ಎಂದರು.
ಬ್ಯಾಂಕ್ನ ಶಾಖೆಗಳಲ್ಲಿ ಹೊಸ ಚಿಂತನೆಗಳಿಗೆ ಉತ್ತೇಜನ ನೀಡುವುದು ಹಾಗೂ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನದ ಬಳಕೆ ಹಾಗೂ ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪರಿಕಲ್ಪನೆ ಬೆಳೆಸುವುದೇ ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಹೇಳಿದರು.
ಸಿಂಡಿಕೇಟ್ ಬ್ಯಾಂಕ್ ಯಾವಾಗಲೂ ದೇಶದ ಆಥರ್ಿಕ ಪ್ರಗತಿಗೆ ಹಾಗೂ ಸಕರ್ಾರದ ಉದ್ದೇಶಗಳಿಗೆ ಅನುಗುಣವಾಗಿ ತನ್ನದೇ ಕೊಡುಗೆ ಸಲ್ಲಿಸುವ ನಿಟ್ಟಿನಲ್ಲಿ ಉಪಕ್ರಮಗಳನ್ನು ಕೈಗೊಳ್ಳುತ್ತ ಬಂದಿದ್ದು, ಈ ಕಾರ್ಯಾಗಾರಗಳು ನಮ್ಮ ಬದ್ಧತೆಗೆ ಸಾಕ್ಷಿಯಾಗಿವೆ. ತಳಮಟ್ಟದಿಂದ ಯೋಜನೆ ರೂಪಿಸಲು ನೆರವಾಗುವಂತೆ ರಚನಾತ್ಮಕವಾಗಿ ಸೃಜನಶೀಲತೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳು ಬ್ಯಾಂಕ್ನ 4063 ಶಾಖೆಗಳಲ್ಲಿ ನಡೆಯಲಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವಿಜಯಪುರ ಹಾಗೂ ಕಲಬುರಗಿ ಕ್ಷೇತ್ರೀಯ ಪ್ರಬಂಧಕರಾದ ಪಿ.ಶ್ರೀಕಾಂತ ಹಾಗೂ ಮಂಜುನಾಥ ಶಿಂಗೈ, ರುಡಸೆಟ್ ಸಂಸ್ಥೆ ನಿದರ್ೇಶಕ ರಾಜೇಂದ್ರ ಜೈನಾಪುರ ಭಾಗವಹಿಸಿದ್ದರು. ಜಿಲ್ಲಾ ಅಗ್ರಣಿ ಮುಖ್ಯ ವ್ಯವಸ್ಥಾಪಕರಾದ ಸೋಮನಗೌಡ ಐನಾಪುರ ಕಾರ್ಯಕ್ರಮ ನಿರೂಪಿಸಿದರು.