ವಿಜಯಪುರ: ನೆರೆ ಸಂತ್ರಸ್ತರಿಗೆ ಅನ್ನ ಸಂತರ್ಪಣೆ

ಲೋಕದರ್ಶನ ವರದಿ

ವಿಜಯಪುರ 13: ಜಿಲ್ಲೆಯ ಛಾಯಾಚಿತ್ರ ಗ್ರಾಹಕರ ವತಿಯಿಂದ ಜಿಲ್ಲೆಯ ನೆರೆ ಪೀಡಿತ ಮುದ್ದೇಬಿಹಾಳ ತಾಲೂಕಿನ ಮುದೂರ, ಗಂಗೂರ, ಕಮಲದಿನ್ನಿ, ಕುಂಚಗನೂರ, ತಾರಾಪೂರ, ದೇವೂರ, ತಂಗಡಗಿ, ನಾಗರಾಳ ಗ್ರಾಮಗಳಿಗೆ ತೆರಳಿ ನೆರೆ ಸಂತ್ರಸ್ತರಿಗೆ ಅನ್ನ ಸಂತರ್ಪಣೆ ಹಾಗೂ ಬಟ್ಟೆ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿಠ್ಠಲ ಕೂಕಟನೂರ, ಪೃಥ್ವಿ ತುಂಗಳ, ಬಾಬು ಬಿದನೂರ, ಎಸ್.ಕೆ.ಸದಾ, ಗೌಡಪ್ಪ ಬಿರಾದಾರ, ಸುನೀಲ ಗಲಗಲಿ, ವಲ್ಲಭ ಮನಗೂಳಿ, ರಾಘು ಠಾಣೆ, ರವಿ ತುಪ್ಪದ, ಸಂಜು, ಬಸವರಾಜ ಬಿರಾದಾರ, ಸತೀಶ ಜಾಧವ, ರಾಘು ಕುಲಕರ್ಣಿ, ಅಶ್ವಿನ ಸಾಣೆಕ್ಕನವರ, ಚಂದ್ರು, ಪವನ ಅಂಗಡಿ, ವಿಠ್ಠಲ ಗುಜ್ಜರ, ಹಾಜಿ ಮುಲ್ಲಾ ಸೇರಿದಂತೆ ಇನ್ನಿತರರು ನೆರೆ ಸಂತ್ರಸ್ತರಿಗೆ ಅನ್ನ ಸಂತರ್ಪಣೆ ಹಾಗೂ ಬಟ್ಟೆ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಿದರು.