ವಿಜಯಪುರ: ಸಕಾಲ ಯೋಜನೆ ಅರ್ಜಿಗಳ ತಕ್ಷಣ ವಿಲೇವಾರಿ ಕ್ರಮಕ್ಕೆ ಸೂಚನೆ

ಲೋಕದರ್ಶನ ವರದಿ

ವಿಜಯಪುರ 26; ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸಕಾಲ ಯೋಜನೆಯಡಿ ಬರುವ ಅಜರ್ಿಗಳ ತಕ್ಷಣ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಕಾಲಕ ಸೇವೆ ಕುರಿತಂತೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಸಕಾಲ ಸೇವೆಗಳಿಗೆ ಸಂಬಂಧಪಟ್ಟಂತೆ ತಕ್ಷಣ ಸ್ಪಂದಿಸಬೇಕು. ಸಕಾಲದಡಿ ಬರುವ ಅಜರ್ಿಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲು ಅವರು ಸೂಚಿಸಿದ್ದಾರೆ.

ಸಕಾಲದಡಿ ಅರ್ಜಿಗಳ ವಿಲೇವಾರಿಗೆ ಸಂಬಂಧಪಟ್ಟಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರು ಸಕಾಲಕ್ಕೆ ಸ್ಪಂದಿಸದೇ ಇರುವ ಹಿನ್ನಲೆಯಲ್ಲಿ ಅವರಿಗೆ ಕಾರಣ ಕೇಳಿ ನೋಟಿಸ್ ಸಹ ಜಾರಿಗೊಳಿಸಿ ಸಕಾಲ ಕಾನೂನಿನಡಿಯಲ್ಲಿ ಏಕೆ ಕ್ರಮ ಕೈಗೊಳ್ಳಬಾರದು ಎಂಬುದರ ಬಗ್ಗೆ ಲಿಖಿತ ಉತ್ತರ ಪಡೆಯಲು ಸೂಚಿಸಿದರು. 

ಸಕಾಲದಲ್ಲಿ ಬರುವ ಅಜರ್ಿಗಳನ್ನು ಸಕಾಲ ಸೇವೆಗಳ ಅಡಿಯಲ್ಲಿಯೇ ಸ್ವೀಕರಿಸಿ ಇತ್ಯರ್ಥಪಡಿಸಬೇಕು. ವಿವಿಧ ರೀತಿಯ ಅರ್ಜಿಗಳಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಇದನ್ನು ಬದಿಗೊತ್ತಿ ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಜಿ  ವಿಲೇವಾರಿ ಮಾಡುವುದು ಹಾಗೂ ಇತ್ಯರ್ಥಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಧಿಕಾರಿಗಳು ಇದನ್ನು ಗಮನಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಅಪರ ಜಿಲ್ಲಾಧಿಕಾರಿ ಪ್ರಸನ್ನ ಅವರು ಮಾತನಾಡಿ, ಸಕಾಲದಡಿಯ ಅಜರ್ಿಗಳಿಗೆ ಸಂಬಂಧಪಟ್ಟಂತೆ ವಾಮಮಾರ್ಗದ ಮೂಲಕ ಸೇವೆ ಕಲ್ಪಿಸುವ ಕಾರ್ಯ ತಕ್ಷಣ ನಿಲ್ಲಿಸಬೇಕು. ಸಕಾಲದಲ್ಲಿ ಬರುವ ಅರ್ಜಿಗಳನ್ನು ಸಕಾಲ ಯೋಜನೆಯಡಿಯಲ್ಲಿಯೇ ಸ್ಪಂದಿಸಬೇಕು. ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸಕಾಲ ಯೋಜನೆಗೆ ಸಂಬಂಧಪಟ್ಟ ಮಾಹಿತಿ ಫಲಕಗಳನ್ನು ತಪ್ಪದೇ ಅಳವಡಿಸುವಂತೆ ತಿಳಿಸಿದ ಅವರು, ಈ ಕುರಿತ ಭಾವಚಿತ್ರಗಳನ್ನು ಸಲ್ಲಿಸುವಂತೆ ತಿಳಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಹರ್ಷ ಶೆಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.