ಲೋಕದರ್ಶನ ವರದಿ
ವಿಜಯಪುರ 30: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಕ್ರೀಡಾ ಯೋಜನೆಗಳ ಅನುದಾನದಿಂದ ಅಭಿವೃದ್ದಿ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣಗಳು ಹಾಗೂ ವಿತರಣೆ ಆಗುತ್ತಿರುವ ವಿವಿಧ ಕ್ರೀಡಾ ಸಲಕರಣೆಗಳ ಸದ್ಬಳಕೆಯಾಗಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಔದ್ರಾಮ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿಂದು, ಹಾಕಿ ಮಾಂತ್ರಿಕ ದ್ಯಾನ್ ಚಂದ್ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥ ಹಾಗೂ ಕಾರ್ಯಕ್ರಮದಲ್ಲಿ ದ್ಯಾನ್ ಚಂದ್ರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು.
ಮಾಜಿ ಕಾರ್ಪೋರೇಟರ್ ಪ್ರೇಮಾನಂದ ಬಿರಾದಾರ ಅವರು ಮಾತನಾಡಿ ಸಕರ್ಾರದಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಗ್ರಾಮ ಮಟ್ಟದಲ್ಲಿರುವ ಬಡ ವಿದ್ಯಾಥರ್ಿಗಳ ಉತ್ತಮ ಪ್ರತಿಬೆಯನ್ನು ಗುರುತಿಸಿ ಹೊರ ಜಗತ್ತಿಗೆ ತೋರಿಸುವಂತಹ ಕೆಲಸ ನಡೆಯಬೇಕು ಎಂದರು.
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಜಿ.ಲೋಣಿ ಅವರು ಮಾತನಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾಥರ್ಿಗಳಿಗೆ ಇಲಾಖೆ ವತಿಯಿಂದ ಪ್ರಯಾಣ ಭತ್ಯೆ ಒದಗಿಸಲಾಗುತ್ತಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಶಿಷ್ಯವೇತನವನ್ನು ಸಹಾ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರತಿವರ್ಷ ಕ್ರೀಡಾಶಾಲೆ/ಕ್ರೀಡಾನಿಲಯದ ಕ್ರೀಡಾಪಟುಗಳಿಗೆ ಜಿಲ್ಲಾ ಪಂಚಾಯತ ಸಹಯೋಗದೊಂದಿಗೆ ಇಲಾಖೆಯ ಅನುದಾನದಡಿಯಲ್ಲಿ ಕ್ರೀಡಾಕಿಟ್ಟುಗಳನ್ನು ವಿತರಿಸಲಾಗುತ್ತಿದೆ, ಅದರಂತೆ ಪ್ರತಿವರ್ಷ ಜನವರಿ ತಿಂಗಳಲ್ಲಿ ಗ್ರಾಮೀಣ ಮಟ್ಟದ ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಕ್ರೀಡಾಶಾಲೆ/ಕ್ರೀಡಾನಿಲಯಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಸಹ ನಡೆಸಲಾಗುತ್ತಿದ್ದು, ಕ್ರೀಡಾ ಪಟುಗಳ ಪೋಷಕರಿಗೂ ಸಹ ಪ್ರೋತ್ಸಾಹಧನವನ್ನು ಇಲಾಖೆಯಿಂದ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾಸ್ಕೇಟ್ ಬಾಲ್ ಅಸೋಸಿಯೆಷನ್ ಅದ್ಯಕ್ಷ ರಾಜು ಬಿದರಿ, ಬಾಸ್ಕೇಟ್ ಬಾಲ್ ಅಸೋಸಿಯೆಷನ್ ಮುಖ್ಯಸ್ಥ ಹಿರೇಮಠ್, ಪಿ.ಎಸ್.ಐ. ಗಂಗೂ ಬಿರಾದಾರ, ಸೈಕ್ಲಿಂಗ್ ಸಂಸ್ಥೆ ಸೆಕ್ರೆಟರಿ ಸಂಜು ಪಡತಲೆ, ಜೂಡೋ ತರಬೇತುದಾರರಾದ ತ್ರಿವೇಣಿ, ಸೇರಿದಂತೆ ರಾಷ್ರ್ಟೀಯ ಘಟಕದ ಕ್ರೀಡಾಪಟುಗಳು, ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಡಾ. ಬಿ.ಆರ್ ಕ್ರೀಡಾಂಗಣದಿಂದ ಜಿಲ್ಲಾ ಕ್ರೀಡಾವಸತಿ ನಿಲಯದವರೆಗೆ ಕಾಲ್ನಡಿಗೆ ಜಾಥಕ್ಕೆ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ವಿವಿಧ ಮುಖಂಡರು ಚಾಲನೆ ನೀಡಿದರು.