ವಿಜಯಪುರ: ಹಾಲು ಒಕ್ಕೂಟಕ್ಕೆ ಪ್ರಶಸ್ತಿ ಗರಿ

ಲೋಕದರ್ಶನ ವರದಿ

ವಿಜಯಪುರ 21: ಅವಳಿ ಜಿಲ್ಲೆಯ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ಸಮರ್ಥ ಮಾರ್ಗದರ್ಶನ ಅಧಿಕಾರಿ ಹಾಗೂ ಸಿಬ್ಬಂದಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಉತ್ತರ ಕರ್ನಾಟಕದಲ್ಲೇ ಮಾದರಿ ಒಕ್ಕೂಟವಾಗಿ ರೂಪುಗೊಂಡಿದೆ ಎಂದು ವಿಜಯಪುರ ಸಹಕಾರಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವಾನಂದ ಪಾಟೀಲ ಹೇಳಿದರು. 

ಇತ್ತೀಚೆಗೆ ನಡೆದ ಬ್ಯಾಂಕಿನ ಸರ್ವ ಸಾಮಾನ್ಯ ಸಭೆಯಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ಒಕ್ಕೂಟದ ಅಧ್ಯಕ್ಷ ಸಂಭಾಜಿ ಮಿಸಾಳೆ ಹಾಗೂ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್.ಡಿ. ದೀಕ್ಷಿತ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. 

ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಡಿ. ದೀಕ್ಷಿತ ಮಾತನಾಡಿ, ಗ್ರಾಹಕರಿಗೆ ಯೋಗ್ಯ ದರದಲ್ಲಿ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸಂಸ್ಥೆಯು ಪೂರೈಸುತ್ತಿದ್ದು, ಒಕ್ಕೂಟವನ್ನು ಪ್ರಶಸ್ತಿಗಾಗಿ ಪರಿಗಣಿಸಿದ್ದಕ್ಕಾಗಿ ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಒಕ್ಕೂಟದ ನಿರ್ದೇಶಕ ಶ್ರೀಶೈಲಗೌಡ ಪಾಟೀಲರಿಗೆ, ಬ್ಯಾಂಕ್ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಗೆ ಆಭಾರಿಯಾಗಿರುವುದಾಗಿ ಅಹೇಳಿದರು. 

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ಸಂಗಣ್ಣ ಹಂಡಿ, ನಿದರ್ೆಶಕರಾದ ಗುರಪ್ಪ ಚಲವಾದಿ, ಸಿದ್ದಣ್ಣ ಕಡಪಟ್ಟಿ, ಈರನಗೌಡ ಕರಿಗೌಡ್ರ, ಮಹಾದೇವ ಹನಗಂಡಿ, ಸಂಜಯ ತಳೇವಾಡ, ಗಾಯತ್ರಿ ಆದಬಸಪ್ಪಗೋಳ, ಅಶ್ವಿನಿ ಹಳ್ಳೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.