ವಿಜಯಪುರ: 108 ಅಂಬ್ಯೂಲೆನ್ಸ್ ನಲ್ಲಿ ಸುಸೂತ್ರ ಹೆರಿಗೆ

ಲೋಕದರ್ಶನ ವರದಿ

ವಿಜಯಪುರ 05: ಜಿಲ್ಲೆಯ ವಿವಿಧೆಡೆ 108 ಅಂಬ್ಯೂಲೆನ್ಸ್ ವಾಹನ ದಲ್ಲಿ ಮಾರ್ಗ ಮಧ್ಯದಲ್ಲಿಯೇ ಸುಸೂತ್ತವಾಗಿ 4 ಹೆರಿಗೆ  ನಡೆದಿರುವ ಘಟನೆ ಇಂದು  ಜರುಗಿದೆ. 

ಜಿಲ್ಲೆಯ ಡೋಣುರ ಗ್ರಾಮದ ಆಸ್ಮಾ ಮೆಹಬೂಬ ಮಳವಾಡಿ ಎಂಬ ಮಹಿಳೆಗೆ ಹೆರಿಗೆಯ ಚಿಕಿತ್ಸೆಗಾಗಿ 108 ಅಂಬ್ಯೂಲೆನ್ಸ್ನಲ್ಲಿ ಹೊನ್ನುಟಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸುವಾಗ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಂಬ್ಯೂಲೆನ್ಸ್ ಸಿಬ್ಬಂದಿಗಳು ಸುಸೂತ್ರವಾಗಿ ಹೆರಿಗೆ ಮಾಡಿ ಆರೋಗ್ಯವಾಗಿ ತಾಯಿ ಮತ್ತು ಮಗುವನ್ನು  ಹೊನ್ನುಟಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಸೇರಿಸಿದರು. 

ಮತ್ತೊಂದೆಡೆ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದ ಲಲಿತಾ ಪೂಜಾರಿ ಎಂಬ ಮಹಿಳೆಗೆ ಹೊರ್ತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸುವ ಮಾರ್ಗ ಮಧ್ಯದಲ್ಲಿ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಂಬ್ಯೂಲೆನ್ಸ್ ಸಿಬ್ಬಂದಿಗಳು ಸುಸೂತ್ರವಾಗಿ ಹೆರಿಗೆ ಮಾಡಿ ಆರೋಗ್ಯವಾಗಿ ತಾಯಿ ಎರಡು ಅವಳಿ ಮಕ್ಕಳು ಹೆಣ್ಣು ಮತ್ತು ಗಂಡು   ಮಗುವನ್ನು ಹೊತರ್ಿ ಪ್ರಾಥಮಿಕ ಆರೋಗ್ಯ  ಕೇಂದ್ರಕ್ಕೆ ಸೇರಿಸಿದ್ದಾರೆ. 

108 ಅಂಬ್ಯೂಲೆನ್ಸ್ ವಾಹನದಲ್ಲಿ ಸುಸೂತ್ರವಾಗಿ ನಡೆದ ಹೆರಿಗೆಗೆ ಸಂಬಂಧಿಸಿದ ಕುಟುಂಬ ಸದಸ್ಯರು ಸಂತಸ ವ್ಯಕ್ತಪಡಿಸಿ, 108 ಅಂಬ್ಯೂಲೆನ್ಸ ಸಿಬ್ಬಂದಿಗಳಾದ ಕಸ್ತೂರಿ, ವಿಶ್ವನಾಥ, ಅಮೀರಸಾಬ, ಅಶೋಕ, ಶಿವಾನಂದ, ರಾಮಕೃಷ್ಣ ಕುಲಕರ್ಣಿ  ಹಾಗೂ ಅನೀಲಕುಮಾರ ಚವ್ಹಾಣ  ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ