ವಿಜಯಪುರ: ಪ್ರವಾಹ ಸಂತ್ರಸ್ತರ ಪರವಾಗಿ ಹತ್ತು ಅಂಶಗಳ ಬೇಡಿಕೆ ಮಂಡನೆ ಮುಖ್ಯಮಂತ್ರಿಗಳಿಗೆ ಶಾಸಕ ಎಂ.ಬಿ.ಪಾಟೀಲ ಪತ್ರ

ಲೋಕದರ್ಶನ ವರದಿ

ವಿಜಯಪುರ 21: ಪ್ರವಾಹದಿಂದ ಬಾಧಿತಗೊಂಡಿರುವ ಗ್ರಾಮಗಳ ಸಂತ್ರಸ್ತರ ಬದುಕು ಹಸನಾಗಿಸಲು ಸಂತ್ರಸ್ತರ ಪರವಾಗಿ ಮಾಜಿ ಗೃಹ ಸಚಿವ ಹಾಗೂ ಬಬಲೇಶ್ವರ ಕ್ಷೇತ್ರದ ಹಾಲಿ ಶಾಸಕ ಎಂ.ಬಿ.ಪಾಟೀಲ ಅವರು ಹತ್ತು ಅಂಶಗಳ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ.

ಈ ಕುರಿತಂತೆ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಪ್ರವಾಹ ಸಂತ್ರಸ್ತತರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ಹೊಸ ಮನೆಗಳನ್ನು ನಿರ್ಮಿಸಲು ರೂ.5ಲಕ್ಷ ಘೋಷಣೆ ಮಾಡಿದ್ದು, ಆದರೆ ರೂ.5ಲಕ್ಷ ಗಳಲ್ಲಿ ಒಂದು ಮನೆ ನಿರ್ಮಿಸಲು ಸಾಧ್ಯವಿಲ್ಲದ ಕಾರಣ ಅದನ್ನು ಕನಿಷ್ಠ ರೂ.10ಲಕ್ಷಕ್ಕೆ ಹೆಚ್ಚಿಸಬೇಕು. 

ಸಂಪೂರ್ಣ/ಭಾಗಶಃ ಬಿದ್ದು ಹೋಗಿರುವ ಮನೆಗಳಲ್ಲದೇ ನೀರಿನಲ್ಲಿ ನೆಂದಿರುವ ಮನೆಗಳು ಇದೀಗ ಕಾಲಕ್ರಮೇಣ ಕುಸಿಯುತ್ತಿವೆ. ಇಂತಹ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಜೀವ ಭಯದಿಂದ ಅಭದ್ರತೆಯಿಂದ ಅನಿವಾರ್ಯವಾಗಿ ವಾಸಿಸುತ್ತಿದ್ದಾರೆ. ಇಂತಹ ಮನೆಗಳು ಶೀತಲಗೊಂಡು ಬೀಳುತ್ತಿದ್ದು, ಕಾರಣ ಮುಂದಿನ ಅನಾಹುತ ತಪ್ಪಿಸಲು ಇವರಿಗೂ ಹೊಸ ಮನೆ ನಿರ್ಮಿಸಲು ಕನಿಷ್ಠ ರೂ.10ಲಕ್ಷ ನೀಡಬೇಕು.

ಮನೆಗಳು ಹಾಗೂ ನಿವೇಶನಗಳು ಇಲ್ಲದ ಸಂತ್ರಸ್ತರಿಗೆ 18*16 ಅಡಿ ಅಥವಾ 15*20 ಅಡಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ, ಕುಡಿಯುವ ನೀರು ಕಲ್ಪಿಸಿ, ಪ್ರತ್ಯೇಕ ಮಹಿಳಾ ಮತ್ತು ಪುರುಷ ಸ್ನಾನ ಗೃಹ ಮತ್ತು ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. 

ಸಂತ್ರಸ್ತರ ಬದುಕು ಬೀದಿ ಪಾಲಾಗಿದ್ದು ಬಟ್ಟೆ-ಬರೆ, ದವಸ-ಧಾನ್ಯಗಳು, ಪಾತ್ರೆ-ಪಗಡೆಗಳು, 

ಪುಸ್ತಕಗಳು-ಕಾಗದ ಪತ್ರಗಳು ಸೇರಿದಂತೆ ಅವರ ದಿನನಿತ್ಯದ ಎಲ್ಲ ವಸ್ತುಗಳು ನೀರು-ಮಣ್ಣು ಪಾಲಾಗಿದ್ದು, ಆ ಕುಟುಂಬಗಳಿಗೆ ತುತರ್ು ಅಗತ್ಯ ವಸ್ತುಗಳನ್ನು ಖರೀದಿಸಲು ರೂ.1ಲಕ್ಷ ಪರಿಹಾರ ನೀಡಬೇಕು.

ಪ್ರವಾಹದಿಂದ ಹೆಚ್ಚಿನ ಪ್ರದೇಶದಲ್ಲಿ ಕಬ್ಬು, ತೊಗರಿ ಇತರೆ  ವಾಣಿಜ್ಯ ಬೆಳೆಗಳು ಹಾಳಾಗಿದ್ದು, ರೈತರಿಗೆ ಪ್ರತಿ ಎಕರೆಗೆ ರೂ.1ಲಕ್ಷ ಪರಿಹಾರವನ್ನು ಸಣ್ಣ, ಅತೀ ಸಣ್ಣ ಸೇರಿದಂತೆ ಎಲ್ಲ ಹಿಡುವಳಿದಾರರಿಗೂ ನೀಡಬೇಕು.

ಸಂಪರ್ಕ ರಸ್ತೆಗಳು, ಸೇತುವೆಗಳು, ಚೆಕ್ಡ್ಯಾಂ, ಬಾಂದಾರಗಳು, ಕೆರೆ-ಕಟ್ಟೆಗಳು, ಸಾರ್ವಜನಿಕ ಆಸ್ತಿಗಳು, ಕೃಷಿ, ಟಿ.ಸಿ, ಪೈಪ್ಲೈನ್, ಮೋಟಾರ್-ಸ್ಟಾಟರ್ಗಳು ಕೊಚ್ಚಿಕೊಂಡು ಹೋಗಿದ್ದು, ತುರ್ತಾಗಿ ನೂರುದಿನಗಳ ಕಾಲ ಮಿತಿ ನಿಗದಿಪಡಿಸಿ, ಸಕರ್ಾರದಿಂದಲೇ ಈ ಎಲ್ಲ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು.

ಹೊಲ, ಮನೆ ಹಾನಿಯಿಂದ ನಿರಾಶ್ರಿತರಾಗಿರುವ ಎಲ್ಲರಿಗೂ ನರೇಗಾ ಸೇರಿದಂತೆ ಇತರೆ ಉದ್ಯೋಗ ಸೃಷ್ಠಿ ಮಾಡಿ, ಮುಂದಿನ ಒಂದು ವರ್ಷದವರೆಗೆ ಕನಿಷ್ಠ ಕೂಲಿ ನೀಡಬೇಕು.

ಸ್ಥಳಾಂತರ ಹೊಂದಲು ನಿರ್ಮಿಸಿರುವ ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ಹಾಗೂ ಬಹುಹಿಂದೆಯೇ ಪರಿಹಾರ ನೀಡಿರುವ ಮೊತ್ತ ಖರ್ಚ್ಗಿರುವ ಕಾರಣ ಸ್ಥಳಾಂತರ ಹೊಂದಿಲ್ಲ. ಆದ್ದರಿಂದ ಎಲ್ಲ ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಸಕರ್ಾರದಿಂದಲೇ ಮನೆಗಳನ್ನು ನಿರ್ಮಿಸಬೇಕು. ಹಾಗೂ ಪುನರ್ವಸತಿ ಘೋಷಣೆಯಾಗದ ಬಹಳಷ್ಟು ಹಳ್ಳಿಗಳು ಈ ಪ್ರವಾಹದಲ್ಲಿ ಹಾಗೂ ಪ್ರತಿವರ್ಷ ಹಾನಿಯಾಗುತ್ತಿದ್ದು, ಆ ಎಲ್ಲ ಗ್ರಾಮಗಳನ್ನು ಹೊಸಪುನರ್ವಸತಿ ಕೇಂದ್ರ ಸ್ಥಾಪಿಸಿ ಸ್ಥಳಾಂತರಿಸಬೇಕು. ಅಲ್ಲದೇ ಹೊಸಪುನರ್ವಸತಿ ಕೇಂದ್ರ ಸ್ಥಾಪಿಸಲು, ಭೂಸ್ವಾಧೀನ ಕಾಯ್ದೆ ಅನ್ವಯ ಜಮೀನು ಸಮಸ್ಯೆ ಆಗಲಿದ್ದು, ಕನ್ಸೆಂಟ್ ಪಡೆದು ನೇರ ಜಮೀನು ಖರೀದಿ ಮಾಡಬೇಕು.

ಯುಕೆಪಿ (ಆಲಮಟ್ಟಿ ಎತ್ತರ) 519.06ಆರ್.ಎಲ್.ವರೆಗೆ ಮುಳುಗಡೆ ಪರಿಹಾರ ನೀಡಿದ್ದು, ಆದರೆ ಈ ಪ್ರವಾಹದಲ್ಲಿ ಅದರ ಮೇಲಿನ ಲಕ್ಷಾಂತರ ಎಕರೆ ಭೂಮಿ, ಗ್ರಾಮಗಳು, ತೋಟದ ಮನೆಗಳು ಹಾಳಾಗಿದ್ದು, ಆ ಎಲ್ಲ ಭಾಗವನ್ನು ಮುಳುಗಡೆ ಪ್ರದೇಶ ಎಂದು ಘೋಷಿಸಿ ಪರಿಹಾರ ನೀಡಬೇಕು.

ಅಗಷ್ಟ 2019ರ ಈ ಪ್ರವಾಹವು ಈ ಶತಮಾನದಲ್ಲಿ ಕಂಡರಿಯದ ವಿಪತ್ತಾಗಿದೆ. ಈ ಹಿಂದೆ ಕಳೆದ ಶತಮಾನದಲ್ಲಿ 1914-15ರಲ್ಲಿ ಈ ರೀತಿಯ ಪ್ರವಾಹ ಉಂಟಾಗಿತ್ತು ಎನ್ನುವ ದಾಖಲೆಗಳಿವೆ. 105ವರ್ಷಗಳ ನಂತರ ಉಂಟಾಗಿರುವ ಈ ಘೋರ ಆಪತ್ತನ್ನು ಎದುರಿಸಲು ಕೇಂದ್ರ ಸಕರ್ಾರ "ರಾಷ್ಟ್ರೀಯ ವಿಪತ್ತು" ಎಂದು ಘೋಷಿಸಿ, ರಾಜ್ಯಕ್ಕೆ ದೊಡ್ಡ ಪ್ರಮಾಣದ ನೆರವು ಒದಗಿಸಬೇಕು ಎಂದು ಶಾಸಕ ಎಂ.ಬಿ.ಪಾಟೀಲ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಅಲ್ಲದೇ, ಆಲಮಟ್ಟಿಯಲ್ಲಿ ಬುಧವಾರ ಸಚಿವ ಗೋವಿಂದ ಕಾರಜೋಳ ಅವರು ಅತಿವೃಷ್ಟಿ ಹಾನಿ ಹಾಗೂ ಪರಿಹಾರ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕೂಡ ಶಾಸಕ ಎಂ.ಬಿ.ಪಾಟೀಲ, ಈ 10 ಅಂಶಗಳ ಬೇಡಿಕೆ ಪಟ್ಟಿ ನೀಡಿ ಸಚಿವರ ಗಮನ ಸೆಳೆದಿದ್ದಾರೆ.