ವಿಜಯಪುರ: ಕಬಡ್ಡಿ ಪಂದ್ಯಾವಳಿ: ಎ.ವಿ.ಎಸ್ ತಂಡಕ್ಕೆ ಜಯ

ಲೋಕದರ್ಶನ ವರದಿ

ವಿಜಯಪುರ 07: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ  ಕಲಬುರಗಿ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ಬಿ.ಎಲ್.ಡಿ.ಇ. ಎ.ವಿ.ಎಸ್. ಆಯುವರ್ೇದ ಮಹಾವಿದ್ಯಾಲಯದಲ್ಲಿ ಸಂಘಟಿಸಿದ್ದು, ಭಾಗವಹಿಸಿದ್ದ 8 ತಂಡಗಳಲ್ಲಿ ಅಂತಿಮ ಪಂದ್ಯದಲ್ಲಿ ಅತಿಥೇಯ ಬಿ.ಎಲ್.ಡಿ.ಇ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಜಯ ಗಳಿಸಿತು. 

ವೈದ್ಯಕೀಯ, ದಂತ ಆಯುವರ್ೇದ, ಹೊಮಿಯೋಪತಿ, ಯುನಾನಿ, ಫಾರ್ಮಸಿ, ನಸರ್ಿಂಗ್ ಮುಂತಾದ ಆರೋಗ್ಯ ವಿಜ್ಞಾನ ವಿದ್ಯಾಲಯಗಳ ಒಟ್ಟು 8 ತಂಡಗಳು ಭಾಗವಹಿಸಿದ್ದು, ಅಂತಿಮ ಪಂದ್ಯದಲ್ಲಿ ಬಾಗಲಕೋಟ ಸಜ್ಜಲಶ್ರೀ ನಸರ್ಿಂಗ್ ಕಾಲೇಜು ತಂಡವನ್ನು ಸೋಲಿಸಿ, ಅತಿಥೇಯರು ವಿಜಯರಾದರು.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಬುಗರ್ಿ ವಲಯ ಮಟ್ಟದ ಸಂಯೋಜಕರಾದ ಸಿ.ಎಚ್. ಬಳಗಾನೂರ, ಬಿರಾದಾರ, ಕ್ರೀಡಾ ನಿದರ್ೇಶಕ ಎಸ್.ಎಸ್. ಕೋರಿ, ಸಹಾಯಕ ಕ್ರೀಡಾ ನಿದರ್ೇಶಕ ಕೈಲಾಸ ಹಿರೇಮಠ ಪಾಲ್ಗೊಂಡಿದ್ದರು.

ಮಾಜಿ ಗೃಹ ಸಚಿವ ಹಾಗೂ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಡಾ. ಎಂ.ಬಿ. ಪಾಟೀಲ ಮತ್ತು ನಿದರ್ೇಶಕ, ಎಂ.ಎಲ್.ಸಿ ಸುನೀಲಗೌಡ.ಬಿ. ಪಾಟೀಲ ವಿಜೇತರಿಗೆ ಶುಭ ಹಾರೈಸಿದರು.