ವಿಜಯಪುರ: ಆಹಾರ, ಸ್ವಚ್ಛತೆ ಅರಿವು ಕಾರ್ಯಕ್ರಮ

ಲೋಕದರ್ಶನ ವರದಿ

ವಿಜಯಪುರ 25: ನಗರದ ಬಾಲಕಿಯರ ಬಾಲ ಮಂದಿರದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಪೋಷಣ್ ಅಭಿಯಾನದ ಮಾಸಾಚರಣೆಯ ಅಂಗವಾಗಿ ಬಾಲ ಮಂದಿರದ ಮಕ್ಕಳಿಗಾಗಿ ಪೌಷ್ಠಿಕ ಆಹಾರ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಬಾಲಕಿಯರ ಬಾಲ ಮಂದಿರದ ಅಧಿಕ್ಷಕರಾದ ದೀಪಾಕ್ಷಿ ಜಾನಕಿ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಪ್ರೋಟೇಕ್ಷನ್ ಆಫೀಸರ್ ವಾಣಿ ನಿಂಬಾಳ ಮಕ್ಕಳ ಸ್ವಚ್ಛತೆಯ ಬಗ್ಗೆ ತಿಳಿಸಿದರು. 

ಬಳಿಕ ಮೇಲ್ವಿಚಾರಕಿಯರಾದ ಸಹನಾಜ ಹೈದರಖಾನ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಗಬಹುದಾದ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿದರು. ಮಧುಮತಿ ಜಂಗಮಶೆಟ್ಟಿ ಬಾಲ್ಯವಿವಾಹದ ದುಷ್ಟರಿಣಾಮಗಳ ನಗ್ಗೆ ತಿಳಿ ಹೇಳಿದರು. ಕಾವೇರಿ ಕಾಂಬಳೆ ಪೌಷ್ಟಿಕ ಆಹಾರದ ಪ್ರತಿಜ್ಞಾ ವಿಧಿ ನೆರವೇರಿಸಿ ಕೊಟ್ಟರು. 

ಕಾರ್ಯಕ್ರಮದಲ್ಲಿ ಅಶ್ವಿನಿ ಸನದಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅತಿಕಾ ಸಿದ್ಧಿ, ದೇಸಾಯಿ, ಕಾಂಬಳೆ, ರಿಯಾಜ ಅಂಗನವಾಡಿ ಕಾರ್ಯಕತರ್ೆಯರು, ಬಾಲಕಿಯರ ಬಾಲ ಮಂದಿರದ ಮಕ್ಕಳು ಮುಂತಾದವರು ಹಾಜರಿದ್ದರು.