ಲೋಕದರ್ಶನ ವರದಿ
ವಿಜಯಪುರ 16: ಕಲಗುಕರ್ಿ ಬಳಿ ಹಾದು ಹೋಗಿರುವ ರೇಲ್ವೆ ಬ್ರಿಡ್ಜ್ ಅಂಡರ್ ಪಾಸಿಂಗ್ ಕಾಲುವೆಯಲ್ಲಿ ಪುಸ್ಸಿಂಗ್ ಬಾಕ್ಸ್ ಕಾಮಗಾರಿ ನಿಲ್ಲಿಸಿ, ಮನಗೂಳಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಸೋಮವಾರ ವಿಜಯಪುರದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಪಾದಯಾತ್ರೆ ನಡೆಸಿ ಗಮನ ಸೆಳೆದರು.
ನಗರದ ಗಾಂಧೀವೃತ್ತದಿಂದ ಆರಂಭಗೊಂಡ ಪಾದಯಾತ್ರೆ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತದ ಮಾರ್ಗವಾಗಿ ಸಂಚರಿಸಿ ರೈಲು ನಿಲ್ದಾಣ ತಲುಪಿ ಅಲ್ಲಿ ಸಭೆಯಾಗಿ ಮಾರ್ಪಟ್ಟಿತು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಸಿಸಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು, ಮನಗೂಳಿ ಶಾಖಾ ಕಾಲುವೆಗೆ ಐದು ದಿನದಲ್ಲಿ ನೀರು ಹರಿಸಲು ಅನುವುಮಾಡಿಕೊಡದಿದ್ದರೆ ಸಾವಿರಾರು ರೈತರೊಂದಿಗೆ ರೇಲ್ವೆ ಹಳೆ ಮೇಲೆ ಕುಳಿತು ರೈಲು ತಡೆ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೇಲ್ವೆ ಇಲಾಖೆಗೆ ಎಚ್ಚರಿಕೆ ನೀಡಿದರು.
ಪದೇ ಪದೇ ರೇಲ್ವೆ ಇಲಾಖೆಯವರು ರೇಲ್ವೆ ಬ್ರಿಡ್ಜ ಕೆಳಗಡೆ ಪುಸ್ಸಿಂಗ್ ಬಾಕ್ಸ್ ನಿಮರ್ಾಣ ನೆಪದಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸುತ್ತಿದ್ದಾರೆ. ಕಳೆದ 7-8 ತಿಂಗಳ ಹಿಂದೆ ಕೂಡಗಿ ಬಳಿ ಪುಸ್ಸಿಂಗ್ ಬಾಕ್ಸ್ ಕಾಮಗಾರಿ ನಡೆಸಿದ್ದರಿಂದ ಅಲ್ಲಿಯೂ ಕೂಡ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದರು. ಅಲ್ಲಿಯೂ ಕೂಡ ಚಳುವಳಿಯ ಮೂಲಕ ಕಾಮಗಾರಿ ಸ್ಥಗತಿಗೊಳಿಸಿ ನೀರು ಹರಿಸಿದ್ದರು. ಆದರೆ ಮತ್ತೆ ಈಗ ಕಲಗುಕರ್ಿ ತಳೆವಾಡ ಗ್ರಾಮದ ಬಳಿ ಹಾದು ಹೋಗಿರುವ ರೇಲ್ವೆ ಹಳಿ ಕೆಳಗಡೆ ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಮನಗೂಳಿ ಶಾಖಾ ಕಾಲುವೆ ಹಾಯ್ದು ಹೋಗಿದ್ದು ಅಲ್ಲಿ ಪುಸ್ಸಿಂಗ್ ಬಾಕ್ಸ್ ಕಾಮಗಾರಿ ನಡೆಯುತ್ತಿದೆ. ಈ ನೆಪದಲ್ಲಿ ನೀರು ಹರಿಸುವುದನ್ನು ರೇಲ್ವೆ ಇಲಾಖೆ ತಡೆ ಹಿಡಿದಿದೆ. ಇದರಿಂದ ಆ ಭಾಗದ ಸುಮಾರು 15 ಹಳ್ಳಿಗಳಲ್ಲಿ ಕುಡಿಯುವ ನೀರಿನ ತತ್ವಾರ ಉಂಟಾಗಿದೆ. ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ. ತಕ್ಷಣ ಕಾಮಗಾರಿ ನಿಲ್ಲಿಸಿ ಅಥವಾ ಪಕ್ಕದಲ್ಲಿ ಬೇರೆ ಕಾಲುವೆ ತೋಡಿ ಪೈಪ್ ಅಳವಡಿಸಿ ಕಾಲುವೆಗೆ ನೀರು ಹರಿಸಿ ಕೆರೆ ತುಂಬಿಸಲು ಅನುವು ಮಾಡಿಕೊಡಬೇಕು ಎಂದು ಆಗಮಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಅಧಿಕಾರಿಗಳು ರೈತರನ್ನುದ್ದೇಶಿಸಿ ಮಾತನಾಡಿ, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಮುಗಿಸಿ ನೀರು ಹರಿಸಲು ಅನುವುಮಾಡಿಕೊಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಒಪ್ಪದ ರೈತರು ನಿರ್ದಿಷ್ಟ ದಿನ ಹೇಳಿ ಎಂದು ಪಟ್ಟು ಹಿಡಿದರು. ಮೇಲಾಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯನ್ನುದ್ದೇಶಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ಧರಾಮಪ್ಪ ರಂಜಣಗಿ ಹಾಗೂ ರೈತ ಮುಖಂಡ ಅಪ್ಪುಗೌಡ ಪಾಟೀಲ (ಮನಗೂಳಿ) ಮಾತನಾಡಿದರು.
ಹುಣಶ್ಯಾಳ ಶ್ರೀಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು ರೈತರ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.
ಜಿಲ್ಲಾ ಸಂಘಟನಾ ಕಾರ್ಯದಶರ್ಿ ಸದಾಶಿವ ಬರಟಗಿ, ಬ.ಬಾಗೇವಾಡಿ ತಾಲೂಕಾ ಅಧ್ಯಕ್ಷ ಸಿದ್ರಾಮ ಅಂಗಡಗೇರಿ, ಉಪಾಧ್ಯಕ್ಷ ಹೊನಕೇರಪ್ಪ ತೆಲಗಿ, ಈರಣ್ಣ ದೇವರಗುಡಿ, ಶಾರದಾ ಲಮಾಣಿ, ಕೃಷ್ಣಪ್ಪ ಬಮರಡ್ಡಿ, ಮಲ್ಲಯ್ಯ ಮಠಪತಿ, ದಯಾನಂದ ವಸ್ತ್ರದ, ಶ್ರೀಶೈಲ ನಾಗೋಡ, ರಾಮಣ್ಣ ಶೀರಾಗೋಳ, ಸಿದ್ದನಗೌಡ ಬಿರಾದಾರ, ಚನ್ನಪ್ಪ ತೋಟದ, ವಿಠ್ಠಲ ಕರಿಗೇರ, ಮಹೇಶ ಬಿರಾದಾರ, ದ್ಯಾಮಣ್ಣ ಕಾಡಸಿದ್ದ, ಬಾಪು ಬೆಲ್ಲದ, ಸಿದ್ದು ದೇಸಾಯಿ, ರೇವಣಪ್ಪ ಕಾಡಸಿದ್ದ, ಶ್ರೀಶೈಲ ಸಂಗಾಪೂರ, ಶಂಕ್ರೆಪ್ಪ ತೋಟದ, ಸಿದ್ದಪ್ಪ ಕಲಬೀಳಗಿ, ಪ್ರಭು ಬಸ್ತವಾಡ, ಯಲ್ಲಪ್ಪ ಬಿರಾದಾರ, ಬಸವರಾಜ ಬಮರಡ್ಡಿ, ಮಲ್ಲಪ್ಪ ತೋಟದ, ಲಕ್ಷ್ಮಣ ಬಾಲ್ಯಾಳ, ಈರಣ್ಣ ಪೂಜಾರಿ, ಚಿದಯ್ಯ ಮಠಪತಿ, ಕಲ್ಲಯ್ಯ ವಸ್ತ್ರದ ಸೇರಿದಂತೆ ನೂರಾರು ರೈತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.