ವಿಜಯಪುರ: ನಿಯೋಜಿತ ವಿಮಾನ ನಿಲ್ದಾಣ ಸ್ಥಾಪನೆ: ಸಂಸದ ರಮೇಶ ಜಿಗಜಿಣಗಿ

ಲೋಕದರ್ಶನ ವರದಿ

ವಿಜಯಪುರ 22: ವಿಜಯಪುರ ಸಮಿಪದ ಬುರಣಾಪುರದಲ್ಲಿಯೇ ನಿಯೋಜಿತ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದ್ದು, ವಿಮಾನ ನಿಲ್ದಾಣ ಸ್ಥಳದ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ವಿಜಯಪುರ ಜಿಲ್ಲೆಯ ಹಾಲಿ ಸಂಸದ ರಮೇಶ ಜಿಗಜೀಣಗಿ ಸ್ಪಷ್ಟಪಡಿಸಿದರು. 

ನಿಯೋಜಿ ಬುರಾಣಪುರದಲ್ಲಿ ವಿಮಾನ ನಿಲ್ದಾಣ ನಿಮರ್ಾಣವಾಗುವುದೋ ಅಥವಾ ಮುಳವಾಡ ಬಳಿ ಕೆಐಡಿಬಿ ವತಿಯಿಂದ ಸ್ವಾಧೀನಪಡಿಸಿಕೊಳ್ಳಲಾದ ಸ್ಥಳದಲ್ಲಿ ವಿಮಾನ ನಿಲ್ದಾಣ ನಿಮರ್ಾಣವಾಗುವುದೋ ಎಂಬ ಗೊಂದಲಕ್ಕೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ತೆರೆ ಎಳೆದಿದ್ದಾರೆ.

ಈ ಹಿಂದೆ ಅಧಿಕಾರದಲ್ಲಿದ್ದ ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ಪ್ರದಶರ್ಿಸದ ಕಾರಣ  ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಲಿಲ್ಲ. ಈಗ ಆದಷ್ಟು ಬೇಗನೆ ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ ಸಾಗಿದ ಎಂದು ಹೇಳಿದರು.

    ನಿಯೋಜಿತ ಸ್ಥಳದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಂಡಿದ್ದ ಗುತ್ತಿಗೆ ಕಂಪನಿ ವಿನಾಕಾರಣ ಗೊಂದಲ ಸೃಷ್ಟಿಸಿದೆ. ತಾನು ಕೆಲಸ ಮಾಡುವುದು ಸಾಧ್ಯವಿಲ್ಲ ಎಂದು ಅರಿತ ಕಂಪನಿ ವಿನಾಕಾರಣ ಪ್ರಾರಂಭಿಕ ಹಂತಕ್ಕೆ 100 ಕೋಟಿ ರೂ. ಬೇಕು ಎಂದು ಪಟ್ಟು ಹಿಡಿದು ಕುಳಿತಿತ್ತು. ಆದರೆ ವಾಸ್ತವವಾಗಿ ಪ್ರಾರಂಭದ ಕಾಮಗಾರಿ ಅಂದರೆ ರನ್-ವೇ ನಿಮರ್ಾಣ, ಮೂಲಭೂತ ಕಟ್ಟಡ ಮೊದಲಾದವುಗಳಿಗೆ 100 ಕೋಟಿ ರೂ.ಗಳ ಅವಶ್ಯಕತೆ ಇಲ್ಲ. ಮುಂದೆ 100 ಕೋಟಿ ರೂ. ಬೇಕಾಗಬಹುದು, ಆದರೆ ಪ್ರಾಥಮಿಕ ಕಾಮಗಾರಿಗೆ ಅಷ್ಟೊಂದು ಹಣ ಬೇಕಾಗಿರಲಿಲ್ಲ, ಆದರೆ ಕಂಪನಿ ಗುತ್ತಿಗೆಯಿಂದ ರದ್ದುಗೊಳಿಸುವ ದೃಷ್ಟಿಯಿಂದ 100 ಕೋಟಿ ರೂ. ಪ್ರಾರಂಭಿಕವಾಗಿಯೇ ಬೇಕಾಗುತ್ತದೆ ಎಂಬ ನಾಟಕ ಮಾಡಿತು, ಅವರು ಸೃಷ್ಟಿಸಿದ ಗೊಂದಲದಿಂದಾಗಿ ವಿಮಾನ ನಿಲ್ದಾಣ ನಿಮರ್ಾಣವಾಗಲಿಲ್ಲ ಎಂದು ದೂರಿದರು.

  ವಿಜಯಪುರದಲ್ಲಿ ನೂರಾರು ಐತಿಹಾಸಿಕ ಸ್ಮಾರಕಗಳಿವೆ. ಆದರೆ ಧಾರವಾಡದಲ್ಲಿ ಐತಿಹಾಸಿಕ ಸ್ಮಾರಕಗಳಿಲ್ಲ. ಆದರೂ ಎಎಸ್ಐ ವಲಯ ಕಚೇರಿ ಧಾರವಾಡದಲ್ಲಿದೆ. 

ಭಾಗದಲ್ಲಿ ಐತಿಹಾಸಿಕ ಸ್ಮಾರಕಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಕ್ರಮ ಮೊದಲಾದವುಗಳನ್ನು ಕೈಗೊಳ್ಳಬೇಕಾದರೆ ಎಎಸ್ಐ ಧಾರವಾಡ ವಲಯ ಕಚೇರಿಯ ಮೂಲಕವೇ ಆಗಬೇಕು, ಹೀಗಾಗಿ ಅನೇಕ ಕಾಮಗಾರಿ ವಿಳಂಬವಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಜಯಪುರದಲ್ಲಿಯೇ ಎಎಸ್ಐ ಕಚೇರಿ ಸ್ಥಳಾಂತರಿಸಬೇಕು ಎಂದು ಹಲವಾರು ದಿನಗಳಿಂದ ಪತ್ರ ಬರೆದಿದ್ದೇನೆ, ಆದರೆ ಈ ಬಗ್ಗೆ ಕ್ರಮವಾಗಿಲ್ಲ. ಆದರೂ ನಾನು ನನ್ನ ಪ್ರಯತ್ನ ಬಿಟ್ಟಿಲ್ಲ. ಕಚೇರಿ ಸ್ಥಳಾಂತರಕ್ಕೆ ಪ್ರಾಮಾಣಿಕ ಪತ್ನ ಮಾಡುವುದಾಗಿ ಹೇಳಿದರು.