ವಿಜಯಪುರ: ಅಂತಾರಾಷ್ಟ್ರೀಯ ಗೋಷ್ಟಿಗೆ ಡಾ.ಭುವನೇಶ್ವರಿ ಆಯ್ಕೆ

ವಿಜಯಪುರ 10: ಮಹಾರಾಷ್ಟ್ರದ ಫಂಡರಪುರದ ಶ್ರೀ ವಿಠ್ಠಲ ರಿಸರ್ಚ ಇನ್ಸ್ಟೀಟ್ಯೂಟ್ನಲ್ಲಿ ಕಂಪ್ಯೂಟರ್ ವಿಜ್ಞಾನದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಡಾ. ಭುವನೇಶ್ವರಿ ಮೇಲಿನಮಠ ಅವರ ಪ್ರತಿಭೆಯನ್ನು ಗಮನಿಸಿ ಅವರಿಗೆ ಯು.ಎ.ಇ.(ದುಬೈ)ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ (ಇಂಟರನ್ಯಾಶನಲ್ ಕಾನ್ಪುರೆನ್ಸ್ ಆನ್ ನ್ಯಾನೋ ಟೆಕ್ನಾಲಾಜಿ & ಇಂಟಲಿಜೆನ್ಸಿ ಮ್ಯಾನುಪಾಕ್ಚರಿಂಗ್ & ಇಂಜನೀಯರಿಂಗ್)  ಗೋಷ್ಠಿಗೆ  ಅಹ್ವಾನಿಸಲಾಗಿದೆ. 

ಸಪ್ಟೆಂಬರ್ 14 ರಂದು ದುಬೈನಲ್ಲಿ ಗೋಷ್ಟಿ ನಡೆಯಲಿದ್ದು, ಆ ಗೋಷ್ಟಿಯಲ್ಲಿ ಡಾ. ಭುವನೇಶ್ವರಿ ಅವರು ಕಂಪ್ಯೂಟರ ವಿಜ್ಞಾನದಲ್ಲಿ ಕನ್ನಡದ ಭಾಷೆ ಕ್ಷೇತ್ರ ಕುರಿತು ವಿಷಯ ಮಂಡಿಸಲಿದ್ದಾರೆ. ರಾಜ್ಯದಿಂದ ಡಾ. ಭುವನೇಶ್ವರಿ ಅವರೊಬ್ಬರೇ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.