ವಿಜಯಪುರ: ಕೊಟ್ಪಾ ಕಾಯ್ದೆಯಡಿ ವಿವಿಧೆಡೆ ದಾಳಿ

ಲೋಕದರ್ಶನ ವರದಿ

ವಿಜಯಪುರ 05: ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಸೆ.4 ಇಂದು ನಗರದ ವಿವಿಧೆಡೆ ಕೊಟ್ಪಾ 2003 ಕಾಯ್ದೆಯಡಿ ದಾಳಿ ನಡೆಸಿ ಒಟ್ಟು 27 ಪ್ರಕರಣಗಳನ್ನು ದಾಖಲಿಸಿ 2700 ರೂ. ದಂಡ ವಸೂಲಿ ಮಾಡಲಾಗಿದೆ. 

ನಗರದ ಎ.ಪಿ.ಎಮ್.ಸಿ ಪೋಲಿಸ್ ಠಾಣೆ ವ್ಯಾಪ್ತಿಯ ನಗರದ ವಿವಿಧೆಡೆ  ದಾಳಿ ನಡೆಸಿ,                ತಂಬಾಕು ಸೇವನೆಯ ದುಷ್ಪರಿಣಾಮ ಕುರಿತು ಮಾಹಿತಿ ನೀಡಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ-ವ್ಯಾಪಾರಸ್ತರಿಗೆ ಸೆಕ್ಸನ್ 4 ಅಡಿಯಲ್ಲಿ 16 ಪ್ರಕರಣ ದಾಖಲಿಸಿ 1450 ದಂಡ ಹಾಗೂ ಸೆಕ್ಸನ 6 (ಎ) ಅಡಿಯಲ್ಲಿ 11 ಪ್ರಕರಣ ದಾಖಲಿಸಿ 1250 ದಂಡ ಸೇರಿದಂತೆ ಒಟ್ಟು 27 ಪ್ರಕರಣ ದಾಖಲಿಸಿ 2700 ದಂಡ ವಸೂಲಿ ಮಾಡಲಾಯಿತು.

ಈ ಸಂದರ್ಭದಲ್ಲಿ  ಕೊಟ್ಪಾ 2003 ಕಾಯ್ದೆಯ ಸೆಕ್ಸನ್ 4 & ಸೆಕ್ಸನ 6(ಎ) ಗಳ 30 ನಾಮಫಲಕಗಳನ್ನು ಅಳವಡಿಸಲಾಯಿತು. ಹಾಗೂ ತಂಬಾಕು ಉತ್ಪನ್ನ ಕಂಪನಿಗಳ 5 ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಯಿತು. 

ದಾಳಿಯಲ್ಲಿ ರಾಜ್ಯ ತಂಬಾಕು ನಿಯಂತ್ರಣ ಘಟಕದ ಮಾಹಾಂತೇಶ ಉಳ್ಳಾಗಡ್ಡಿ, ಹಿರಿಯ ಆರೋಗ್ಯ ಸಹಾಯಕರಾದ ವಿಶ್ವನಾಥ ತಳವಾರ, ಕಿರಿಯ ಆರೋಗ್ಯ ಸಹಾಯಕರಾದ ಸಿ.ಎ.ಜೋಷಿ, ಜಿಲ್ಲಾ ಸಲಹೆಗಾ ಡಾ. ಪ್ರಕಾಶ ಚವ್ಹಾಣ, ಸಮಾಜ ಕಾರ್ಯಕರ್ತ ಶ್ರೀಕಾಂತ ಪೂಜಾರ ಉಪಸ್ಥಿತರಿದ್ದರು.