ಲೋಕದರ್ಶನ ವರದಿ
ವಿಜಯಪುರ 02: ಅಖಿಲ ಕರ್ನಾಟಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ (ರಿ) ಬೆಂಗಳೂರು ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ಕರ್ನಾಟಕ ಸರಕಾರ, ಬೆಂಗಳೂರು ಇವರು ಕೊಡಮಾಡುವ ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ ಮುಧೋಳದ ಸಮಾಜ ಸೇವಕರಾದ ಸತೀಶ ಬಂಡಿವಡ್ಡರ ಅವರಿಗೆ ಲಭಿಸಿದೆ.
ಶಿಕ್ಷಣವೇ ಸಂಜೀವಿನಿ ಹಾಗೂ ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ಸತೀಶ ಬಂಡಿವಡ್ಡರ ಇವರು ಹತ್ತಾರು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ವಿದ್ಯಾರ್ಥಿಗಳಿಗಾಗಿ ದೈಹಿಕ ಆರೋಗ್ಯ ಹಾಗೂ ಮಾನಸಿಕ ಶಾಂತಿಗಾಗಿ ಶಾಲಾ ಕಾಲೇಜುಗಳಲ್ಲಿ 'ಧ್ಯಾನ ಜಾಗೃತಿ ಅಭಿಯಾನ' 'ಪ್ರತಿಭಾ ಪುರಸ್ಕಾರ' ವಿದ್ಯಾರ್ಥಿಗಳಿಗಾಗಿ ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ 5 ರೂಪಾಯಿಯಲ್ಲಿ ಉಪಹಾರ ದೊರೆಯುವ ಕ್ಯಾಂಟಿನ್ಗಳು ವಿಕಲಚೇತನ ಹಾಗೂ ಅನಾಥ ಆಶ್ರಮಗಳಿಗೆ ಸಹಾಯ ಸಹಕಾರ ಹಾಗೂ ಸಾರ್ವಜನಿಕರಿಗಾಗಿ ಆರೋಗ್ಯ ತಪಾಸಣೆ ಸಾರ್ವಜಿನಕ ಸ್ಥಳಗಳಲ್ಲಿ ಹತ್ತಾರು ಕಡೆ ಶುದ್ದ ಕುರಿಯುವ ನೀರಿನ ಅರವಟ್ಟಿಗೆಗಳು, ನಿರುದ್ಯೋಗ ಯುವಕ ಯುವತಿಯರಿಗಾಗಿ ಸ್ವ-ಉದ್ಯೋಗ ತರಬೇತಿಗಳು ವಿಶéೇಷವಾಗಿ ಪರಿಸರ ರಕ್ಷಣೆ ಜಾಗೃತಿಗಾಗಿ ಕ್ಷೇತ್ರಾದ್ಯಂತ 'ಮನೆಗೊಂದು ಮರ' ಅಭಿಯಾನದ ಅಡಿಯಲ್ಲಿ 1 ಲಕ್ಷ ಹಣ್ಣಿನ ಸಸಿಗಳನ್ನು ನಡೆಸಿದ್ದು ಹಾಗೂ ಗ್ರಾಮೀಣ (ಗಾಯಕರನ್ನು) ಪ್ರತಿಭೆಗಳಿಗೆ ತರಬೇತಿ ಶಿಬಿರಗಳು, ಅನ್ನದಾತರಿಗಾಗಿ 'ಕಬ್ಬು ಬೆಳೆಯಲು ಆಧುನಿಕ ತಂತ್ರಜ್ಞಾನ' ಮತ್ತು ಇನ್ನೂ ವಿಶೇಷವಾಗಿ 'ವಿಶ್ವ ರೈತ ದಿನಾಚರಣೆ' ಆಚರಿಸಿ ಪ್ರಗತಿಪರ ರೈತರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯ,ಸರ್ಕಾರಿ ಸೌಲಭ್ಯಗಳಾದ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಮುಂತಾದ ಸರ್ಕಾರಿ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸಲು ಗ್ರಾಮೀಣ ಬಾಗಗಳಲ್ಲಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ.
ಶಿಕ್ಷಣ, ಕಲೆ, ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಕನ್ನಡ ನಾಡ ನುಡಿ ಸಂಸ್ಕೃತಿಗೆ ಸಲ್ಲಿಸಿರುವ ಶೃದ್ದಾಪೂರ್ವಕ ಯಥಾ ಶಕ್ತಿ ಸೇವೆಯನ್ನು ಹಾಗೂ ಕೊಡುಗೆ ನೀಡಿದ ಪ್ರಯುಕ್ತ ನಾಡಿಗಾಗಿ ಸಲ್ಲಿಸಿದ ಅನುಪಮ ಸೇವೆಯನ್ನು ಅನುಲಕ್ಷಿಸಿ ಗೌರವಿಸಿ ಸನ್ಮಾನಿಸಿ ಇವರಿಗೆ ದಿನಾಂಕ 03-06-2019 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ "ಸಮಾಜ ಸೇವಾ ರತ್ನ ಪ್ರಶಸ್ತಿ" ಪ್ರಧಾನ ಮಾಡಲಾಗುವುದು. ತಮ್ಮ ಸೇವೆ ಜೀವನ ಪರ್ಯಂತ ಮಾನವ ಧರ್ಮಕ್ಕೆ ಮೀಸಲಾಗಿರಲೆಂದು ಆಶಿಸಿ ಸ್ಪೂತರ್ಿಸುತ್ತೇವೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಪ್ಪ ದಡ್ಡಿಮನಿ ತಿಳಿಸಿದ್ದಾರೆ.