ವಿಜಯಪುರ: ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ

ಲೋಕದರ್ಶನ ವರದಿ

ವಿಜಯಪುರ 27: 2019-20 ನೇ ಸಾಲಿನ ಸಮಗ್ರ ಶಿಕ್ಷಣ ಅಭಿಯಾನ ಟಿ.ಇ. ಯೋಜನೆ ಅಡಿಯಲ್ಲಿ ವಿಜಯಪುರ ನಗರ ಮತ್ತು ಗ್ರಾಮೀಣ ವಲಯದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣಾ ಕುರಿತ ಒಂದು ದಿನದ ಕಾಯರ್ಾಗಾರ ಯಶಸ್ವಿಯಾಗಿ ನಡೆಯಿತು. 

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಚಾರ್ಯರಾದ ಸಯರಾಬಾನು ಖಾನ ಅವರು ಮಾತನಾಡಿ, ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಬೇಕು. 8ನೇ ಮತ್ತು 9ನೇ ತರಗತಿಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಾಮಥ್ರ್ಯ ಆಧಾರಿತ 20 ಅಂಕದ ಪರೀಕ್ಷೆ ನಡೆಸಬೇಕು. ಅಂದಾಗ ಮಾತ್ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕದೊಂದಿಗೆ ವಿದ್ಯಾರ್ಥಿಗಳು ಪಾಸಾಗುತ್ತಾರೆ. ಎನ್.ಟಿ.ಎಸ್.ಸಿ. ಮತ್ತು ಎನ್.ಎಮ್.ಎಮ್.ಎಸ್. ವಿದ್ಯಾರ್ಥಿಗಳು ಪಾಸಾಗಬೇಕು 2019-20 ನೇ ಸಾಲಿನಲ್ಲಿ ಎನ್.ಟಿ.ಎಸ್.ಸಿ. ಮತ್ತು ಎನ್.ಎಮ್.ಎಮ್.ಎಸ್. ಹೆಚ್ಚು ವಿದ್ಯಾರ್ಥಿಗಳು ಪರೀಕೆಗೆ ಹಾಜರಾಗಲು ಮುಖ್ಯಗುರುಗಳಿಗೆ ಸೂಚನೆ ನೀಡಿದರು.

ಹಿರಿಯ ಉಪನ್ಯಾಸಕ ಆರ್.ವಾಯ್. ಕೊಣ್ಣೂರ ಮಾತನಾಡಿ 2019-20 ನೇ ಮಾರ್ಚ / ಏಪ್ರೀಲ್ ನಡೆದ ಎಸ್.ಎಸ್.ಎಲ್.ಸಿ. ಫಲಿತಾಂಶ ಬಹಳಷ್ಟು ಕಡಿಮೆಯಾಗಿದೆ ಎಂದು ಹೇಳಿದರು.

ಉಪನ್ಯಾಸಕ ಆರ್. ಎಲ್. ಯಲ್ಲಡಗಿ ವರು 2019-20 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಪ್ರಶ್ನೆ ಪತ್ರಿಕೆ ವಿನ್ಯಾಸ ಹಾಗೂ ಕಳೆದ ಸಾಲಿನ ಹಾಗೂ ಈ ಸಾಲಿನ ಪ್ರಶ್ನೆ ಪತ್ರಿಕೆ ವ್ಯತ್ಯಾಸ ಬಗ್ಗೆ ಹೇಳಿದರು.

2018-19 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಹಾಗೂ 50% ಕ್ಕಿಂತ ಕಡಿಮೆ ಫಲಿತಾಂಶ ಹೊಂದಿರುವವರ ಮಾಹಿತಿ ನೀಡಿದರು. ಎನ್. ವ್ಹಿ. ಹೊಸೂರ, ಎಸ್. ಕೆ. ಬಿರಾದಾರ ಸ್ವಾಗತಿಸಿದರು. ಎಸ್. ಬಿ. ಖಿಲಾರಿ ವಂದಿಸಿದರು.