ವಿಜಯಪುರ: ಅಂತರ್ ವಲಯ ವ್ಹಾಲಿಬಾಲ್ ಪಂದ್ಯಾವಳಿಗೆ ಚಾಲನೆ

ಲೋಕದರ್ಶನ ವರದಿ

ವಿಜಯಪುರ 20: ವಿಜಯಪುರದ ಸೈನಿಕ ಶಾಲೆಯಲ್ಲಿ ಆಯೋಜಿಸಿರುವ ಸೈನಿಕ ಶಾಲೆಗಳ ಅಂತರ್ ವಲಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಗೆ  ವಿದ್ಯುಕ್ತ ಚಾಲನೆ ನೀಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಇಂದು ಕ್ರಿಕೆಟ್ನಂತೆ ವ್ಹಾಲಿಬಾಲ್, ಹಾಕಿ ಮೊದಲಾದ ಕ್ರೀಡೆಗಳತ್ತಲೂ ವಿದ್ಯಾರ್ಥಿಗಳು ಆಸಕ್ತಿ ತೋರಬೇಕಿದೆ ಎಂದರು.

ಹಿಮಾದಾಸ್ ಕ್ರೀಡಾರಂಗದಲ್ಲಿ ಮಾಡಿರುವ ಸಾಧನೆ ಅತ್ಯಂತ ಶ್ರೇಷ್ಠವಾದುದು, ಅವರ ಆದರ್ಶವನ್ನು ಮೈಗೂಡಿಸಿಕೊಂಡು ಕ್ರೀಡೆಯಲ್ಲಿ ಸಾಧನೆ ತೋರುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಇತ್ತೀಚಿಗೆ ವ್ಹಾಲಿಬಾಲ್ ಮೊದಲಾದ ಪಂದ್ಯಾವಳಿಗಳಲ್ಲಿಯೂ ವಿದ್ಯಾಥರ್ಿ-ಯುವಜನತೆ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ, ಮೊನ್ನೆ ನಡೆದ ಮ್ಯಾರಾಥಾನ್ನಲ್ಲಿಯೂ ಅನೇಕ ಯುವಕರು ಭಾಗವಹಿಸಿದ್ದು ಅವರಲ್ಲಿನ ಕ್ರೀಡಾಭಿಮಾನದ ನಿದರ್ಶನವಾಗಿದೆ. ಆರೋಗ್ಯವಂತ ಮನಸ್ಸು ಹಾಗೂ ಆರೋಗ್ಯವಂತ ದೇಹ ಇದ್ದರೆ ಮಾತ್ರ ಸಮೃದ್ಧವಾದ ದೇಶ ಕಟ್ಟಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಉಕ್ತಿಯನ್ನು ಸದಾ ನೆನಪಿನಲ್ಲಿರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸೈನಿಕ ಶಾಲೆಯ ಪ್ರಾಚಾರ್ಯ ಕ್ಯಾಪ್ಟನ್ ವಿನಯ ತಿವಾರಿ, ಉಪಪ್ರಾಚಾರ್ಯ ಕಮಾಂಡರ್ ರವಿಕಾಂತ ಶುಕ್ಲಾ, ಆಡಳಿತಾಧಿಕಾರಿ ಮೇಜರ್ ವಿಕ್ರಂ ಸಿಂಗ್, ವಿಶ್ರಾಂತ ಲೆಫ್ಟೆನೆಂಟ್ ಕರ್ನಲ್ ಸೋಮಶೇಖರ, ಶ್ರೀರಾಮಮೂರ್ತ, ಪುಷ್ಪರಾಜ ಶೆಟ್ಟಿ, ರಾಜು ಜೋಸೆಫ್ ಮೊದಲಾದವರು ಪಾಲ್ಗೊಂಡಿದ್ದರು. 

ಈ ಪಂದ್ಯಾವಳಿಯಲ್ಲಿ ಕುಂಜಪೂರಾ, ಕೋರಕುಂಡಾ, ರೇವಾ, ಪರುಲಿಯಾ ಸೇರಿದಂತೆ ವಿವಿಧ ಸೈನಿಕ ಶಾಲೆಯ ತಂಡಗಳು ಭಾಗವಹಿಸಿವೆ. ಪಂದ್ಯಾವಳಿ ಆರಂಭಕ್ಕೂ ಮುನ್ನ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನೆ ನಡೆಯಿತು. ನಂತರ ಕ್ರೀಡಾಪಟುಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಬಳಿಕ ನಡೆದ ಆರಂಭಿಕ ಪಂದ್ಯದಲ್ಲಿ ಹರಿಯಾಣಾ ಕಾಂಜಿಪುರ ಸೈನಿಕ ಶಾಲೆಯ ತಂಡ ಆಂಧ್ರದ ಕೋರುಕೊಂಡಾ ಸೈನಿಕ ಶಾಲೆಯ ತಂಡದ ವಿರುದ್ಧ ಜಯಗಳಿಸುವ ಮೂಲಕ ಉತ್ತಮ ಶುಭಾರಂಬ ಮಾಡಿತು.

ಐದು ದಿನಗಳವರೆಗೆ ಪಂದ್ಯಾವಳಿ ನಡೆಯಲಿದ್ದು, ಸಮಾರೋಪ ಸಮರಂಭ 23 ರಂದು ಸಂಜೆ 4 ಗಂಟೆಗೆ ನಡೆಯಲಿದೆ.