ಲೋಕದರ್ಶನ ವರದಿ
ವಿಜಯಪುರ 21: ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಈಗಾಗಲೇ ಆರಂಭಗೊಂಡಿದ್ದು ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಸವರ್ೇ ನಂ 175 ಹಾಗೂ 61 ಜಮೀನುಗಳಿಗೆ ಜಿಲ್ಲಾಧಿಕಾರಿ ವೈ.ಎಸ್ಪಾಟೀಲ್ ಅವರು ಇಂದು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳೆ ಸಮೀಕ್ಷೆಗೆ ಸಂಬಂದಪಟ್ಟಂತೆ ಮೇಲ್ವೀಚಾರಣೆಯನ್ನು ಮಾಡಲಾಗುತ್ತಿದ್ದು ಬೆಳೆ ಸಮೀಕ್ಷೆ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಸಮೀಕ್ಷೆಗಾರರಿಗೆ ನೈಜ ಮಾಹಿತಿಯನ್ನು ಒದಗಿಸುವಂತೆ ರೈತರಿಗೆ ಮನವಿ ಮಾಡಿದರು.
ಮೊಬೈಲ್ ತಂತ್ರಾಂಶ ಮೂಲಕ ನಡೆಸುವ ಬೆಳೆ ಸಮೀಕ್ಷೆ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ, ಬೆಳೆ ಪರಿಹಾರ ಮತ್ತು ಬೆಳೆ ವಿಮೆ ನಿಧರ್ಾರವಾಗುವುದರಿಂದ ರೈತರು ತಮ್ಮ ಬೆಳೆಗಳ ಮಾಹಿತಿ ಕುರಿತಂತೆ ಖುದ್ದು ಹಾಜರಿದ್ದು ಸಮೀಕ್ಷೆಗಾರರಿಗೆ ಮಾಹಿತಿ ಒದಗಿಸುವಂತೆ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಇಂದು ಜುಮನಾಳ ಗ್ರಾಮದಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಂಗಾರು ಬೆಳೆ ಸಮೀಕ್ಷೆ ಆರಂಭ:
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಇಂದಿನಿಂದ ಆರಂಭವಾಗಿದ್ದು, ಜಿಲ್ಲೆಯ ಒಟ್ಟು 652 ಗ್ರಾಮಗಳಲ್ಲಿ 1160 ಸಮೀಕ್ಷ್ಷೆಗಾರರು ಸಮೀಕ್ಷ್ಷೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮದಲ್ಲಿ ಆಯ್ಕೆಯಾದ ಖಾಸಗಿ ನಿವಾಸಿಗಳು ಬೆಳೆ ಸಮೀಕ್ಷೆ ನಡೆಸುತ್ತಾರೆ. ಸದರಿ ಇಲಾಖೆ ಸಿಬ್ಬಂದಿಗಳು ಮತ್ತು ಖಾಸಗಿ ನಿವಾಸಿಗಳು ಇಂದಿನಿಂದ ಆ.25ರ ವರೆಗೆ ಬೆಳೆ ಸಮೀಕ್ಷೆ ನಡೆಸಲಿದ್ದಾರೆ. ರೈತರು ಬೆಳೆ ಸಮೀಕ್ಷೆಗೆ ಬರುವ ಸಮೀಕ್ಷೆಗಾರರಿಗೆ ತಮ್ಮ ಜಮೀನುಗಳಲ್ಲಿ ಇದ್ದು ಬೆಳೆವಾರು ಕ್ಷೇತ್ರದ ವಿವರ ಒದಗಿಸಲು ಜಿಲ್ಲಾಡಳಿತದಿಂದ ಕೋರಲಾಗಿದೆ.
ಜಿಲ್ಲಾಧಿಕಾರಿಗಳೊಂದಿಗೆ ಕೃಷಿ ಜಂಟಿ ನಿದರ್ೇಶಕರಾದ ಶಿವುಕುಮಾರ, ತಹಶೀಲ್ದಾರ ಟಿ. ಮೋಹನಕುಮಾರಿ ಇಂದು ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.