ಲೋಕದರ್ಶನ ವರದಿ
ವಿಜಯಪುರ 30: ವಾರ್ಡ್ ನಂ.15 ಶಿಕಾರಖಾನೆ ಕೊಳಗೇರಿ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ (ಆಂಟಿ-ಜೆಇವಿ ಐಜಿಎಮ್ ಪಾಸಿಟಿವ್) ತಗುಲಿ ಜನ ಭಯಬೀತರಾಗಿರುವ ಕುರಿತು ಹಾಗೂ ಕೊಳಗೇರಿಯನ್ನು ಅಭಿವೃದ್ಧಿಗೊಳಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಿ ಶಿಕಾರಖಾನೆ ವಾರ್ಡ್ ನಂ. 15ರ ಓಣಿಯ ನಿವಾಸಿಗಳು ಜಿಲ್ಲಾಧಿಕಾರಿ ವೈ.ಸಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ವಾರ್ಡ್ ನಂ. 15ರ ಓಣಿಯಲ್ಲಿ ಅವೈಜ್ಞಾನಿಕ ಒಳಚರಂಡಿ, ಸಾರ್ವಜನಿಕ ಶೌಚಾಲಯ ಅವವ್ಯಸ್ಥೆ, ರಸ್ತೆಗಳ ತುಂಬಾ ಕಸದ ರಾಶಿ, ಬೀದಿಗಳಲ್ಲಿ ಕಲುಷಿತಗೊಂಡಿರುವ ನೀರು ತಗ್ಗು ದಿನ್ನೆಯಲ್ಲಿ ಸಂಗ್ರಹ ಗೊಂಡು ಓಣಿಯ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗುತ್ತಿದೆ.
ಸದ್ಯ ಈಗಾಗಲೇ ಓಣಿಯ ನಿವಾಸಿಯಾಗಿರುವ ಹಣಮಂತ ಹೂಗಾರ ಇವರ ಮಗಳಾದ ದಾನಮ್ಮ ಹಣಮಂತ ಹೂಗಾರ ಈ ಮಗುವಿಗೆ ಸಾಂಕ್ರಾಮಿಕ ರೋಗ ತಗುಲಿ ಈಗ ಖಾಸಗಿ ಆಸ್ಪತ್ರೆಯಾದ ಬಿಎಲ್ಡಿಈಎ ಯಲ್ಲಿ ಸುಮಾರು 25 ದಿನಗಳಿಂದ ತೀವ್ರ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕುಟುಂಬವು ಕಡು ಬಡವರಾಗಿದ್ದು, ದಿನನಿತ್ಯ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಹೊರೆಯಾಗಿರುತ್ತದೇ. ಇದೇ ರೀತಿಯ ಓಣಿಯ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ತಗಲುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಓಣಿಯ ಸ್ವಚ್ಛತೆ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಕೊಟ್ಟರು ಎಚ್ಚೆತ್ತುಕೊಂಡಿಲ್ಲ. ಈಗಿದ್ದ ಶೌಚಾಲಯವನ್ನು ಹೈಟೆಕ್ ಶೌಚಾಲಯವಾಗಿ ಮಾರ್ಪಡಿಸಬೇಕು. ವೈಜ್ಞಾನಿಕವಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಓಣಿಯ ನಿವಾಸಿಗಳಿಗೆ 24ಥ7 ಶುದ್ಧ ಕುಡಿಯುವ ನೀರು ಒದಗಿಸಬೇಕು. ಕೂಡಲೇ ಸ್ವಚ್ಛತೆಯ ಕುರಿತು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸಂಬಂಧ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ ಹಾಗೂ ಅವರ ಚಿಕಿತ್ಸೆಯ ಖಚರ್ು ವೆಚ್ಚವನ್ನು ಸಕರ್ಾರ ಭರಿಸಿ ಬಡ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗಬೇಕೆಂದು ವಿನಂತಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರಿಗೆ ಪೋನ್ ಮೂಲಕ ಈ ಓಣಿಯ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಸಂತೋಷ ಮಸಿಮನಾಳ, ಜಾವಿದ ಕೆ. ಮುಲ್ಲಾ, ಮಹೇಶ ಕ್ಷೀರಸಾಗರ, ಮಾಳಪ್ಪಾ ದೊಡಮನಿ, ಕಲ್ಲಪ್ಪ ಶಿವಶರಣ, ಲೋಹಿತ ಸಕ್ರೆನ್ನವರ, ಪವನ ಕೋಳೂರ, ಜಿ.ಜಿ. ದೊಡಮನಿ, ಆರ್.ಟಿ. ಬಿರಾದಾರ, ಅನೀಲ ಪೂಜಾರಿ, ಸಿದ್ರಾಮ ಸಂಗೋಗಿ, ಅರುಣ ಜುಮನಾಳ, ಆನಂದ ಕೆರೂರ, ಆನಂದ ಪೂಜಾರಿ, ರವಿ ಗೌಂಡಿ, ಸಾಗರ ಲಾಯದಗುಂದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.