ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು: ಶಿವಸಿದ್ಧೇಶ್ವರ ಮಹಾಸ್ವಾಮಿಗಳು

ಲೋಕದರ್ಶನ ವರದಿ

ಕೊಪ್ಪಳ 02: ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು. ವಿದ್ಯೆಗೆ ವಿನಯವೇ ಭೂಷಣ ಎನ್ನುವಂತೆ ವಿದ್ಯಾರ್ಥಿಗಳು ವಿನಯಶೀಲತೆಯನ್ನು, ವಿದೇಯತೆಯನ್ನು ಅಳವಡಿಸಿಕೊಳ್ಳಬೇಕು. ಗುರು-ಹಿರಿಯರಿಗೆ, ತಂದೆ-ತಾಯಿಗಳಿಗೆ, ಶಿಕ್ಷಕರಿಗೆ ಗೌರವ ಕೊಡಬೇಕು. ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥಮಾಡುತ್ತಿರುವುದು ನೋವಿನ ಸಂಗತಿ. ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಧನೆ ಸಾಧಕನ ಸೊತ್ತೇ ವಿನಃ ಸೋಮಾರಿಯ ಸೊತ್ತಲ್ಲ. ಆದ್ದರಿಂದ ಜೀವನದಲ್ಲಿ ಉನ್ನತ ಆದರ್ಶಗಳನ್ನಿಟ್ಟುಕೊಂಡು, ಉನ್ನತ ಸಾಧನೆ ಮಾಡಿ, ಸಮಾಜಕ್ಕೆ ಉಪಯುಕ್ತವಾಗುವ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಜಡೇಶ್ವರ ಸಂಸ್ಥಾನಮಠದ ಶಿವಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಹಾಲವರ್ತಿಯ ಜಡೇಶ್ವರ ಪ್ರಾಥಮಿಕ ಶಾಲೆಯ ವಾಷರ್ಿಕೋತ್ಸವ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. 

ಬಿ.ಕೆ.ಬುದ್ದಿಯ ಪೂರ್ಣಾನಂದ ಆಶ್ರಮದ ಶಂಕರಾನಂದ ಮಹಾಸ್ವಾಮಿಗಳು, ದೂರದರ್ಶನ ಕಲಾವಿದರಾದ ಮೊನೇಶಕುಮಾರ ಆಶ್ಯಾಳ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರಾದ ಕೆ.ಕೊಟ್ರಬಸಪ್ಪ, ಕನರ್ಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಕಳಕನಗೌಡ ಗೌಡರ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಭೀಮಣ್ಣ ಮೂಲಿಮನಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಾಲಚಂದ್ರ ಸಾಲಭಾವಿ, ಹನುಮಂತಪ್ಪ ಬೀಡನಾಳ, ಸುರೇಶ ಮಜ್ಜಗಿ, ಬಸಣ್ಣ ಬಂಗಾಳಿ, ಹನುಮಂತಪ್ಪ ಪೂಜಾರ ಸಂಗಾಪೂರ, ಕುಮಾರ ಮಜ್ಜಿಗಿ,  ಹಾಲವರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆಂಚಮ್ಮ ಫಕೀರಪ್ಪ ಜಂಗ್ಲಿ, ಹಿರಿಯರಾದ ಮುದಿಯಪ್ಪ ಬಿ.ಆದೋನಿ, ಭರಮಪ್ಪ ಗೊರವರ,  ಆನಂದ ಕಿನ್ನಾಳ, ದೇವಪ್ಪ ಗೊರವರ, ಮಹೇಂದ್ರ ಹಾಲವರ್ತಿ, ಸಿಂದೋಗೆಪ್ಪ ಹೊಸಳ್ಳಿ, ಗ್ಯಾನಪ್ಪ ಕೌದಿ, ಶಂಕರ ಹೊಸಳ್ಳಿ, ನಾಗರಾಜ ಕಟ್ಟಿಮನಿ, ದುರಗಪ್ಪ ಗೊರವರ, ಗಿಡ್ಡಪ್ಪ ಸಿರಿಗೇರಿ, ತಾತಪ್ಪ ಗೊರವರ, ಮುತ್ತುರಾಜ ಹಾಲವತರ್ಿ, ಹಾಲಪ್ಪ ಹಾಲವತರ್ಿ, ನಾಗರಾಜ ಕೌದಿ, ಮಂಜುನಾಥ ಬಂಡಿ, ಶಿವರಾಮ ಹೊಸಳ್ಳಿ, ಹನುಮಂತಪ್ಪ ನಾಯಕ, ಭರಮಪ್ಪ ಹೊಸಳ್ಳಿ, ಮಲ್ಲಿಕಾಜರ್ುನ ಚಿಲವಾಡಗಿ, ನಾಗರಾಜ ಗುರಿಕಾರ,  ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.