ವಿಟಿಯು ಚಿನ್ನದ ಪದಕದಲ್ಲಿ ವಿದ್ಯಾಥರ್ಿನಿಯರ ಮೇಲುಗೈ

ಪಾರೇಶ ಭೋಸಲೆ 

ಬೆಳಗಾವಿ : ಮಹಿಳೆಯರು ಯಾವದರಲ್ಲಿ ಕಡಿಮೆ ಇಲ್ಲ. ಮಹಿಳೆ ಪುರುಷರ ಸರಿಸಮಾನ ಎನ್ನುವದರಲ್ಲಿ ಯಾವ ಸಂದೇಹ ಇಲ್ಲ ಎನ್ನುವದನ್ನು ಇಲ್ಲಿನ ವಿಶ್ವೇಶ್ವರಯ್ಯಾ ತಾಂತ್ರೀಕ ವಿಶ್ವವಿದ್ಯಾಲಯದಲ್ಲಿ ಪಂಚ ಪಾಂಡವರ ಹಾಗೆ 5 ಜನ ವಿದ್ಯಾಥರ್ಿನಿಯರೆ ಚಿನ್ನದ ಪದಕಗಳನ್ನು ಕಬಳಿಸಿ ಪುರುಷ ವಿದ್ಯಾಥರ್ಿಗಳು ನಾಚಿಸುವಂತೆ ಕಾಯಕ ಮೂಲಕ ಸಾಧನೆ ಮಾಡಿದ್ದಾರೆ.

ಮಹಿಳೆ ಮನಸ್ಸು ಮಾಡಿದರೆ ಯಾವದು ಅಸಾಧ್ಯ ಎನ್ನುವ ಹಾಗೇನಿಲ್ಲ ಎನ್ನುವದನ್ನು ವಿಟಿಯುನಲ್ಲಿ ವಿದ್ಯಾಥರ್ಿನಿಯರು ಸಾಬೀತು ಮಾಡಿ ತೋರಿಸಿದ್ದಾರೆ. ಮಹಿಳೆ ಅಬಲ ಅಲ್ಲ ಅವಳು ಸಬಲೇ ಎನ್ನುವದು ಕೂಡಾ ಇಲ್ಲಿ ರುಜುವಾತಾದಂತಾಗಿದೆ. ಮುಂಬರುವ ಫೆಬ್ರುವರಿಯ 8ನೇ ದಿನಾಂಕದಂದು ಐವರು ವಿದ್ಯಾಥರ್ಿನಿಯರು ಸುಮಾರು 43 ಚಿನ್ನದ ಪದಕಗಳನ್ನು ಬೇಟೆಯಾಡುವ ಮೂಲಕ ಐದು ಸ್ಥಾನಗಳಲ್ಲಿ ಪುರುಷ ವಿದ್ಯಾಥರ್ಿಗಳಿಗೆ ಒಂದು ಕೂಡ ಸ್ಥಾನ ಬಿಟ್ಟುಕೊಡದೆ ಈ ಭಾರಿಯ ಘಟಿಕೋತ್ಸವದಲ್ಲಿ ವಿದ್ಯಾಥರ್ಿನಿಯರು ತಮ್ಮದೆಯಾದ ಛಾಪು ಮೂಡಿಸಿದ್ದಾರೆ.

ಮಹಿಳೆ ಎಂದರೆ ಮನೆಗೆಲಸ ಮಾಡಿ ಮಕ್ಕಳ, ಪತಿ ಸೇವೆ ಮಾಡುತ್ತ ಇರುವ ಇಂತಹ ಕಾಲದಲ್ಲಿ ಈ ವಿದ್ಯಾಥರ್ಿಗಳ ಸಾಧನೆ ಎಲ್ಲ ವಿದ್ಯಾಥರ್ಿನಿಯರಿಗೆ ಮಾದರಿಯಾಗಲಿದೆ. ಸರಕಾರಗಳು ಕೂಡಾ ಸಮಾಜದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಲಿ ಎನ್ನುವ ಆಶಾಭಾವನೆಯನ್ನು ಹೊಂದಿ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಿ ಪ್ರೋತ್ಸಾಹ ನೀಡಿದೆ. ಅದರ ಈ ಆಶೆಗೆ ಅನುಗುಣವಾಗಿ ಮಹಿಳೆಯರು ಕೂಡಾ ಎಲ್ಲ ಕ್ಷೇತ್ರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಾವು ಯಾವ ಕ್ಷೇತ್ರದಲ್ಲಿ ಕಡಿಮೆ ಇಲ್ಲ ಎನ್ನುವದನ್ನು ಸಾಭೀತು ಮಾಡಲು ಹೊರಟಿರುವ ದು ಶ್ಲಾಘನಿಯವಾಗಿದೆ. 

ವಿಟಿಯುನಲ್ಲಿ ಪದಕ ಪಡೆಯಲಿರುವ ವಿದ್ಯಾಥರ್ಿನಿಯರು: ಮಂಗಳೂರಿನ ಸಂಥ ಜೋಸೆಫ್ ಎಂಜನೀಯರಿಂಗ್ ಕಾಲೇಜು ವಿದ್ಯಾಥರ್ಿನಿ ಕು. ಮಹಿಮಾ ಎಸ್. ರಾವ್ (ಸಿವಿಲ್ ಬ್ರ್ಯಾಂಚ್) 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅದರಂತೆ ಮೂಡುಬಿದಿರೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾಥರ್ಿನಿ ಸನ್ಮತಿ ಎಸ್. ಪಾಟೀಲ ಇವಳು 11 ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಲೆಕ್ಟ್ರಿಕಲ್ನ ವಿದ್ಯಾಥರ್ಿನಿಯಾದ ಕು. ವಿದ್ಯಾ ಜಿ. ಎಸ್. 7 ಪದಕಗಳನ್ನು ಪಡೆದಿದ್ದಾರೆ.

ಅಲ್ಲದೆ ಮೈಸೂರಿನ ಜೆಎಸ್ಎಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಫಾರ್ ಉಮೇನ್ನ ವಿದ್ಯಾಥರ್ಿನಿ ದಿವ್ಯಾ ಚಟ್ಟಿ ಅವರು 6 ಚಿನ್ನದ ಪದಕ ಪಡೆದಿದ್ದಾರೆ. ಪುತ್ತೂರಿನ. ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಇಎನ್ಸಿ ವಿದ್ಯಾಥರ್ಿನಿಯಾದ ಸಿಂಧೂರ ಎಸ್. ಸರಸ್ವತಿ ಅವರು 6 ಚಿನ್ನದ ಪದಕ ಪಡೆಯುವ ಮೂಲಕ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಹಿಳೆಯ ಪರವಾಗಿ ಹೊಸ ಇತಿಹಾಸ ನಿಮರ್ಿಸಲಿದ್ದಾರೆ.

ವಿದ್ಯಾಥರ್ಿನಿಯರ ಈ ಸಾಧನೆಗೆ ವಿಟಿಯು ಇತಿಹಾಸದಲ್ಲಿ ಒಂದು ಹೊಸ ಯುವ ಬರೆಯುವಂತಾಗಿದೆ. ಅಲ್ಲದೆ ಈ ವಿದ್ಯಾಥರ್ಿನಿಯರ ಸಾಧನೆಯ ಕುರಿತು ಮಹಿಳಾಮಣಿಗಳಿಂದ ಶ್ಲಾಘನೆ ಕೂಡಾ ವ್ಯಕ್ತವಾಗತೊಡಗಿದೆ.