ಉತ್ತರಪ್ರದೇಶ: ಸಹೋದ್ಯೋಗಿಯಿಂದ ಸಬ್ ಇನ್ಸ್‌ಪೆಕ್ಟರ್ ಹತ್ಯೆ

ಬುಲಂದ್‌ಶಹರ್, ಏಪ್ರಿಲ್ 25, ಜಿಲ್ಲೆಯ ಬೀಬಿನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಅವರನ್ನು ಅವರ ಸಹೋದ್ಯೋಗಿ ಶುಕ್ರವಾರ ತಡರಾತ್ರಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಘಟನಾ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌(ಎಸ್‍ಐ) ನನ್ನು ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ಸಂತೋಷ್ ಕುಮಾರ್ ಸಿಂಗ್ ಇಲ್ಲಿ ತಿಳಿಸಿದ್ದಾರೆ.ಎಸ್‌ಐ ಬ್ರಜೇಂದ್ರ ಸಿಂಗ್ ಬಿಬಿನಗರ ಪೊಲೀಸ್ ಠಾಣೆಯೊಳಗೆ ತಮ್ಮ ಸ್ಥಳದಲ್ಲಿ ಮಲಗಿದ್ದಾಗ ಮತ್ತೊಬ್ಬ ಎಸ್‌ಐ ನರೇಂದ್ರ ಸಿಂಗ್ ಅವರ ಕೊಠಡಿಗೆ ನುಗ್ಗಿ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾನೆ.ಆದರೆ, ರಿವಾಲ್ವರ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿತು ಆರೋಪಿ ಎಸ್‌ಐ ಹೇಳಿದ್ದಾರೆ.ನಂತರ ಆರೋಪಿ ಎಸ್‍ಐ, ಗುಂಡೇಟಿನಿಂದ ಗಾಯಗೊಂಡ ಎಸ್‍ಐ ನನ್ನು ತನ್ನ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಗಾಯಗೊಂಡ ಎಸ್‍ಐ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳುತ್ತಿದ್ದಂತೆ ಆರೋಪಿ ಎಸ್‍ಐ  ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಆರೋಪಿ ಎಸ್‌ಐ ತನ್ನ ಕಾರಿನಲ್ಲಿ ಗಾಜಿಯಾಬಾದ್‌ನ ಮಸೂರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಗುತ್ತಿದ್ದಾಗ ಬಂಧಿಸಲಾಗಿದೆ. ನತದೃಷ್ಟ ಎಸ್‌ಐ ಗಾಜಿಯಾಬಾದ್‌ನ ಮುರಾದ್‌ನಗರ ಪ್ರದೇಶದ ಜಲಾಲಾಬಾದ್ ಗ್ರಾಮದ ಮೂಲದವರಾಗಿದ್ದಾರೆ.