ಕಬ್ಬಿನ ರವದಿಯನ್ನು ಗೊಬ್ಬರವಾಗಿ ಉಪಯೋಗಿಸುವದು ಲಾಭದಾಯಕೆ

Using sugarcane pulp as fertilizer is profitable

ವರದಿ ಸಂತೋಷ್ ಕುಮಾರ್ ಕಾಮತ್ 

ಮಾಂಜರಿ 24: ಹೆಚ್ಚುತ್ತಿರುವ ಕಬ್ಬಿನ ಉತ್ಪಾದನಾ ವೆಚ್ಚವನ್ನು ಪರಿಗಣಿಸಿ, ರವದಿಯಿಂದ ಗೊಬ್ಬರವಾಗಿ  ಉಪಯೋಗಿಸುವದು ಲಾಭದಾಯಕವಾಗಿದೆ ಆದ್ದರಿಂದ  ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಹಲವು ಕಬ್ಬು ಬೆಳೆಯುವ ರೈತರು ಕಬ್ಬು ಅರೆಯುತ್ತಿರುವುದು ಕಂಡು ಬರುತ್ತಿದೆ. ದಿನದಿಂದ ದಿನಕ್ಕೆ ಕಬ್ಬು ಕಟಾವ ಆದ ನಂತರ ಉಳಿದ ರವದಿ  ಪಾಚಟ್ ಕುಟ್ಟಿಯತ್ತ (ರವದಿ ಪುಡಿ) ರೈತರ ಒಲವು ಹೆಚ್ಚುತ್ತಿದೆ. 

ಬೆಳಗಾವಿ ಜಿಲ್ಲೆಯನ್ನು ಕಬ್ಬಿನ ತೋಟಗಾರಿಕಾ ವಲಯ ಎಂದು ಕರೆಯಲಾಗುತ್ತದೆ. ರೈತರು ವಿವಿಧ ಪ್ರಯೋಗಗಳನ್ನು ಮಾಡುವ ಮೂಲಕ ಹೆಚ್ಚು ಕಬ್ಬು ಉತ್ಪಾದಿಸಲು ಪ್ರಯತ್ನಿಸುತ್ತಾರೆ. ಕಬ್ಬು ಕಟಾವ ನಂತರ ಕಬ್ಬಿನ ಎಲೆಗಳು ಉಳಿಯುತ್ತವೆ. ಕೆಲವು ರೈತರು ಈ ಎಲೆಗಳನ್ನು  ಸುಡುತ್ತಾರೆ. ಇದರಿಂದ ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತದೆ. ರೈತರು ರವದಿಯನ್ನು ಸುಡದೆ ಇದನ್ನು ಟ್ಯಾಕ್ಟರ್ ಮುಖಾಂತರ ಪುಡಿ ಮಾಡಿಕೊಂಡು ಜಮೀನಲ್ಲಿ ಹಾಕಬೇಕು. ಇದರಿಂದ ಹೆಕ್ಟರಿಗೆ 8- 10 ಮೆಟ್ರಿಕ್ ಟನ್ ಗೊಬ್ಬರ ಸಿಗುತ್ತದೆ. ಇದರಿಂದ ಭೂಮಿಗೆ ಸಾವಯವ ಗೊಬ್ಬರ ಸಿಗುತ್ತದೆ, ಮಣ್ಣಿನಲ್ಲಿರುವ ಜೀವಾಣುಗಳ ಸಂಖ್ಯೆ ಹೆಚ್ಚಾಗುತ್ತದೆ, ಕಳೆ ನಿಯಂತ್ರಣವಾಗುತ್ತದೆ,ಸ್ನೇಹಿ ಕೀಟಗಳ ಸಂಖ್ಯೆ ಹೆಚ್ಚಾಗುತ್ತದೆ. ನೀರು ಉಳಿತಾಯವಾಗುತ್ತದೆ. ಕಾರಣ ಕಬ್ಬು ಕಟಾವು  ಮಾಡಿದ ನಂತರ ಉತ್ತಮ ಬೆಳೆ ತೆಗೆದುಕೊಳ್ಳಲು ರೈತರು ರವಧಿಯನ್ನು ಸುಡದೇ ಅದನ್ನು ಪುಡಿ ಮಾಡಿ ಗೊಬ್ಬರವಾಗಿ ಉಪಯೋಗಿಸುತ್ತಿದಾರೆ. 

ಕಬ್ಬು ಕಾರ್ಖಾನೆಗೆ ಬಂದ ನಂತರ  ಟ್ರ್ಯಾಕ್ಟರ್‌ಗಳ ಸಹಾಯದಿಂದ ರವದಿ ಪುಡಿಮಾಡಲಾಗುತ್ತದೆ. (ರವದಿ ಪುಡಿ) ಪಾಚಟ್ ಕುಟ್ಟಿ ಹೊದಿಕೆಯು ಕಳೆಗಳನ್ನು ತಡೆಯುತ್ತದೆ. ನೀರು ಆವಿಯಾಗುವದನು ತಡೆದು ನೀರಿನ ಉಳಿತಾಯವಾಗುತ್ತದೆ. ಅಲ್ಲದೆ ಶೇ.25ರಿಂದ 30ರಷ್ಟು ರಾಸಾಯನಿಕ ಗೊಬ್ಬರ ಉಳಿತಾಯವಾಗುತ್ತದೆ. ರವದಿ ಬೇಗ ಕಳೆಯಲು 25 ಕೆಜಿ ಯೂರಿಯ,100 ಕೆಜಿ ಖಖಕ ಹಾಕುವದು, ಮತ್ತು ವೇಸ್ಟ್‌ ಡಿಕಂಪೋಸರ  ಜೈವಿಕ ಓಷಧಗಳನ್ನು ಸಿಂಪಡಿಸಲಾಗುತ್ತದೆ. ಇದರಿಂದ ಉತ್ಪಾದನಾ ವೆಚ್ಚ ಉಳಿತಾಯವಾಗುತ್ತದೆ. 

- ಸಚಿನ್ ಮೋಪಗಾರ, ಕಬ್ಬು ವಿಭಾಗದ ಕೃಷಿ ಅಧಿಕಾರಿ, ಕೋರೆ ಕಾರ್ಖಾನೆ 

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ರೂವಾರಿಗಳಾದ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹಾಗೂ ಸಕ್ಕರೆ ಕಾರ್ಖಾನೆ ಮಹಾಮಂಡಲ ಹೊಸದೇಲಿಯ ನಿರ್ದೇಶಕರಾದ ಅಮಿತ್ ಕೋರೆ ಇವರ ಮಾರ್ಗದರ್ಶನದಲ್ಲಿ ಸಕ್ಕರೆ ಕಾರ್ಖಾನೆಯ 

ಕಬ್ಬು ಉತ್ಪಾದಕ ಸದಸ್ಯರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಮಾಡಲು ಕೃಷಿ ಇಲಾಖೆಯಿಂದ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗಳನ್ನು ಪಡೆಯಲು 

ಸಕ್ಕರೆ ಕಾರ್ಖಾನೆಯ  ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ. 

ರಾಹುಲ್ ಇಚಲಕರಂಜೆ, ಕೃಷಿ ಅಧಿಕಾರಿ, ಕೋರೆ ಸಕ್ಕರೆ ಕಾರ್ಖಾನೆ