ಎ. 8ರಿಂದ 12ರ ವರೆಗೆ 38ನೇ ಶರಣ ಸಂಸ್ಕೃತಿ ಉತ್ಸವ
ರಾಯಬಾಗ, 04: ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಎ.8 ರಿಂದ 12ರ ವರೆಗೆ 38ನೇ ಶರಣ ಸಂಸ್ಕೃತಿ ಉತ್ಸವವು ವಿಜೃಂಭನೆಯಿಂದ ನಡೆಯಲಿದೆ.
ಎ.8 ರಂದು ಮುಂ.7 ಗಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಬಾವನಸೌಂದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ನೆರವೇರಿಸಲಿದ್ದಾರೆ. ಸಾನಿಧ್ಯವನ್ನು ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ ವಹಿಸಲಿದ್ದಾರೆ. ಮುಂ.8 ಗಂಟೆಗೆ ಕುಂಭಮೇಳ ಜರುಗಲಿದೆ. ಮುಂ.11 ಗಂಟೆಗೆ ರಾಷ್ಟ್ರೀಯ ಬೃಹತ್ ಕೃಷಿ ಮೇಳವನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ನಿಡಸೋಸಿ ದುರದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ನಡೆಯಲಿರುವ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ವೀರಭದ್ರ ಸ್ವಾಮೀಜಿ ವಹಿಸಲಿದ್ದಾರೆ. ಅತಿಥಿಗಳಾಗಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕ ಡಿ.ಎಮ್.ಐಹೊಳೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಗಮಿಸಲಿದ್ದಾರೆ. ಸಂಜೆ 6 ಗಂಟೆಗೆ ಮಹನ್ಯಾ ಪಾಟೀಲ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಎ.9 ರಂದು ಮುಂ.8 ಗಂಟೆಗೆ 365 ಲಿಂಗ ಪೂಜೆ ಹಾಗೂ ರುದ್ರಾಭಿಷೇಕ ಜರುಗಲಿದ್ದು, ಸಾನಿಧ್ಯವನ್ನು ಜೋಡಕುರಳಿ ಸಿದ್ದಾರೂಡ ಮಠದ ಚಿದಾನಂದ ಸ್ವಾಮೀಜಿ ಹಾಗೂ ನಾಗಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಸಂಸದ ಅಣ್ಣಾಸಾಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಆಗಮಿಸಲಿದ್ದಾರೆ. ಸಂಜೆ 5 ಗಂಟೆಗೆ ನಡೆಯಲಿರುವ ಪ್ರವಚನ ಹಾಗೂ ಸಂಗೀತ ಸುಧೆ ಕಾರ್ಯಕ್ರಮದ ಸಾನಿಧ್ಯವನ್ನು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ವಹಿಸಲಿದ್ದಾರೆ. ಅತಿಥಿಗಳಾಗಿ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಸದಲಗಾ-ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ, ಯುವ ಕಾಂಗ್ರೇಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ, ಗೊಮ್ಮಟೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎನ್.ಎ.ಮಗದುಮ್ಮ ಆಗಮಿಸಲಿದ್ದಾರೆ.
ಎ10 ರಂದು ಮುಂ.8 ಗಂಟೆಗೆ 63 ಶ್ರೀಗಳ ಪಾದಪೂಜೆ ಕಾರ್ಯಕ್ರಮ ಸಾನಿಧ್ಯವನ್ನು ಕವಲಗುಡ್ಡ ಸಿದ್ದಸಿರಿ ಸಿದ್ದಾಶ್ರಮದ ಅಮರೇಶ್ವರ ಮಹಾರಾಜರು ವಹಿಸಲಿದ್ದಾರೆ. ಅತಿಥಿಗಳಾಗಿ ವಿಧಾನಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ವಿಜಯಪೂರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹಾಗೂ ಸದಲಗಾ ಶಿವಾನಂದ ಮಠದ ಡಾ.ಶ್ರದ್ಧಾನಂದ ಸ್ವಾಮೀಜಿ ವಹಿಸಲಿದ್ದಾರೆ. ಅತಿಥಿಗಳಾಗಿ ಕುಡಚಿ ಶಾಸಕ ಮಹೇಂದ್ರ ತಮ್ಮಣವರ, ನಿವೃತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ, ತಹಶೀಲ್ದಾರ ಸುರೇಶ ಮುಂಜೆ, ಆದರ್ಶ ಸಂಸ್ಥೆ ಅಧ್ಯಕ್ಷ ಧೂಳಗೌಡ ಪಾಟೀಲ ಆಗಮಿಸಲಿದ್ದಾರೆ. ಸಂಜೆ 6ಗಂಟೆಗೆ ಬೆಂಗಳೂರಿನ ಹಾರಿಕಾ ಮಂಜುನಾಥ ಅವರಿಂದ ಭಾಷಣ ಕಾರ್ಯಕ್ರಮ ಜರುಗಲಿದೆ.
ಎ.11 ರಂದು ಮುಂ.8 ಗಂಟೆಗೆ ಮಕ್ಕಳಿಂದ ವಚನ ಕಂಠಪಾಠ ಸ್ಪರ್ಧೆ, ಮುಂ.9 ಗಂಟೆಗೆ ಮುಕ್ತ ರಂಗೋಲಿ ಸ್ಪರ್ಧೆ ಏರಿ್ಡಸಲಾಗಿದೆ. ಸಂಜೆ 4 ಗಂಟೆಗೆ ನಡೆಯಲಿರುವ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ ವಹಿಸಲಿದ್ದಾರೆ. ಬಸ್ತವಾಡದ ಬಸವರಾಜ ಶರಣರು ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ, ಬ್ಯಾಕೂಡ ಎ.ಎ.ಪಾಟೀಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವರಾಜ ಪಾಟೀಲ, ಸಿಪಿಐ ಬಿ.ಎಸ್.ಮಂಟೂರ ಆಗಮಿಸಲಿದ್ದಾರೆ. ಸಂಜೆ 6 ಗಂಟೆಗೆ ನಡೆಯುವ ಜನಪದ ಜಾತ್ರೆಯಲ್ಲಿ ಜನಪದ ಸಾಹಿತಿ ಶಂಭು ಬಳಿಗಾರ, ಕೃಷಿ ಪಂಡಿತ ಸಿದ್ದಪ್ಪ ಬಿದರಿ ಭಾಗವಹಿಸಲಿದ್ದಾರೆ.
ಎ.12 ರಂದು ಮುಂ.5 ಗಂಟೆಗೆ ಕೋಟಿ ಜಪಯಜ್ಞ ನಡೆಯಲಿದೆ. ಮುಂ.7 ಗಂಟೆಗೆ ಪಂಚ ಲಿಂಗಗಳಿಗೆ ರುದ್ರಾಭಿಷೇಕ ನಡೆಯಲಿದೆ. ಮುಂ.9 ಗಂಟೆಗೆ ನಡೆಯುವ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ಬಾವನಸೌಂದತ್ತಿ ಓಂಕಾರ ಆಶ್ರಮದ ಮಾತೋಶ್ರಿ ಭೃಮರಾಂಬಿಕಾ ಶಿವಯೋಗಿ, ಮೊಳವಾಡದ ಹರಿಭಕ್ತ ಸುಭಾಷ ಶೇವಾಳಗಿ ವಹಿಸಲಿದ್ದಾರೆ. ಅತಿಥಿಗಳಾಗಿ ಅಜೀತಸಿಂಗ ನಿಂಬಾಳಕರ, ಅಶೋಕಕುಮಾರ ನಿಂಬಾಳಕರ, ವಕೀಲರಾದ ಎಲ್.ಬಿ.ಚೌಗಲಾ ಆಗಮಿಸಲಿದ್ದಾರೆ. ಸಂಜೆ 6 ಗಂಟೆಗೆ ಸದ್ಭಕ್ತರಿಂದ ತೇರೋತ್ಸವ ಹಾಗೂ ಸಂಜೆ 7 ಗಂಟೆಗೆ ದೀಪೋತ್ಸವ ನಡೆಯಲಿದೆ.
ಉತ್ಸವಕ್ಕೆ ಬರುವ ಸದ್ಭಕ್ತರಿಗೆ ನಿತ್ಯ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಗ್ರಾಮಗಳಿಂದ ಬರುವ ಭಕ್ತಾದಿಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಭಾಗವಹಿಸಬೇಕೆಂದು ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.