ಬೆಳಗಾವಿ 28: ನಾಗನೂರು ಶಿವಬಸವೇಶ್ವರ ಟ್ರಸ್ಟ, ಚಿನ್ನಮ್ಮ ಹಿರೇಮಠ ವೃದ್ಧಾಶ್ರಮಕ್ಕೆ ವಿದೇಶಿ ನವದಂಪತಿಗಳಾದ ಅನಿರವನ ಶುಕ್ಲಾ ಹಾಗೂ ಕೆರೋಲಿನ್ ಶುಕ್ಲಾ ಭೇಟಿ ನೀಡಿ, ವೃದ್ಧಾಶ್ರಮದ ವಯೋವೃದ್ಧರೊಂದಿಗೆ ತಮ್ಮ ವಿವಾಹ ವಾರ್ಷಿಕೋತ್ಸವ ಸರಳವಾಗಿ ಆಚರಿಸಿಕೊಂಡರು.
ನಮ್ಮ ಭಾರತೀಯರು ಸಂಸ್ಕೃತಿಯ ಪ್ರಕಾರ ತಂದೆ ತಾಯಿಯರನ್ನು ಗೌರವ ನೀಡಿ ಪೂಜೆ ಮಾಡುತ್ತಾರೆ. ಆದರೆ ಈಗಿನ ಸಂದರ್ಭದಲ್ಲಿ ಕೆಲವು ಮಕ್ಕಳು ಉನ್ನತ ಹುದ್ದೆಯಲ್ಲಿ ಇದ್ದರೂ ತಂದೆ ತಾಯಿಯರನ್ನು ವೃದ್ರಾಶ್ರಮದಲ್ಲಿ ಬಿಡುತ್ತಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅನಿರವನ ಶುಕ್ಲಾ ಅವರು ನಾನು ಹಾಗೂ ನಮ್ಮ ಕುಟುಂಬದವರು ಭಾರತೀಯ ಮೂಲವಾದರು ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದೇವೆ. ಅಮೇರಿಕಾದ ಯುವತಿ ಕೆರೋಲಿನ್ ಜೊತೆಗೆ ವಿವಾಹವಾಗಿದ್ದೇನೆ. ಇಂದು ನಿಮ್ಮ ಜೊತೆ ಈ ನನ್ನ ಸಂತೋಷದ ಕ್ಷಣವನ್ನು ಹಂಚಿಕೊಳ್ಳುತ್ತಿರುವುದು ನಮ್ಮಿಬ್ಬರಿಗೂ ತುಂಬಾ ಖುಷಿ ತಂದಿದೆ ಎಂದರು.
ಕೆರೋಲಿನ್ ಶುಕ್ಲಾ ಅವರು ಮಾತನಾಡಿ, ಇದು ಭಾರತಕ್ಕೆ ನನ್ನ ಮೊದಲ ಭೇಟಿ. ಇಲ್ಲಿನ ಜನರ ಸ್ವಾಗತದಿಂದ ನನ್ನ ಮನ ತುಂಬಿ ಹೋಗಿದೆ. ವರ್ಷಕ್ಕೆ ಒಮ್ಮೆಯಾದರೂ ನಾನು ಇಲ್ಲಿ ಬಂದು ನಿಮ್ಮೆಲ್ಲರ ಜೊತೆ ಕಾಲ ಕಳೆಯಲು ಇಷ್ಟ ಪಡುತ್ತೇನೆ ಎಂದರು.
ವಿದೇಶಿ ನವ ಜೋಡಿ ವೃದ್ಧಾರಿಗೆ ಬೆಡ್ಶೀಟ್, ಮಚ್ಚರದಾಣಿ, ದಿನ ಬಳಕೆಗೆ ಸೋಪು ಹಾಗೂ ಊಟ ವಿತರಿಸಿ ಅವರ ಆಶೀರ್ವಾದ ಪಡೆದುಕೊಂಡು ಖುಷಿ ಪಟ್ಟರು.
ಈ ಸಂದರ್ಭದಲ್ಲಿ, ಅನಿರವನ ಶುಕ್ಲಾ ಹಾಗೂ ಕೆರೋಲಿನ್ ಶುಕ್ಲಾ ದಂಪತಿಗಳು, ಶಂಕರ ಶುಕ್ಲಾ ಹಾಗೂ ದುರ್ಗಾ ಶುಕ್ಲಾ ದಂಪತಿಗಳು (ತಂದೆ-ತಾಯಿ), ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ ಸುರೇಖಾ ಪಾಟೀಲ್, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ನಿರೂಪಕರಾದ ಆರ್.ಜೆ ಚೇತನ, ಜಾನಕಿ, ಅಲಾಭಕ್ಷ ಹಾಗೂ ವೃದ್ಧಾಶ್ರಮದ ಫಲಾನುಭವಿಗಳು ಉಪಸ್ಥಿತರಿದ್ದರು.