ತಲ್ಲೂರ ಗ್ರಾಮಸ್ಥರಿಂದ ಶಾಸಕ ವಿಶ್ವಾಸ ವೈದ್ಯ ಅವರಿಗೆ ಗೌರವ ಸನ್ಮಾನ
ಯರಗಟ್ಟಿ, 04; ದೇವಸ್ಥಾನದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳದರು.ಸಮೀಪದ ತಲ್ಲೂರ ಗ್ರಾಮದ ಗ್ರಾಮದೇವಿ ದೇವಸ್ಥಾನ ಕಟ್ಟಡ ಜೀರ್ಣೋದ್ದಾರಕ್ಕೆ 20 ಲಕ್ಷ ರೂ ಅನುದಾನ ಮಂಜುರು ಮಾಡಿದ ಹಿನ್ನಲೆ ಇತ್ತೀಚಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇವಸ್ಥಾನಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಸಿಸಿ ರಸ್ತೆ ಮಾಡುವದಾಗಿ ಭರವಸೆ ನೀಡಿದರು.ವೇದ ಮುರ್ತಿ ಪ್ರಸನ್ನ ಶಾಸ್ತ್ರಿ ಮಾತನಾಡಿ, ಸಮಾಜ ಮತ್ತು ದೇಶದ ಏಳಿಗೆಗೆ ದುಡಿಯುತ್ತಿರುವ ಮಠಮಾನ್ಯಗಳ ಅಭಿವೃದ್ದಿಗೆ ಭಕ್ತರ ಸಹಕಾರ ಬೇಕು ಎಂದರು.ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಬಸಪ್ಪ ರೊಕ್ಕದಕಟ್ಟಿ, ಜಗದೀಶ ಹೊಸಮಠ, ಪಿಡಿಒ ವಿಜಯಕುಮಾರ, ಎಚ್.ಕೆ.ಚೌರಡ್ಡಿ, ಅಂಗಡಿ, ಶಶಿದರ ತಳವಾರ, ನೀಲಕಂಠ ಸರದಾರ, ಮಹಾಂತೇಶ ಉಪ್ಪಿನ, ರಾಜು ಪೂಜೇರ, ಸುಭಾನಿ ಕುದರಿ, ಬಸನಾಯ್ಕ ಚಿಕಾಕಿ, ಪ್ರಕಾಶ ಮುರಗೋಡ ಸೇರಿದಂತೆ ಇತರರು ಇದ್ದರು.