ಮ್ಯಾನ್ಮಾರ್ 28: ಮ್ಯಾನ್ಮಾರ್ ಕೇಂದ್ರಬಿಂದುವಾಗಿ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಿಂದ 10 ಕಿ.ಮೀ ದೂರ ವ್ಯಾಪ್ತಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದು 43 ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ಮತ್ತು ವೈದ್ಯರು ತಿಳಿಸಿದ್ದಾರೆ. ಬಲವಾದ ಭೂಕಂಪದಿಂದ ನಗರವು ನಲುಗಿಹೋಗಿದೆ.
ಭೂಕಂಪದ ಕೇಂದ್ರಬಿಂದು ಸಾಗಯಿಂಗ್ ನಗರದ ವಾಯುವ್ಯಕ್ಕೆ 16 ಕಿಮೀ ಮತ್ತು 10 ಕಿಮೀ ಆಳದಲ್ಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಮಾಹಿತಿ ನೀಡಿದೆ.
ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪನವು ಭಾರಿ ನಷ್ಟವನ್ನು ಉಂಟುಮಾಡಿದ್ದು ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿನ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದು ಭೂಕಂಪಕ್ಕೆ ಸಿಲುಕಿ ಏಕಾಏಕಿ ಕುಸಿದು ಬಿದ್ದಿದೆ ಈ ವೇಳೆ ಅಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿ ಹೋಗುವುದು ವಿಡಿಯೋದಲ್ಲಿ ಕಾಣಬಹುದು.
ಸೆಂಟ್ರಲ್ ಬ್ಯಾಂಕಾಕ್ ವಲಯದಲ್ಲೂ ಪ್ರಬಲ ಭೂಕಂಪ ಸಂಭವಿಸಿದೆ. 17 ದಶಲಕ್ಷಕ್ಕೂ ಹೆಚ್ಚು ಜನರು ಇಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿದ್ದಾರೆ. ಭೂಕಂಪ ಸಂಭವಿಸಿದ ವೇಳೆ ಕಟ್ಟದಲ್ಲಿದ್ದ ಜನ ಜೀವ ಭಯದಿಂದ ಕಟ್ಟಡದಿಂದ ಹೊರ ಬಂದು ನಿಂತಿದ್ದಾರೆ.
ಉತ್ತರ ಬ್ಯಾಂಕಾಕ್‌ನ ಜನಪ್ರಿಯ ಪ್ರವಾಸಿ ನಗರವಾದ ಚಿಯಾಂಗ್ ಮಾಯ್‌ನಲ್ಲೂ ಭೂಕಂಪನದ ಅನುಭವಾಗಿದ್ದು ಇದರ ಜೊತೆಗೆ ಉತ್ತರ ಮತ್ತು ಮಧ್ಯ ಥೈಲ್ಯಾಂಡ್‌ನಲ್ಲಿ ಭೂಕಂಪದ ಅನುಭವವಾಗಿದ್ದು ನಿವಾಸಿಗಳು ಮನೆಯಿಂದ ಹೊರ ಓಡಿ ಬಂದಿರುವುದಾಗಿ ಹೇಳಿದ್ದಾರೆ. ಜೊತೆಗೆ ಮೇಘಾಲಯ ಸೇರಿದಂತೆ ಈಶಾನ್ಯದ ಹಲವು ರಾಜ್ಯಗಳಲ್ಲೂ ಕಂಪನದ ಅನುಭವಾಗಿದೆ ಎಂದು ಹೇಳಲಾಗಿದೆ.
ಥಾಯ್ಲೆಂಡ್ ಹೊರತುಪಡಿಸಿ, ಚೀನಾದ ನೈಋತ್ಯ ಯುನ್ನಾನ್ ಪ್ರಾಂತ್ಯದಲ್ಲೂ ಕಂಪನದ ಅನುಭವವಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.
ಮ್ಯಾನ್ಮಾರ್ ರಾಜಧಾನಿ ನೇಪಿಡಾವ್‌ನಲ್ಲಿ ಕಟ್ಟಡಗಳಿಂದ ಛಾವಣಿಗಳು ಬಿದ್ದು, ರಸ್ತೆಗಳು ಕುಸಿದುಹೋದವು. ಇದು 20 ಲೇನ್‌ಗಳ ಅಗಲದ ಹೆದ್ದಾರಿಗಳನ್ನು ಹೊಂದಿರುವ ವಿಸ್ತಾರವಾದ ನಗರವಾಗಿದೆ. ಸಮವಸ್ತ್ರ ಧರಿಸಿದ ಸಿಬ್ಬಂದಿ ಹೊರಗೆ ಓಡಿಹೋದಾಗ ಸೀಲಿಂಗ್‌ನಿಂದ ತುಂಡುಗಳು ಬಿದ್ದವು, ಗೋಡೆಗಳು ಬಿರುಕು ಬಿಟ್ಟವು, ಅವರಲ್ಲಿ ಕೆಲವರು ನಡುಗುತ್ತಾ ಕಣ್ಣೀರು ಸುರಿಸುತ್ತಿದ್ದರು, ತಮ್ಮ ಜನರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು.
ಭೂಕಂಪದ ನಂತರ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ ಆದರೆ ಅವು ಉತ್ತರ ಥೈಲ್ಯಾಂಡ್‌ನ ಹತ್ತಿರದ ನಗರಗಳಲ್ಲಿ ಮತ್ತು ರಾಜಧಾನಿ ಬ್ಯಾಂಕಾಕ್‌ವರೆಗೆ ಭೀತಿಯನ್ನುಂಟುಮಾಡಿದವು.