ಕೊಪ್ಪಳ ಜ.28: ನಗರದ ಹೊರ ವಲಯದ ಹುಲಿಕೆರೆ ರಸ್ತೆಯಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿರುವ ಪುರಾತನ ಕಾಲದ ಐತಿಹಾಸಿಕ ಪ್ರಸಿದ್ಧ ಸರ್ಕಾರ್ ಸಯ್ಯದ್ ಮಧರ್ಾನೆಗೈಬ್ ವಾಸಲಾನೆಹಖ್ ಖಲಂದರ್ ಸಹರ್ ವರದಿ ಮದನಿ ಉರ್ಫ ಮಧರ್ಾನೆ ದರ್ಗಾದ ಉರುಸೆ ಷರೀಫ್ ಕಾರ್ಯಕ್ರಮ ಬರುವ ಫೆ.13 ರಿಂದ 15 ರವರೆಗೆ ಮೂರು ದಿನಗಳ ಕಾಲ ಸಡಗರ ಸಂಭ್ರಮದಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಜರುಗಲಿದೆ.
ಫೆ.13 ರ ಗುರುವಾರ ಸಂಜೆ ಗಂಧ, ಫೆ.14 ರ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಉರುಸೆ ಷರೀಫ್ ಕಾರ್ಯಕ್ರಮ ಮತ್ತು ಅದೇ ದಿನ ಸಂಜೆಯ ವೇಳೆಗೆ ಬಹಿರಂಗ ಸಾರ್ವಜನಿಕ ಧಾರ್ಮಿಕ ಪ್ರವಚನ ಕಾರ್ಯಕ್ರಮ ಜರುಗಲಿದ್ದು,ಅದೇ ರಾತ್ರಿ ವೇಳೆಯಲ್ಲಿ ಕವ್ವಾಲಿ ಕಾರ್ಯಕ್ರಮ ಮತ್ತು ಮಹೆಫಿಲೆ ಸಮಾ ಕಾರ್ಯಕ್ರಮ ಜರುಗಲಿದೆ. ಮರುದಿನ ಫೆ.15 ರ ಶನಿವಾರ ಬೆಳಗಿನ ಜಾವ ಜಿಯಾರತ್ ಕಾರ್ಯಕ್ರಮ ವಿಶೇಷ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಮೂರು ದಿನಗಳ ಕಾಲ ಅನ್ನಸಂತರ್ಪಣೆ ಜರುಗಲಿದೆ. ಸದರಿ ಕಾರ್ಯಕ್ರಮದಲ್ಲಿ ಧಾರ್ಮಿಕ ಗುರುಗಳು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಭಾಗವಹಿಸಲಿದ್ದು, ದಗರ್ಾದ ಹಿಂದು ಮುಸ್ಲಿಂ ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉರುಸೆ ಷರೀಫ್ ಕಾರ್ಯಕ್ರರ ಯಶಸ್ವಿಗೊಳಿಸಲು ದಗರ್ಾ ಕಮೀಟಿಯ ಅಧ್ಯಕ್ಷರಾದ ಮೌಲಾನಾ ಮುಫ್ತಿ ಮೊಹ್ಮದ್ ನಜೀರ್ ಅಹ್ಮದ್ ಖಾದ್ರಿ-ವ-ತಸ್ಕೀನಿರವರು ಪ್ರಕಟಣೆಯ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.