ಇಂದು ರಾಜಾಬಾಗ್ ಸವಾರ ದರ್ಗಾದ ಉರುಸ್ ಆಚರಣೆ
ಕೊಪ್ಪಳ 18: ನಗರದ ಪ್ರಮುಖ ಜವಾಹ ರಸ್ತೆಯಲ್ಲಿರುವ ಐತಿಹಾಸಿಕ ಪುರಾತನ ಕಾಲದ ಧಾರ್ಮಿಕ ಸುಕ್ಷೇತ್ರ ಹಿಂದೂ ಮುಸ್ಲಿಮರ ಭಾವ್ಯತೆಯ ಪ್ರತೀಕ ಹಜರತ್ ರಾಜ ಬಾಗ್ ಸವಾರ್ ದರ್ಗಾದ ಉರುಸ್ ಆಚರಣೆ ದಿ, 19ರ ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೆ ಜರುಗಲಿದೆ ಮರುದಿನ ದಿ, 20ರ ಗುರುವಾರ ಬೆಳಗಿನ ಜಾವ ಜಿಯಾರತ್ ವಿಶೇಷ ಪ್ರಾರ್ಥನೆ ದೊಂದಿಗೆ ಉರುಸ್ ಆಚರಣೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ ಬುದುವಾರ ಉರುಸ್ ಆಚರಣೆ ನಿಮಿತ್ಯ ಬೆಳಿಗ್ಗೆ 10:30 ಗಂಟೆಗೆ ದರ್ಗಾ ಆಡಳಿತ ಮಂಡಳಿ ಅಧ್ಯಕ್ಷರಾದ ಮೌಲಾ ಹುಸೇನ್ ಜಮೆದಾರ್ ರವರ ನೇತೃತ್ವದಲ್ಲಿ ವಿಶೇಷ ಫಾತೆಹಾ ಪ್ರಾರ್ಥನೆ ಜರುಗಲಿದೆ, ಜನಪ್ರತಿನಿಧಿಗಳು ಗಣ್ಯರು ಭಾಗವಹಿಸಲಿದ್ದಾರೆ ಎಂದು ಉರುಸ್ ಆಚರಣೆ ಸಮಿತಿಯ ಸೇವಕ ಮುಜಾವರ್ ಮರ್ದಾನ್ ಅಲಿ ಮುಜಾವರ್ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.