ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಪ್ರಥಮ ಯಶಸ್ವಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ
First successful kidney transplant surgery at KLE Centenary Charitable Hospital
ಲೋಕದರ್ಶನ ವರದಿ
ಬೆಳಗಾವಿ 18 : ನಾಗರಿಕರ ಆರೋಗ್ಯ ಕಾಯಲು ನಮ್ಮ ಕೆಎಲ್‌ಇ ಸಂಸ್ಥೆಯು ಯಾವತ್ತೂ ಸಿದ್ದವಾಗಿರುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾದ ಡಾ. ಪ್ರಬಾಕರ ಕೋರೆ ಅವರು ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆಎಲ್‌ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆಯ ಚರಕಾ ಸಭಾಂಗಣದಲ್ಲಿ ನಡೆದ “ ಪ್ರಥಮ ಮೂತ್ರಪಿಂಡ ಕಸಿ” ಶಸ್ತ್ರಚಿಕಿತ್ಸೆಯ ಪತ್ರಿಕಾ ಗೋಷ್ಟಿಯ ಅಂಗವಾಗಿ ಮಾತನಾಡುತ್ತಿದ್ದರು. ಉತ್ತರ ಕರ್ನಾಟಕದ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಉನ್ನತ ಸ್ಥಾನದಲ್ಲಿರುವ ನಮ್ಮ ಕೆಎಲ್‌ಇ ಸಂಸ್ಥೆಯು ನಾಗರಿಕರ ಆರೋಗ್ಯ ಕಾಯುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ.
ಅದಕ್ಕೆ ಸಾಕ್ಷಿಯೆಂಬಂತೆ 150 ಕ್ಕೂ ಅಧಿಕ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ನಮ್ಮ ಕೆಎಲ್‌ಇ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಅದರಂತೆ ದಕ್ಷಿಣ ಬೆಳಗಾವಿಯ ಮುಖ್ಯ ಆರೊಗ್ಯ ಕೇಂದ್ರವಾಗಿರುವ ಇಲ್ಲಿಯೂ ಕೂಡ ಪ್ರಾರಂಬಿಸಲಾಗಿದೆ. ಎಂದು ಹೇಳುತ್ತಾ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ ಸಂಪೂರ್ಣ ವೈದ್ಯಕೀಯ ತಂಡಕ್ಕೆ ಅಭಿನಂದಿಸಿದರು ಹಾಗೂ ಮುಂದೆಯೂ ಉನ್ನತ ಗುಣಮಟ್ಟದ ಆರೋಗ್ಯಸೇವೆಯನ್ನು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಇನ್ನೂ ಅಧಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಅಭಿಮತ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿದ ಡಾ. ರಾಜೇಂದ್ರ ಬಿ ನೆರಲಿ ಅವರು ಮಾತನಾಡುತ್ತ “ 67 ವರ್ಷದ ವಯಸ್ಸಿನ ರೋಗಿಯು ನಮ್ಮ ಬಳಿಗೆ ಬಂದಾಗ ಕಡ್ನಿ ವೈಪಲ್ಯದ ಕೊನೆಯ ಹಂತದಲ್ಲಿದ್ದನು, ಮಧುಮೇಹಿಗಿದ್ದ ಈತನ ಕ್ರಿಯಾಟಿನೈನ 8 ಇತ್ತು, ಮತ್ತು ಇನ್ನಿತರೆ ಕಿಡ್ನಿ ಸಂಭಂದಿತ ಸಮಸ್ಯೆಗಳಿಂದ ಬಳಲುತ್ತಿದ್ದನು. ನಂತರ ಆತನಿಗೆ ಕಿಡ್ನಿ ಕಸಿಯ ಬಗ್ಗೆ ಸಮಾಲೋಚನೆ ಮಾಡಲಾಗಿ ಆತನು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡನು, ಅದರಲ್ಲಿಯು ಆತನ ಸ್ವಂತ ಮಗಳೆ ಆತನಿಗೆ ಕಿಡ್ನಿ ನೀಡಲು ಮುಂದೆ ಬಂದದ್ದು ಗಮನಾರ್ಹವಾಗಿದೆ.
ನಂತರ ಇಬ್ಬರಿಗೂ ತಕ್ಕ ಸಮಾಲೋಚನೆಯ ಮಾಡಲಾಗಿ ಕಾನೂನಾತ್ಮಕ ಪರಿಕರಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿದ ಮೇಲೆ ದಾನಿಯಿಂದ ಕಿಡ್ನಿಯನ್ನು ಡಾ. ರಾಜೇಂದ್ರ ನೆರಲಿ,ಡಾ. ಅಮೇಯ ಪಥಾಡೆ, ಡಾ. ಶಿಶಿರ ದೇವರಾಜು, ಡಾ. ದರ್ಶನ ಹಾಗೂ ಅರವಳಿಕೆ ತಜ್ಞರಾದ ಡಾ. ಆರ್ ಜಿ ನೆಲವಿಗಿ, ಡಾ. ಸುರೇಶ, ಡಾ. ಸೀಮಾ ಚಿಕ್ಕನಗೌಡರ ಮತ್ತು ಮೂತ್ರಪಿಂಡ ಶಾಸ್ತ್ರಜ್ಞ ಡಾ. ಅಂಜನೇಯ ಯಡೂರ ಮತ್ತು ತಂಡದವರು ಸಹಕಾರ್ಯದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾರ್ಚ 10ರಂದು ನೆರವೇರಿಸಲಾಗಿದೆ. ರೋಗಿಯು ಗುಣಮುಖನಾಗಿದ್ದು ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ ಮಾಡಲಾಗುವದು” ಎಂದು ಸಂತಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮೂತ್ರಪಿಂಡಶಾಸ್ತ್ರಜ್ಞ ಡಾ. ಅಂಜನೇಯ ಯಡೂರ ಅವರು ಮಾತನಾಡುತ್ತ ಶಸ್ತ್ರಚಿಕಿತ್ಸೆಗ ಮೊದಲು ರೋಗಿಯ ರಕ್ತದಲ್ಲಿನ ಹಾನಿಕಾರಕ ಪ್ರತಿಕಾಯಗಳನ್ನು ಅಂಶಗಳನ್ನು ಕಡಿಮೆಗೊಳಿಸಲು ವಿಶೇಷ ಚಿಕಿತ್ಸೆಯನ್ನು ನೀಡಲಾಯಿತು. ನಂತರ ಕಿಡ್ನಿ ಕಸಿಯ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಯಿತು. ಕಿಡ್ನಿಯನ್ನು ಮರುಜೋಡಿಸಿದ ತಕ್ಷಣವೇ ಕಾರ್ಯಾರಂಭ ಮಾಡಿ ರೋಗಿಯು ಸರಿಯಾದ ಪ್ರಮಾಣದ ಮೂತ್ರ ವಿಸರ್ಜನೆ ಮಾಡಲಾರಂಭಿಸಿದನು. ಇದು ಯಶಸ್ವಿ ಶಸ್ತ್ರಚಿಕಿತ್ಸೆಯ ಲಕ್ಷಣಗಳಲ್ಲಿ ಪ್ರಮುಖವಾಗಿದೆ. ಅಲ್ಲದೇ ರೋಗಿಗೆ ಜೀವನಪೂರ್ತಿ ಓಷದೋಪಚಾರ ಮತ್ತು ನಿಯಮಿತ ತಪಾಸಣೆಯ ಅವಶ್ಯಕತೆಯಿದೆ ಎಂದು ತಿಳುವಳಿಕೆ ನೀಡಿದರು.
ಯುಎಸ್ ಎಮ್ ಕೆಎಲ್‌ಇ ಯ ನಿರ್ದೇಶಕರಾದ ಡಾ. ಹೆಚ್‌ಬಿ ರಾಜಶೇಖರ ಸ್ವಾಗತಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬಾರ ವಂದಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹನಾದಿಕಾರಿ ನವೀನ ಎನ್, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಕರ್ನಲ್. ಡಾ. ಎಮ್ ದಯಾನಂದ ಅವರು, ಮೂತ್ರಪಿಂಡ ದಾನಿಯ ಕುಟುಂಬದವರು, ಕಿಡ್ನಿ ಸ್ವೀಕರಿಸಿದ ರೊಗಿಯ ಕುಟುಂಬದವರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 20 ಕ್ಕೂ ಅಧೀಕ ಸುದ್ದಿಮಾಧ್ಯಮಗಳ ಪ್ರತಿನಿಧಿಗಳು ಭಾಗವಹಿದ್ದರು. ಕಾರ್ಯಕ್ರಮವನ್ನು ಜನಸಂಪಕಾಧಿಕಾರಿ ಸಂತೋಷ ಇತಾಪೆ ನಿರೂಪಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 