ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ

ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ Arrest of interstate officials who were defrauding people by duplicating money: SP praises Gokak pol

ಬೆಳಗಾವಿ  : ಹಣ ದ್ವಿಗುಣ ಮಾಡಿಕೊಡುವದಾಗಿ ಜನರನ್ನು ವಂಚಿನೆ ಮಾಡುತ್ತಿದ್ದ 7 ಜನರ ಅಂತರಾಜ್ಯ  ಖದೀಮರ ತಂಡವನ್ಮು ಗೋಕಾಕ ಪೊಲೀಸರು ಬಂಧಿಸಿರುವದಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೆ. ಅವರು ಹೇಳಿದರು.

    ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಗೋಕಾಕ ಶಹರದ ಮಲ್ಲಪ್ಪಾ ಕರೇಪ್ಪಾ ಕೊತ್ತಲ ಇವರ ಶ್ರೀ ನಗರದಲ್ಲಿರುವ ಮನೆಯಲ್ಲಿ ಹಣದ್ವಿಗುಣ ಮಾಡಿಕೊಡುವ ಬಗ್ಹೆ ಆಮಿಷ ತೊರಿಸಿ ಜನರಿಗೆ ಪಂಗನಾಮ ಹಾಕಲು ಯತ್ನಿಸಲಾಗುತ್ತಿತ್ತು. 

    ಈ ವಿಷಯ ಅರಿತು ಕಿರಣ ಮೋಹಿತೆ ಪಿಎಸ್‌ಐ ಗೋಕಾಕ ಶಹರ ಠಾಣಿ ಅವರ ನೇತೃತ್ವದಲ್ಲಿ ತನಿಖಾತಂಡವನ್ನು ರಚಿಸಿದ್ದು, ಸದರಿ ತನಿಖಾತತಂಡವು ರಾಮಗೊಂಡ ಬಸರಗಿ ಹೆಚ್ಚುವರಿ ಎಸ್.ಪಿ-01 ಮತ್ತು ರವಿ ನಾಯ್ಕ ಡಿ.ಎಸ್. ಪಿ.ಗೋಕಾಕ ಉಪವಿಭಾಗ ಹಾಗೂ ಸುರೇಶ ಬಾಬು ರ‍್ಬಿ ಸಿಪಿಐ ಗೋಕಾಕ ಇವರ ಮಾರ್ಗದರ್ಶನದಲ್ಲಿ ದಿ. 15ರಂದು ಗೋಕಾಕ ನಗರಸಲ್ಲಿ ದಾಳಿ ಮಾಡಿ 7 ಜನರನ್ನು ಬಂಧಿಸುವಲ್ಲಿ ಯಶಸಿಯಾಗಿದ್ದಾರೆ ಎಂದರು. 

   ಈ ಹಣ ದ್ವಿಗುಣ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರಾದ ಪರಶುರಾಮ ಭೀಮಶಿ ಬಡಕರಿ (36) ಇಮ್ರಾನ ಬಾಬಾಜಾನ ಜುನೇದಿ(27) ಸಾ: ಮೆಹಂದಿ ನಗರ ಗೋಕಾಕ, ಶ್ರೀಮತಿ ಜಯಶ್ರೀ ಬಾಬು ಕಾಂಬಳೆ (40),ಸಾ: ಶಾಹಿನ್ ಆಸ್ಪತ್ರೆ ಹತ್ತಿರ, ಶಿವಾಜಿ ನಗರ, ಬಾವದಾಜಿ ಶಾಹಿನ್ ಪಶ್ಚಿಮ ಮುಂಬೈ, ಶ್ರೀಮತಿ ಮನೀಷಾ ರಾಜು ಗಾಯಕವಾಡ ಉರ್ಫ ಮಾರ್ಗೇರೆಟ್ ಡೆವಿಡ್ ಗಾಯಕವಾಡ (41) ವರ್ಷ, ಸಾ: ತುಕಾಯಕಸಿಂಗು ತಾ: ನೇವಾಸ ಜಿ: ಅಹ್ಮದನಗರ, ಮಹಾರಾಷ್ಟöç, ಶ್ರೀಮತಿ ಉಜ್ವಲಾ ತುಳಸಿರಾಮ ಬಿಲಾನೆ (55) ಸಾ: ವಾಕಟೂಕಿ, ತಾ: ಧರಂಗಾವ ಜಿ: ಜಲಗಾಂವ, ಮಹಾರಾಷ್ಟöç, ಅನಂತ ಪ್ರಕಾಶ ನರವಾಡೆ (40), ಉದ್ಯೋಗ: ಪೊಲೀಸ್ ಕಾನ್ಸಟೇಬಲ್ ಠಾಣಿ ಸಿಟಿ ಹೆಡಕ್ವಾಟರ್ ಆಜದೆಗಾಂವ ಡೊಂಬಾವಲಿ ಪೂರ್ವ ತಾ: ಕಲ್ಯಾಣ ಜಿ: ಥಾಣಿ, ದಿಲದಾರ ರಬ್ಬಾನಿ ಶೇಖ (35), ಉದ್ಯೋಗ: ಪೊಲೀಸ್ ಹೆಡಕಾನ್ಸಟೇಬಲ್ ಕ್ರೆಂ ಬ್ರಾಂಚ್ ಯುನಿಟ್ ಸಾ: ಕೊನಾರ್ಕ ರೆಸಿಡೆನ್ಸಿ ಮಧುಬನ್ ವಸ್ಯೆ ಪೂರ್ವ ತಾ: ವಸೈ ಜಿ:ಫಾಲ್ಗರ ಮಹಾರಾಷ್ಟ್ರ ಮೆಹಬೂಬ ರಫೀಕ ದೇಸಾಯಿ ಇವರನ್ನು ಬಂಧಿಸಲಾಗಿದೆ.  

   ಇವರು ಜನರಿಗೆ 1ಕ್ಕೆ 4 ಪಟ್ಟು ಹಣ ತಯಾರಿಸಿ (ಡಬ್ಲಿಂಗ್) ಕೊಡುತ್ತೇವೆಂದು ನಂಬಿಸಿ ಜನರಿಂದಾ ಅಸಲಿ ಹಣ ಪಡೆದುದುಕೊಂಡು ಅವರಿಗೆ ಕೆಮಿಕಲ್ ಮೂಲಕ ಹಣ ತಯಾರಿಸಿ ಕೊಡುತ್ತೇವೆಂದು ನಂಬಿಸಿ 500 ನೋಟಿಗೆ ಹಾಗೂ ಬಿಳಿ ಖಾಲಿ ಹಾಳೆಗಳಗೆ ಕಪ್ಪು ಬಣ್ಣ ಹಚ್ಚಿ ಅದನ್ನು ಮಷೀನದಲ್ಲಿ ಪ್ರೇಸದಿಂದಾ ಬಿಸಿ ಮಾಡಿ ಸ್ವಲ್ಪ ಸಮಯದ ನಂತರ 500 ರೂ ನೋಟನ್ನು ಬಿಳಿ ಪೌಡರದಿಂದಾ ತೊಳೆದು ಉಳಿದ ಖಾಲಿ ಹಾಳೆಗಳನ್ನು ಮನೆಯಲ್ಲಿ ತೊಳೆದುಕೊಳ್ಳಿ ಅಂತಾ ಹೇಳಿ ಎಲ್ಲ ಹಣವನ್ನು ಜನರಿಂದಾ ಇಸಿದುಕೊಂಡು ಕಪ್ಪು ಬಣ್ಣ ಹಚ್ಚಿದ ಹಾಳೆಗಳಿರುವ ಬಂಡಲಗಳನ್ನು ಜನರಿಗೆ ಕೊಡುವ ಉದ್ದೇಶದಿಂದಾ ಸೇರಿದ್ದರು. 

   ಅಲ್ಲದೆ ಅವರ ವಶದಲ್ಲಿಂದಾ ಬಿಸಿ ಮಾಡುವ ಮಷೀನ, ಎನ್ವಲಪ್ದಲ್ಲಿ ಬಿಳಿ ಹಾಳೆಗಳರುವ ಬ್ಯಾಗ, ಕಪ್ಪು ಬಣ್ಣದ ಬಾಟಲುಗಳಿರುವ ಬ್ಯಾಗ್, ಟಿಕ್ಸö್ಗಳಿರುವ ಬಾಕ್ಸ್, ಅಸಲಿ 04 ನೋಟು, ಆರೋಪಿತರ ವಶದಲ್ಲಿಂದಾ ಒಟ್ಟು 08 ಮೊಬೈಲ್ ಮತ್ತು ಒಟ್ಟು 2,520 ರೂ ಹಣವನ್ನು ಜಪ್ತ ಮಾಡಿ ಅವರ ಮೇಲೆ ಗೋಕಾಕ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 91/2026 ಕಲಂ: 318(2)ಬಿಎನ್‌ಎಸ್‌ಕೆ ಪ್ರಕರಣ ದಾಖಲಿಸಿ 7 ಜನರಿಗೆ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.

   ನಿಖಿಲ ಕಾಂಬಳೆ ಪಿಎಸ್‌ಐ ಇವರು ತನಿಖೆಯನ್ನು ಮುಂದುವರೆಸಿರುತ್ತಾರೆ. ಸದರಿ ಪ್ರಕರಣದಲ್ಲಿ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾದ ಸುರೇಶಬಾಬು ಆರ್.ಬಿ ಸಿಪಿಐ ಗೋಕಾಕ. ಗೋಕಾಕ ಶಹರ ಠಾಣೆಯ ಪಿಎಸ್‌ಐ ಕಿರಣ ಮೋಹಿತೆ ಹಾಗೂ ಸಿಬ್ಬಂದಿ ಜನರಾದ ರ‍್ಬಿ. ಹಡಪದೆ ಎ.ಎಸ್.ಐ., ಕೆ.ಎನ್.ಇಆಗೇರ, ಜೆ.ಎಚ್.ಗುಡ್ಲಿ, ಪಿ.ಎಮ್.ಗಸ್ತಿ, ಮಂಜುನಾಥ ಹುಚ್ಚಗೌಡರ, ಐ.ವಿ.ಘಂಟಿ, ಶ್ರೀಮತಿ ಎ.ಎ.ಶೇಡಬಾಳೆ, ಎಮ್.ಆರ್.ಅಂಬಿ, ಮಂಜುನಾಥ ನಾಯಿಕ, ಎಸ್.ಎಮ್.ಮಂಗಿ, ಇವರ ಕಾರ್ಯವನ್ನು ಎಸ್‌ಪಿ ಅವರು ಶ್ಲಾಘಿಸಿರುತ್ತಾರೆ.