ರೈತರೊಂದಿಗೆ ಚರ್ಚೆ ಸರಕಾರದ ವಿರುದ್ಧ ಪ್ರತಿಭಟನೆ : ಶಾಸಕ- ಸಚಿವರ ವಿರುದ್ಧ ಆಕ್ರೋಶ
Protest against government after discussion with farmers: Outrage against MLAs and ministers
ಕೊಪ್ಪಳ 18: ತಾಲೂಕಿನ ಮುನಿರಾಬಾದ ಸಮೀಪದ ಬಸಾಪುರ ಹಾಗೂ ಬಂಡಿ ಹರ್ಲಾಪುರ ಗ್ರಾಮಗಳ ನಡುವಿನ 13ನೇ ಮೈಲಿಯ ವ್ಯಾಪ್ತಿಯ ತುಂಗಭದ್ರಾಎಡದಂಡೆ ಮುಖ್ಯ ಕಾಲುವೆ ಒಡೆದ ಸ್ಥಳಕ್ಕೆ ಬುಧವಾರ ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಸೇರಿ ಬಿಜೆಪಿ ಮುಖಂಡರು ಭೇಟಿ ನೀಡಿ ಪರೀಶೀಲಿಸಿದರು.ಕಾಲುವೆಯಿಂದ ಅಪಾರ ಪ್ರಮಾಣದ ನೀರು ನದಿ ಪಾತ್ರಕ್ಕೆ ಹರಿದು ವ್ಯರ್ಥವಾಗಿದ್ದಲ್ಲದೇ ರೈತರ ಬೆಳೆ ಹಾಳಾಗಿರುವುದನ್ನು ನೋಡಿ ಮಮ್ಮಲ ಮರಗಿದರು.
ಅಲ್ಲದೆ, ಕಾಲುವೆ ಆಧುನೀಕರಣ ಮಾಡದ ಸರಕಾರದ ನಿರ್ಧಾರ ಖಂಡಿಸಿದರು.ಈ ವಿಚಾರದಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಸಚಿವ, ಶಿವರಾಜ್ ತಂಗಡಗಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ.ಸಕಾಲಕ್ಕೆ ಎಚ್ಚೇತ್ತುಕೊಂಡು ಕಾಲುವೆ ಕಾಮಗಾರಿ ಆಧುನೀಕರಣ ಮುಗಿಸಿದ್ದರೇ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ರೈತರೊಂದಿಗೆ ಸೇರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ತುಂಗಭದ್ರಾ ಜಲಾಶಯದಿಂದ ದಿಢೀರನೇ ನೀರಿನ ಹರಿವನ್ನು 200 ಕ್ಯೂಸೆಕ್ ದಿಂದ 2000 ಕ್ಯೂಸೆಕ್ ಗೆ ಹೆಚ್ಚಿಸಿದರ ಪರಿಣಾಮ ಈ ಸಮಸ್ಯೆ ಅನುಭವಿಸಿದೆ.ಕಳೆದ ಮೂರು ತಿಂಗಳುಗಳ ಹಿಂದೆಯೇ ಎಡದಂಡೆ ಕಾಲುವೆಯಲ್ಲಿ ರಂದ್ರ ಬಿದ್ದಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿ ಸರಿಪಡಿಸಲು ಅಗ್ರಹಿಸಿದ್ದರು.ಆದರೆ, ಕಾಳಜಿ ವಹಿಸಬೇಕಾದ ಅಧಿಕಾರಿಗಳು ಕೂಡ ಈ ಸಮಸ್ಯೆಯ ಬಗ್ಗೆ ನಿರ್ಲಕ್ಷತೋರಿಸಿದರ ಪರಿಣಾಮ ಕಾಲುವೆ ಒಡೆದು ನೀರು ವ್ಯರ್ಥವಾಗುತ್ತಿದೆ.
ಬೇಸಿಗೆ ಹಿನ್ನಲೆಯಲ್ಲಿ ಕೊಪ್ಪಳ ಹಾಗೂ ರಾಯಚೂರು ನಗರ ಪ್ರದೇಶಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮತ್ತು ಕೆರೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕಾಲುವೆಗೆ ನೀರು ಹರಿಸಲಾಗುತ್ತಿತ್ತು.ಆದರೆ, ಕಾಲುವೆ ಒಡೆದಿರುವ ಪರಿಣಾಮದಿಂದ ಎರಡು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಕಷ್ಟ ಹೆಚ್ಚಾಗಿದೆ. ಹಾಗೂ ಕಾಲುವೆಯಿಂದ ಪೋಲಾಗುತ್ತಿರುವ ನೀರಿನಿಂದ ಅಕ್ಕ ಪಕ್ಕದ ಬೆಳೆಗಳಿಗೂ ಕೂಡ ನಷ್ಟವಾಗಿದ್ದು, ಇಲ್ಲಿಯ ರೈತರು ಕೂಡ ನಷ್ಟ ಅನುಭವಿಸುವಂತಾಗಿದೆ.
ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವ ಕೆಲಸ ಮಾಡಬೇಕಿದೆ ಹಾಗೂ ಈ ಸಮಸ್ಯೆಯನ್ನು ಬೇಗ ಸರಿಪಡಿಸಬೇಕೆಂದು ಒತ್ತಾಯಿಸಿದರು.ಕಳೆದ ವರ್ಷ ತುಂಗಭದ್ರಾ ಡ್ಯಾಮ್ ನ 19ನೇ ಕ್ರೆಸ್ಟ್ ಗೇಟ್ ಮುರಿದು ರೈತರ ಎರಡನೇ ಬೆಳೆಗೆ ನೀರು ಸಿಗದಂತಾಗಿತ್ತು.ಇದೀಗ ಕಾಲುವೆ ಒಡೆದು ನೀರು ವ್ಯರ್ಥವಾಗುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರಾಜ್ಯ ಕಾಂಗ್ರೆಸ್ ಸರಕಾರ ಮೊದಲಿಂದಲೂ ತುಂಗಭದ್ರಾ ಎಂದರೇ ತುಂಬಾ ನಿರ್ಲಕ್ಷ ತೋರಿಸುತ್ತಿರುವುದು ನಮಗೆಲ್ಲ ತಿಳಿದಿರುವ ಸಂಗತಿಯಾಗಿದೆ.ಇದೇ ಸಂಧರ್ಭದಲ್ಲಿ ಈ ಘಟನೆ ರಾಜ್ಯ ಸರಕಾರದ ನಿರ್ಲಕ್ಷಕ್ಕೆ ಮತ್ತೊಂದು ನಿದರ್ಶನವಾಗಿದೆ ಎಂದು ಕ್ಯಾವಟರ್ ಅವರು ಸರಕಾರದ ಆಡಳಿತ ವೈಫಲ್ಯ ವಿರುದ್ಧ ಕಿಡಿಕಾರಿದರು.ಈ ಸಂಧರ್ಭದಲ್ಲಿ ಮುಖಂಡರಾದ ಮಹಾಂತೇಶ್ ಪಾಟೀಲ್ ಮೈನಳ್ಳಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಅಮರೇಶ ಮುರುಳಿ, ಪ್ರದೀಪ್ ಹಿಟ್ನಾಳ್, ಪ್ರಭುಗೌಡ ಹುಲಿಗಿ, ಗಣೇಶ ಹೊರತಟ್ನಾಳ್, ವಸಂತ ನಾಯಕ್, ರವಿ ಹೊಸಳ್ಳಿ, ಹನುಮಂತಪ್ಪ ಹುಲಿಗಿ, ಹೈದರ್ ಅಲಿ, ನರಸಿಂಹಲ್ಲು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 