ರಸ್ತೆ ಅತಿಕ್ರಮಿಸಿ ಗೂಡಂಗಡಿ : ತೆರವು ಕಾರ್ಯಾಚರಣೆ ಮಾಡಿದ ನಗರಸಭೆ
A stall encroaching on the road: The municipal council carried out an evacuation operation.
ಕಾರವಾರ 18 : ರಸ್ತೆ ಮೇಲೆ ಅತಿಕ್ರಮಣ ಮಾಡಿದ್ದ ಗೂಡಂಗಡಿ ತೆರವಿಗೆ ಕಾರವಾರ ನಗರಸಭೆ ಬುಧುವಾರ ಕಾರ್ಯಾಚರಣೆ ನಡೆಸಿತು.ಕಾರವಾರ ನಗರಸಭೆ ಸಿಬ್ಬಂದಿಗಳು ಅನಧಿಕೃತ ಗೂಡಂಗಡಿಗಳನ್ನು ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಮಾಡಿದರು.ನಗರದ ಮಹಾತ್ಮಾಗಾಂಧಿ ರಸ್ತೆಯಲ್ಲಿ ಪಾದಚಾರಿಗಳು ಓಡಾಡುವ ಜಾಗ ಅತಿಕ್ರಮಿಸಿ ಗೂಡಂಗಡಿ ವ್ಯಾಪಾರಿ ವಸ್ತುಗಳನ್ನು ಇಟ್ಟುಕೊಂಡು ಅಂಗಡಿ, ಶೆಡ್ ತೆರೆದು ಕೆಲವರು ವ್ಯಾಪಾರ ಮಾಡುತ್ತಿದ್ದರು.
ಗೂಡಂಗಡಿಯಲ್ಲಿದ್ದ ಫ್ರಿಡ್ಜ್ ಮತ್ತು ಇನ್ನಿತರೆ ಸಾಮಾಗ್ರಿ ವಸ್ತುಗಳನ್ನು ನಗರಸಭೆ ವಾಹನ ತುಂಬಿಕೊಂಡು ಹೋಯಿತು.ಆಡಳಿತಾಧಿಕಾರಿ ಅವಧಿಯಲ್ಲಿ ನಗರಸಭೆ ಸಿಬ್ಬಂದಿ ಪ್ರಾಮಾಣಿಕ ಕಾರ್ಯಾಚರಣೆಗೆ ಜೆಸಿಬಿಗಳನ್ನು ಬಳಸಿ ಅತಿಕ್ರಮಣ ತೆರವು ಮಾಡಿತು.
ಕಾರವಾರ ನಗರದ ಪಿಕಳೆ ರಸ್ತೆ, ಎಂ.ಜಿ . ರಸ್ತೆಯಲ್ಲಿ ಸೇರಿದಂತೆ ಹಲವೆಡೆ ಕಾರ್ಯಾಚರಣೆ ಮುಂದುವರಿದಿದೆ. ಗೂಡಂಗಡಿಕಾರರು ವಿರೋಧ ಮಾಡುತ್ತಾರೆಂದು ಬುಧುವಾರ ಬೆಳಿಗ್ಗೆಯೇ ಕಾರ್ಯಾಚರಣೆಗೆ ನಗರಸಭೆ ಮುಂದಾಯಿತು .
ನಗರದ ಹಲವು ಭಾಗದಲ್ಲಿ ಬೀದಿ ವ್ಯಾಪಾರಿಗಳು ರಸ್ತೆ,ಪುಟ್ ಬಾತ್ ಗಳನ್ನ ಅತಿಕ್ರಮಣ ಮಾಡಿ ಗೂಡಂಗಡಿಗಳನ್ನ ಇಟ್ಟಿದ್ದರು. ಅಲ್ಲದೇ ಪುಟ್ ಪಾತ್,ಪಾರ್ಕಿಂಗ್ ಜಾಗ ಸಹ ಗೂಡಂಗಡಿಗಳ ಅತಿಕ್ರಮಣದಿಂದ ತುಂಬಿ ಹೋಗಿತ್ತು.
ಈ ಕುರಿತು ಅನೇಕ ದೂರು ಬಂದ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಯಾದ ಎಮ್.ಜಿ ರಸ್ತೆ, ಪಿಕಳೆ ರೋಡ್ ಸೇರಿದಂತೆ ,ವಾಹನ ಓಡಾಟ ಹೆಚ್ಚಿರುವ ಹಾಗೂ ಜನ ನಿಬಿಡ ರಸ್ತೆಯಲ್ಲಿದ್ದ ಬೀದಿವ್ಯಾಪಾರಿಗಳ ಅತಿಕ್ರಮಣ ಅಂಗಡಿಗಳನ್ನು ತೆರವು ಮಾಡಲಾಯಿತು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 