ಬೆಂಗಳೂರು,
ಏ ೨೦,ಬೆಂಗಳೂರು ನಗರದ ಪಾದರಾಯನಪುರದಲ್ಲಿ ಕ್ವಾರಂಟೈನ್ ಆದವರ
ಪರಿಶೀಲನೆಗೆ ತೆರಳಿದ್ದ ಕರ್ತವ್ಯ ನಿರತ ಪೊಲೀಸ್ ಹಾಗು ಅರೋಗ್ಯ ಸಿಬ್ಬಂದಿ ಮೇಲೆ
ನಡೆದಿರುವ ಹಲ್ಲೆಯನ್ನು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವ ಡಿ.ವಿ.
ಸದಾನಂದ ಗೌಡ ತೀವ್ರವಾಗಿ ಖಂಡಿಸಿದ್ದಾರೆ.ಇದೊಂದು ಹೀನ ಅಪರಾಧವಾಗಿದ್ದು, ಈ
ಕೃತ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ದ ಹಾಗೂ ಅವರನ್ನು ಇಂತಹ ಕೃತ್ಯ ನಡೆಸಲು
ಪ್ರಚೋದಿಸುತ್ತಿರುವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್
ನಲ್ಲಿ ಸಲಹೆ ನೀಡಿದ್ದಾರೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಸರ್ಕಾರಿ
ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿಯಂತ್ರಣ
ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗುವುದು ಎಂದು ಪಶ್ಚಿಮ ವಲಯ ಡಿಸಿಪಿ
ರಮೇಶ್ ಹೇಳಿದ್ದಾರೆ.ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಈ
ಪ್ರದೇಶದಲ್ಲಿ ೫೮ ಮಂದಿಗೆ ಕ್ವಾರಂಟೈನ್ ಮಾಡಲಾಗಿತ್ತು. ಎರಡನೇ ಸಂಪರ್ಕಿತ ಕೊರೊನಾ
ಶಂಕಿತರನ್ನು ಕರೆದೊಯ್ಯಲು ಈ ಪ್ರದೇಶಕ್ಕೆ ಆಶಾ ಕಾರ್ಯಕರ್ತೆಯರು, ವೈದ್ಯಕೀಯ
ಸಿಬ್ಬಂದಿಗಳು ಹಾಗೂ ಪೊಲೀಸರು ತೆರಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಸ್ಥಳೀಯರು
ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದರು. ಸೀಲ್ ಡೌನ್ ಮಾಡಿ
ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆಗಳನ್ನು ದ್ವಂಸಗೊಳಿಸಿದ್ದಾರೆ. ಪೋಲೀಸ್
ಬ್ಯಾರಿಕೇಡ್ ಉರುಳಿಸಿ ದಾಂದಲೆ ನಡೆಸಿರುವ ದೃಶ್ಯಗಳು ನಡೆದಿದ್ದವು.