ಬೆಂಗಳೂರು, ಏ.29, ವರುಣನ ಆರ್ಭಟಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದೆ.ಒಂದೇ ಸ್ಥಳದಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ವರದಿ ಆಗಿಲ್ಲ.ನಾಗವಾರ-ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಎರಡು ಅಪಘಾತಗಳು ಸಂಭವಿಸಿದೆ.ಪೊಲೀಸ್ ಜೀಪ್ ಒಂದು ಟೈರ್ ಬ್ಲಾಸ್ಟ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದರೆ, ಮತ್ತೊಂದೆಡೆ ಕ್ಯಾಂಟರ್ ಚಾಲಕ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.ಸದ್ಯ ಪೊಲೀಸ್ ಸಿಬ್ಬಂದಿ ಲಾಕ್ ಡೌನ್ ಕರ್ತವ್ಯದಲ್ಲಿ ನಿರತಯಾಗಿರುವುದರಿಂದ ಇನ್ನು ತೆರವು ಕಾರ್ಯ ಆರಂಭವಾಗಬೇಕಿದೆ.