ಬೆಂಗಳೂರು,
ಏ.19, ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ನಡುವೆ ನಗರದ ಖಾಲಿ ರಸ್ತೆಯಲ್ಲಿ
ಯುವತಿಯರು ಎರ್ರಾ ಬಿರ್ರಿ ಕಾರು ಚಾಲನೆ ಮಾಡುವ ಮೂಲಕ ಪುಂಡಾಟ ಮೆರೆದಿದ್ದಾರೆ ಎಂಬ
ಆರೋಪ ಕೇಳಿ ಬಂದಿದೆ.ಅಡ್ಡಾ ದಿಡ್ಡಿ ಕಾರು ಚಾಲನೆ ಮಾಡುತ್ತಿದ್ದ ಯುವತಿಯರನ್ನು
ಕಂಡು ಜೆ.ಬಿ. ನಗರ ಪೊಲೀಸರೇ ದಂಗಾಗಿದ್ದು, 1 ಕಿ. ಮೀ ದೂರ ಚೇಸ್ ಮಾಡಿ
ತಡೆದಿದ್ದಾರೆ.ನಗರದ ಲೀಲಾ ಪ್ಯಾಲೇಸ್ ಚೆಕ್ ಪೋಸ್ಟ್ ಬಳಿ ಪೊಲೀಸರು ಯುವತಿಯರನ್ನು
ತಡೆದಿದ್ದಾರೆ.ಈ ವೇಳೆ ಯುವತಿಯೋರ್ವಳು, ತಮ್ಮ ಬಳಿ ಪಾಸ್ ಇದೆ. ಅಲ್ಲದೇ, ತಮಗೆ
ಮೇಲಾಧಿಕಾರಿಗಳು ಗೊತ್ತು ಎಂದು ಹೇಳುವ ಮೂಲಕ ಪೊಲೀಸ್ ಜೀಪ್ ಹತ್ತದೇ ವಾಗ್ವಾದ ಮಾಡಿ,
ಸಾಧ್ಯವಾದರೆ ಹಿಡಿಯಿರಿ ಎಂದು ಇನ್ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ
ಪರಾರಿಯಾಗಿದ್ದಾರೆ.ಕಾರಿನಲ್ಲಿ ಇಬ್ಬರೂ ಯುವತಿಯರಿದ್ದರು ಅವರು,ಮದ್ಯ ಸೇವನೆ ಮಾಡಿದ್ದರು
ಎನ್ನಲಾಗಿದೆ.ಸದ್ಯ ಪೊಲೀಸರು ಯುವತಿಯರಿಗಾಗಿ ಬಲೆ ಬೀಸಿದ್ದಾರೆ.