ಗರಿಷ್ಠ ವಿಮಾ ರಕ್ಷೆ ನೀಡುವ ಅಂಚೆ ಕಚೇರಿ ವಿಮಾ ಯೋಜನೆ

Post Office Insurance Plan that offers maximum insurance coverage

ಕಾರವಾರ 17: ಖಾಸಗಿ ವಿಮಾ ಸಂಸ್ಥೆಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ  ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಗರಿಷ್ಠ ವಿಮಾ ರಕ್ಷೆಯ ಸೌಲಭ್ಯ ಸೇರಿದಂತೆ ಹಲವು ರಕ್ಷಣಾ ಸೌಲಭ್ಯಗಳನ್ನು ಒದಗಿಸುವ ವಿಮಾ ಯೋಜನೆಯು ಅಂಚೆ ಕಚೇರಿಯಲ್ಲಿದ್ದು, ಈ ಸೌಲಭ್ಯದ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಇಲ್ಲದಾಗಿದೆ.. 

ಅಂಚೆ ಕಚೇರಿಯ ಗ್ರೂಫ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯು ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ವರ್ಗದ ಜನರಿಗೆ ಅತ್ಯಂತ ಗರಿಷ್ಠ ವಿಮಾ ರಕ್ಷಣೆಯನ್ನು ನೀಡಲಿದೆ. 5 ಲಕ್ಷ, 10 ಲಕ್ಷ ಮತ್ತು 15 ಲಕ್ಷದ ಮೊತ್ತದ ವಿಮಾ ಪಾಲಿಸಿಗಳು ಲಭ್ಯವಿದ್ದು, ಈ ಯೋಜನೆಗೆ ಕ್ರಮವಾಗಿ ರೂ.320, 559 ಮತ್ತು 799 ವಾರ್ಷಿಕ ವೆಚ್ಚವಾಗಲಿದೆ. 

ರೂ.320 ರ ವಿಮಾ ಪಾಲಿಸಿ ಪಡೆದಲ್ಲಿ ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ಪೂರ್ಣ ಅಂಗ ವಿಕಲರಾದಲ್ಲಿ ಅಥವಾ ಶಾಶ್ವತ ಭಾಗಶ: ಅಂಗವಿಕಲರಾದಲ್ಲಿ ರೂ. 5 ಲಕ್ಷರೂ ನೆರವು ದೊರೆಯಲಿದ್ದು, ಇದಲ್ಲದೇ ಆಸ್ಪತ್ರೆಗೆ ದಾಖಲಿಸುವ ಅಂಬುಲೆನ್ಸ್‌ ವೆಚ್ಚವಾಗಿ  ರೂ.7000, ಸಂಬಂದಿಗಳು ಆಸ್ಪತ್ರೆಗೆ ಆಗಮಿಸಲು ತಗುಲುವ ವೆಚ್ಚವಾಗಿ ರೂ.7000, ರಕ್ತ ಖರೀದಿಗೆ ರೂ.7000, ಅಗತ್ಯ ಓಷಧಗಳನ್ನು ಆಮದು ಮಾಡಿಕೊಳ್ಳಲು ಸಾರಿಗೆ ವೆಚ್ಚ ರೂ.10000 ಹಾಗೂ ಮನೆಯಲ್ಲಿ ಚಿಕಿತ್ಸೆಗಾಗಿ ಕೊಠಡಿಯನ್ನು ಮಾರ​‍್ಾಡುಮಾಡಿಕೊಳ್ಳಲು ರೂ.7000, ಇತರೆ ವೆಚ್ಚ ರೂ.10000, ವಿದ್ಯಾಭ್ಯಾಸ ನೆರವು ರೂ.20000,  ಮನೆಯಲ್ಲಿ ಚೇತರಿಕೆ ವೆಚ್ಚವಾಗಿ ರೂ.10000, ಆಸ್ಪತ್ರೆಯಲ್ಲಿ ದಾಖಲಾದರೆ ಪ್ರತಿದಿನಕ್ಕೆ ರೂ.1000 ದಂತೆ ಗರಿಷ್ಠ 60 ದಿನಗಳ ವೆರೆಗೆ ನೆರವು ಮತ್ತು ಮೃತಪಟ್ಟಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ರೂ.5000 ಕೂಡಾ ದೊರೆಯಲಿದೆ.  

ರೂ.559 ರ ವಿಮಾ ಪಾಲಿಸಿ ಪಡೆದಲ್ಲಿ ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ಪೂರ್ಣ ಅಂಗ ವಿಕಲರಾದಲ್ಲಿ ಅಥವಾ ಶಾಶ್ವತ ಭಾಗಶ: ಅಂಗವಿಕಲರಾದಲ್ಲಿ ರೂ. 10 ಲಕ್ಷರೂ ನೆರವು ದೊರೆಯಲಿದ್ದು, ಇದಲ್ಲದೇ ಆಸ್ಪತ್ರೆಗೆ ದಾಖಲಿಸುವ ಅಂಬುಲೆನ್ಸ್‌ ವೆಚ್ಚ ರೂ.9000, ಸಂಬಂದಿಗಳು ಆಸ್ಪತ್ರೆಗೆ ಆಗಮಿಸಲು ತಗುಲುವ ವೆಚ್ಚವಾಗಿ ರೂ.9000, ರಕ್ತ ಖರೀದಿಗೆ ರೂ.9000, ಅಗತ್ಯ ಓಷಧಗಳನ್ನು ಆಮದು ಮಾಡಿಕೊಳ್ಳಲು ಸಾರಿಗೆ ವೆಚ್ಚ ರೂ.12000 ಹಾಗೂ ಮನೆಯಲ್ಲಿ ಚಿಕಿತ್ಸೆಗಾಗಿ ಕೊಠಡಿಯನ್ನು ಮಾರ​‍್ಾಡು ಮಾಡಿಕೊಳ್ಳಲು ರೂ.9000 ಗಳ ನೆರವು ಕೂಡಾ ದೊರೆಯಲಿದೆ. ವೈದ್ಯಕೀಯ ವೆಚ್ಚವಾಗಿ ರೂ.75000, ಇತರೆ ವೆಚ್ಚ ರೂ.12000, ವಿದ್ಯಾಭ್ಯಾಸ ನೆರವು ರೂ.50000, ಮನೆಯಲ್ಲಿ ಚೇತರಿಕೆ ವೆಚ್ಚವಾಗಿ ರೂ.5000, ಆಸ್ಪತ್ರೆಯಲ್ಲಿ ದಾಖಲಾದರೆ ಪ್ರತಿದಿನ ಕ್ಕೆ ರೂ.1000 ದಂತೆ ಗರಿಷ್ಠ 60 ದಿನಗಳ ವೆರೆಗೆ ನೆರವು ಮತ್ತು ಮೃತಪಟ್ಟಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ರೂ.7000 ಕೂಡಾ ದೊರೆಯಲಿದೆ. 

ರೂ.799 ರ ವಿಮಾ ಪಾಲಿಸಿ ಪಡೆದಲ್ಲಿ ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ಪೂರ್ಣ ಅಂಗ ವಿಕಲರಾದಲ್ಲಿ ಅಥವಾ ಶಾಶ್ವತ ಭಾಗಶ: ಅಂಗವಿಕಲರಾದಲ್ಲಿ ರೂ. 15 ಲಕ್ಷರೂ ನೆರವು ದೊರೆಯಲಿದ್ದು, ಇದಲ್ಲದೇ ಆಸ್ಪತ್ರೆಗೆ ದಾಖಲಿಸುವ ಅಂಬುಲೆನ್ಸ್‌ ವೆಚ್ಚ  ರೂ.11000, ಸಂಬಂದಿಗಳು ಆಸ್ಪತ್ರೆಗೆ ಆಗಮಿಸಲು ತಗುಲುವ ವೆಚ್ಚವಾಗಿ ರೂ.11000, ರಕ್ತ ಖರೀದಿಗೆ ರೂ.11000, ಅಗತ್ಯ ಓಷಧಗಳನ್ನು ಆಮದು ಮಾಡಿಕೊಳ್ಳಲು ಸಾರಿಗೆ ವೆಚ್ಚ ರೂ.14000 ಹಾಗೂ ಮನೆಯಲ್ಲಿ ಚಿಕಿತ್ಸೆಗಾಗಿ ಕೊಠಡಿಯನ್ನು ಮಾರ​‍್ಾಡುಮಾಡಿಕೊಳ್ಳಲು ರೂ.9000 ಗಳ ನೆರವು ಕೂಡಾ ದೊರೆಯಲಿದೆ. ವೈದ್ಯಕೀಯ ವೆಚ್ಚವಾಗಿ ರೂ.100000, ಇತರೆ ವೆಚ್ಚ ರೂ.14000, ವಿದ್ಯಾಭ್ಯಾಸ ನೆರವು ರೂ.50000, ಮನೆಯಲ್ಲಿ ಚೇತರಿಕೆ ವೆಚ್ಚವಾಗಿ ರೂ.7000, ಆಸ್ಪತ್ರೆಯಲ್ಲಿ ದಾಖಲಾದರೆ ಪ್ರತಿದಿನಕ್ಕೆ ರೂ.1000 ದಂತೆ ಗರಿಷ್ಠ 60 ದಿನಗಳ ವೆರೆಗೆ ನೆರವ ಮತ್ತು ಮೃತಪಟ್ಟಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ರೂ.9000 ಕೂಡಾ ದೊರೆಯಲಿದೆ. 

ಅಂಚೆ ಕಚೇರಿಯಲ್ಲಿನ ಈ ವಿಮಾ ಯೋಜನೆಯನ್ನು ಅಂಚೆ ಕಚೇರಿಯ ಗ್ರಾಹಕರಿಗೆ ಮಾತ್ರ ಒದಗಿಸಲಾಗುತ್ತಿದ್ದು, ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದು ಸಾರ್ವಜನಿಕರು ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದ್ದು, ಅತ್ಯಂತ ಕಡಿಮೆ ಮೊತ್ತದಲ್ಲಿ ದೊರೆಯುವ ಈ ವಿಮಾ ಯೋಜನೆಯು 2024 ರಲ್ಲಿ  ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೆ ಸುಮಾರು 10,000 ಮಂದಿ ಈ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ವಿಮೆ ಪಡೆದು ಅಪಘಾತದಲ್ಲಿ ಮೃತಪಟ್ಟ 8 ಮಂದಿಯ ವಾರಿಸುದಾರರಿಗೆ ರೂ.10 ಲಕ್ಷಗಳಂತೆ ವಿಮಾ ಪರಿಹಾರ ಮೊತ್ತವನ್ನು ನೀಡಿದ್ದು, ಅಪಘಾತದಲ್ಲಿ ಗಾಯಗೊಂಡ 50 ಮಂದಿಗೆ ರೂ.20 ಲಕ್ಷಕ್ಕೂ ಅಧಿಕ ಮೊತ್ತ ನೀಡಲಾಗಿದೆ. : ಜೋಸ್ ಕುಮಾರ್, ಸೀನಿಯರ್ ಮೆನೇಜರ್, ಇಂಡಿಯಾ ಪೋಸ್ಟ್‌ ಪೇಮೆಂಟ್ ಬ್ಯಾಂಕ್, ಕಾರವಾರ.